15 ವರ್ಷಗಳ ಹಿಂದೆ ಕೇವಲ 100 ರೂಪಾಯಿ ಹೂಡಿಕೆ ಮಾಡಿದ್ರೆ ನಿಮಗೆ ಈಗ 23 ಕೋಟಿ ಸಿಗ್ತಿತ್ತು. ಇದು ಕನಸಲ್ಲ. ಆದಾಯದಲ್ಲಿ ಗೋಲ್ಡ್, ಷೇರು, ಮ್ಯೂಚುವಲ್ ಫಂಡ್ ಹಿಂದಿಕ್ಕಿರುವ ಈ ಪ್ಲಾನ್ ಸದ್ಯ ಪ್ರಸಿದ್ಧಿ ಪಡೆಯುತ್ತಿದೆ. 

ಹತ್ತಾರು ವರ್ಷಗಳ ಹಿಂದೆಯೇ ಆಸ್ತಿ ಖರೀದಿ ಮಾಡಿದ್ರೆ, ಚಿನ್ನ ಖರೀದಿ ಮಾಡಿದ್ರೆ ಅದೀಗ ಕೋಟಿ ಬೆಲೆ ಬಾಳ್ತಿತ್ತು. ತಪ್ಪು ಮಾಡ್ಬಿಟ್ವಿ ಅಂತ ಹಿರಿಯರು ಹೇಳ್ತಿರ್ತಾರೆ. ಭಾರತದಲ್ಲಿ ಚಿನ್ನ (Gold) ಕೇವಲ ಆಭರಣವಲ್ಲ. ಅದನ್ನು ಸುರಕ್ಷಿಯ ಹೂಡಿಕೆ (investment )ಎಂದೇ ನಂಬಲಾಗಿದೆ. ಭಾರತದಲ್ಲಿ ಚಿನ್ನದ ಜೊತೆ ಎಫ್ ಡಿ, ಅಂಚೆ ಕಚೇರಿ ಯೋಜನೆಗಳಂತಹ ಸಾಂಪ್ರದಾಯಿಕ ಹೂಡಿಕೆಗಳನ್ನು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಜನರು ಹೆಚ್ಚು ಆಸಕ್ತಿ ತೋರಿಸ್ತಾರೆ. ಇತ್ತೀಚಿನ ದಿನಗಳಲ್ಲಿ ಜನರ ಆಲೋಚನೆ ಬದಲಾಗಿದೆ. ಉತ್ತಮ ಆದಾಯದಿಂದಾಗಿ ಮ್ಯೂಚುವಲ್ ಫಂಡ್ಗಳು ಮತ್ತು ಷೇರು ಮಾರುಕಟ್ಟೆ ಜನಪ್ರಿಯತೆ ಗಳಿಸಿವೆ. ಆದ್ರೆ ಚಿನ್ನ, ಮ್ಯೂಚುವಲ್ ಫಂಡ್ ಗಿಂತ ಇದ್ರಲ್ಲಿ ಹೂಡಿಕೆ ಮಾಡಿದವರ ಅದೃಷ್ಟ ಬದಲಾಗಿದೆ. 15 ವರ್ಷಗಳ ಹಿಂದೆ 100 ರೂಪಾಯಿ ಹೂಡಿಕೆ ಮಾಡಿದ್ದವರು ಈಗ 23 ಕೋಟಿ ಆದಾಯ ಗಳಿಸಿದ್ದಾರೆ. ಅಷ್ಟಕ್ಕೂ ಆ ಹೂಡಿಕೆ ಯಾವ್ದು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

100 ಹೂಡಿಕೆ ಮಾಡಿ 23 ಲಕ್ಷ ಗಳಿಕೆ ! : ಈಗ ನಾವು ಹೇಳ್ತಿರೋ ಹೂಡಿಕೆ ಸಂಪೂರ್ಣ ಭಿನ್ನವಾಗಿದೆ. ಅದನ್ನು ಕಾನೂನುಬದ್ಧವೆಂದು ಪರಿಗಣಿಸಲಾಗೋದಿಲ್ಲ. ಅದು ಸುರಕ್ಷಿತವಲ್ಲ ಎಂದೇ ಜನರು ಭಾವಿಸ್ತಾರೆ. ಆದ್ರೆ ಆದಾಯದ ವಿಷ್ಯದಲ್ಲಿ ಇದು ಎಲ್ಲ ಹೂಡಿಕೆಯ ದಾಖಲೆ ಮುರಿದಿದೆ. ಅದೇ ಬಿಟ್ಕಾಯಿನ್. ಕೇವಲ 15 ವರ್ಷಗಳಲ್ಲಿ 100 ರೂಪಾಯಿ ಹೂಡಿಕೆಯನ್ನು 23 ಕೋಟಿಗಳಾಗಿ ಪರಿವರ್ತಿಸಿದ ಕ್ರಿಪ್ಟೋಕರೆನ್ಸಿ.

ಜುಲೈ 2010 ರಲ್ಲಿ, ಬಿಟ್ಕಾಯಿನ್ನ ಬೆಲೆ ಕೇವಲ $0.04865 ಆಗಿತ್ತು. ಇತ್ತೀಚೆಗೆ ಅದು ಸಾರ್ವಕಾಲಿಕ ಗರಿಷ್ಠ $111,861.22 ತಲುಪಿತ್ತು. ಅಂದ್ರೆ ಇಲ್ಲಿಯವರೆಗೆ ಇದು ಶೇಕಡಾ 23,00,00,000 ರಷ್ಟು ಸಾಟಿಯಿಲ್ಲದ ಬೆಳವಣಿಗೆಯನ್ನು ಕಂಡಿದೆ. 2010 ರಲ್ಲಿ ಹೂಡಿಕೆದಾರರು ಬಿಟ್ಕಾಯಿನ್ನಲ್ಲಿ ಕೇವಲ 100 ಹೂಡಿಕೆ ಮಾಡಿದ್ದರೆ, ಇಂದು ಅದರ ಮೌಲ್ಯ 23 ಕೋಟಿಗಳಷ್ಟಿರುತ್ತಿತ್ತು. 1,000 ಹೂಡಿಕೆ ಮಾಡಿದ್ದರ 230 ಕೋಟಿ ಆಗ್ತಿತ್ತು. ಅಪ್ಪಿತಪ್ಪಿ ನೀವು 1 ಲಕ್ಷ ಹೂಡಿಕೆ ಮಾಡಿದ್ರೆ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿರ್ತಾ ಇತ್ತು.

ಕ್ರಿಪ್ಟೋಕರೆನ್ಸಿ ಏರಿಕೆಗೆ ಕಾರಣ ಏನು? : ತಜ್ಞರ ಪ್ರಕಾರ, ಬಿಟ್ಕಾಯಿನ್ನಲ್ಲಿನ ಈ ಏರಿಕೆಗೆ ಹಲವು ಕಾರಣವಿದೆ. ಕ್ರಿಪ್ಟೋಕರೆನ್ಸಿ ನಿಯಂತ್ರಕ ಚೌಕಟ್ಟನ್ನು ಒದಗಿಸುವ ಮಸೂದೆಯನ್ನು ಯುಎಸ್ ಸೆನೆಟ್ ಇತ್ತೀಚೆಗೆ ಬೆಂಬಲಿಸಿದೆ. ಇದಲ್ಲದೆ, ದೊಡ್ಡ ಬ್ಯಾಂಕುಗಳು ಬಿಟ್ಕಾಯಿನ್ ಖರೀದಿಸುವ ಸೌಲಭ್ಯವನ್ನು ಒದಗಿಸುತ್ತಿವೆ. ಜೆಪಿ ಮಾರ್ಗನ್ ನಂತಹ ದೊಡ್ಡ ಬ್ಯಾಂಕುಗಳು ಈಗ ತಮ್ಮ ಗ್ರಾಹಕರಿಗೆ ಬಿಟ್ಕಾಯಿನ್ ಖರೀದಿಸಲು ಅವಕಾಶ ನೀಡುತ್ತಿವೆ. ಸ್ಪಾಟ್ ಬಿಟ್ಕಾಯಿನ್ ಇಟಿಎಫ್ಗೆ ಜನವರಿ 2024 ರಲ್ಲಿ ಯುಎಸ್ನಲ್ಲಿ ಅನುಮೋದನೆ ದೊರೆತಿದೆ. ಬ್ಲ್ಯಾಕ್ರಾಕ್, ಫಿಡೆಲಿಟಿಯಂತಹ ಹಣಕಾಸು ದೈತ್ಯರು ನೇರವಾಗಿ ಬಿಟ್ಕಾಯಿನ್ನಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಕಾರಣಗಳಿಂದಾಗಿ, ಬಿಟ್ಕಾಯಿನ್ನಲ್ಲಿ ಹೂಡಿಕೆದಾರರ ವಿಶ್ವಾಸ ಹೆಚ್ಚಿದೆ. ನಿರಂತರ ಬೇಡಿಕೆಯು ಅದರ ಬೆಲೆ ಏರಿಕೆಗೆ ಕಾರಣವಾಗಿದೆ.

ಬಿಟ್ಕಾಯಿನ್ (Bitcoin) ಶ್ವೇತಪತ್ರವನ್ನು 2008 ರಲ್ಲಿ ಪ್ರಕಟಿಸಲಾಗಿತ್ತು. ಜನವರಿ 2009 ರಲ್ಲಿ ಅದನ್ನು ಪ್ರಾರಂಭಿಸಲಾಯ್ತು. ಭಾರತದಲ್ಲಿ ಬಿಟ್ಕಾಯಿನ್ ಇತ್ತೀಚಿಗೆ ಪ್ರಸಿದ್ಧಿಗೆ ಬರ್ತಿದೆಯಾದ್ರೂ ಅದ್ರ ಮೇಲೆ ಜನರಿಗೆ ನಂಬಿಕೆ ಬಹಳ ಕಡಿಮೆ. 2010ರಲ್ಲಿ ಬಿಟ್ಕಾಯಿನ್ನ ಬೆಲೆ ಕೇವಲ 2.85 ರೂಪಾಯಿ ಆಗಿತ್ತು. ಈಗ ಭಾರತೀಯರೂ ಬಿಟ್ ಕಾಯಿನ್ ಖರೀದಿ ಮಾಡ್ಬಹುದು. ಈಗ ಒಂದು ಬಿಟ್ಕಾಯಿನ್ ಬೆಲೆ 9 ಲಕ್ಷದ ಮೇಲಿದೆ.