70 ಗಂಟೆ, 90 ಗಂಟೆ, 120 ಗಂಟೆ ಕೆಲಸದ ಕುರಿತು ದಿಗ್ಗಜರು ಸೂಚಿಸಿದ್ದಾರೆ. ಇದೀಗ ಬಿಲ್ ಗೇಟ್ಸ್ ಸರದಿ. ಶ್ರೀಮಂತನಾದ ಬಳಿಕವೂ ವಾರದಲ್ಲಿ 80 ಗಂಟೆ ಕೆಲಸ ಮಾಡಿದ್ದೇನೆ ಎಂದಿದ್ದಾರೆ. ಈ ಮಾತು ಇದೀಗ ಐಟಿ ಕೆಲಸದ ಸಮಯದಲ್ಲಿ ಮಹತ್ತರ ಬದಲಾವಣೆಗೆ ಮುನ್ನುಡಿಯಾಗುತ್ತಾ?
ನವದೆಹಲಿ(ಫೆ.10) ವಾರದಲ್ಲಿ ಎಷ್ಟು ಗಂಟೆ ಕೆಲಸ ಮಾಡಬೇಕು. ಕಳೆದ ಹಲವು ದಿನಗಳಿಂದ ಈ ಚರ್ಚೆ ನಡೆಯುತ್ತಿದೆ. ಇನ್ಪೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ವಾರದಲ್ಲಿ 70 ಗಂಟೆ ಅನಿವಾರ್ಯ ಎಂದಿದ್ದರು. ಎಲ್ ಆ್ಯಂಡ್ ಟಿ ಚೇರ್ಮೆನ್ ಎಸ್ಎನ್ ಸುಬ್ರಹ್ಮಣ್ಯನ್ ವಾರದಲ್ಲಿ 90 ಗಂಟೆ ಕೆಲಸ ಎಂದಿದ್ದರು. ಬಳಿಕ ಎಲಾನ್ ಮಸ್ಕ್ 120 ಗಂಟೆ ಕೆಲಸ ಅಗತ್ಯತೆ ಮಾತನಾಡಿದ್ದರು. ಇದೀಗ ಬಿಲ್ ಗೇಟ್ಸ್ ಸರದಿ. ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಇದೀಗ ವಾರದಲ್ಲಿ 80 ಗಂಟೆ ಕೆಲಸದ ಕುರಿತು ಮಾತನಾಡಿದ್ದಾರೆ. ಬಿಲ್ ಗೇಟ್ಸ್ ಕೆಲಸದ ಸಮಯದ ಕುರಿತು ಮಾತನಾಡುತ್ತಿದ್ದಂತೆ ಇದೀಗ ಕೆಲಸದ ಸಮಯದಲ್ಲಿ ಮಹತ್ತರ ಬದಲಾವಣೆಯಾಗುವ ಸಾಧ್ಯತೆಗಳು ಕೇಳಿಬರುತ್ತಿದೆ.
ಸದ್ಯ ಚರ್ಚೆಯಾಗುತ್ತಿರುವ ನಡುವೆ ಬಿಲ್ ಗೇಟ್ಸ್ CNBCಗೆ ನೀಡಿದ ಸಂದರ್ಶನದಲ್ಲಿ ಕೆಲಸದ ಸಮಯದ ಕುರಿತು ಮಾತನಾಡಿದ್ದಾರೆ. 1998ರ ವರೆಗೆ ಯಶಸ್ಸು ಸಿಕ್ಕಿರಲಿಲ್ಲ. ಹಲವು ಏಳು ಬೀಳುಗಳ ಮೂಲಕ ಬದುಕು ಸಾಗಿತ್ತು. ಆದರೆ ಕಠಿಣ ಪ್ರಯತ್ನದ ಫಲವಾಗಿ ಮೈಕ್ರೋಸಾಫ್ಟ್ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿತ್ತು. ಮೈಕ್ರೋಸಾಫ್ಟ್ ಕಟ್ಟಿ ಬೆಳೆಸಿದ ಕಾರಣ ಉತ್ತಮ ಸ್ಥಾನಮಾನ ಸಿಕ್ಕಿತ್ತು. ನಾನು ಶ್ರೀಮಂತನಾದ ಬಳಿಕವೂ ವಾರಕ್ಕೆ 80 ಗಂಟೆ ಕೆಲಸ ಮಾಡುತ್ತಿದ್ದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.
ಎಲಾನ್ ಮಸ್ಕ್ ಸೂಚನೆಯಿಂದ ನಾರಾಯಣ ಮೂರ್ತಿ, ಸುಬ್ರಹ್ಮಣ್ಯನ್ ಫುಲ್ ಖುಷ್; ಕಾರಣ 120
ಕೆಲಸದ ಸಮಯದ ಚರ್ಚೆ ಕುರಿತು ಬಿಲ್ ಕೂಡ ಮಾತನಾಡಿದ್ದಾರೆ. 80 ಗಂಟೆ ಕೆಲಸ ಅನಿವಾರ್ಯವಾಗಿತ್ತು ಎಂದಿದ್ದಾರೆ.ಒಬ್ಬರ ಹಿಂದೆ ಒಬ್ಬರು ಕೆಲಸದ ಸಮಯ ಹೆಚ್ಚಿಸುವ ಕುರಿತು ಮಾತನಾಡುತ್ತಿದ್ದಾರೆ. ಇದರ ಪರಿಣಾಮ ಇದೀಗ ಉದ್ಯೋಗಿಗಳ ಮೇಲೆ ತಟ್ಟುವ ಸಾಧ್ಯತೆ ಇದೆ. ಕಾರಣ ನಾರಾಯಣ ಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ವಿವಾದ ಸೃಷ್ಟಿಸಿದ್ದರು. ನಾರಾಯಣ ಮೂರ್ತಿ ಹಾಗೂ ಎಸ್ಎನ್ ಸುಬ್ರಹ್ಮಣ್ಯ ಹೇಳಿಕೆ ಭಾರತದಲ್ಲಿ ಭಾರಿ ವಿವಾದ ಸೃಷ್ಟಿಸಿತ್ತು. ಇಲ್ಲಿ ಉದ್ಯೋಗಿಗಳು, ಹಲವು ಸಿಇಒಗಳು, ಸಂಸ್ಥಾಪಕರು ಈ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಚರ್ಚೆ ಅಂತಾರಾಷ್ಟ್ರೀಯ ಮಟ್ಟ ತಲುಪುತ್ತಿದ್ದಂತೆ ಬಹುತೇಕ ದಿಗ್ಗಜರು ಬೆಂಬಲ ಸೂಚಿಸಿದ್ದರು.
ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ವಾರದಲ್ಲಿ 120 ಗಂಟೆ ಕೆಲಸಕ್ಕೆ ಸೂಚಿಸಿದ್ದರು. ಅಮೆರಿಕ ಅಧಿಕಾರಿ ವರ್ಗ 120 ಕೆಲಸ ಮಾಡಬೇಕು ಎಂದಿದ್ದರು. ಹೀಗೆ ಮಾಡಿದರೆ ವಾರದ ಎಳೂ ದಿನ ಕೆಲಸ ಮಾಡಬೇಕು. ಪ್ರತಿ ದಿನ ಕನಿಷ್ಠ 14 ರಿಂದ 17 ಗಂಟೆ ಕೆಲಸ ಮಾಡಬೇಕಾಗುತ್ತದೆ. ಇನ್ನು ವಾರಾಂತ್ಯದಲ್ಲಿ ಅಂದರೆ ಶನಿವಾರ ಭಾನುವಾರ ರಜೆ ಪಡಯಬೇಕಿದ್ದರೆ ಪ್ರತಿ ದಿನ 24 ಗಂಟೆ ಕೆಲಸ ಮಾಡಬೇಕಾಗುತ್ತದೆ. ಈ ಚರ್ಚೆಗಳ ಬೆನ್ನಲ್ಲೇ ಬಿಲ್ ಗೇಟ್ಸ್ ಕೂಡ 80 ಗಂಟೆ ಕೆಲಸದ ಕುರಿತು ಮಾತನಾಡಿದ್ದಾರೆ.
ನೌಕರರಿಗೆ ವೀಕೆಂಡ್‌ನಲ್ಲಿ ಕೆಲಸ, ಬಾಸ್‌ಗೆ ಮಾತ್ರ ಟಿ20 ಕಿಕ್, ಮತ್ತೆ ನಾರಾಯಣ ಮೂರ್ತಿ ಟ್ರೋಲ್
