ಗೃಹ ಸಚಿವಾಲಯದ ಮಹತ್ವದ ನಿರ್ಧಾರ, ಉದ್ಯಮಿ ಗೌತಮ್‌ ಅದಾನಿಗೆ Z ವರ್ಗದ ಭದ್ರತೆ!

ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗೆ ಮಹತ್ವದ ನಿರ್ಧಾರ ಮಾಡಿದ್ದು, ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಅವರಿಗೆ 'Z' ವರ್ಗದ ಭದ್ರತೆ ಕಲ್ಪಿಸಿದ್ದು, ಅ ಮೂಲಕ ವಿಐಪಿ ಭದ್ರತಾ ಕ್ಲಬ್‌ಗೆ ಹೊಸದಾಗಿ ಪ್ರವೇಶ ಪಡೆದ ವ್ಯಕ್ತಿ ಎನಿಸಿದ್ದಾರೆ.
 

Big decision of Home Ministry industrialist Gautam Adani gets Z category security san

ನವದೆಹಲಿ (ಆ.10): ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿಗೆ ಸರ್ಕಾರ ಝಡ್‌ ಕೆಟಗರಿ ಭದ್ರತೆಯನ್ನು ನೀಡಿದೆ. ಗೌತಮ್ ಅದಾನಿಗೆ ನೀಡಿರುವ ಭದ್ರತೆಯ ವೆಚ್ಚವನ್ನು ಅವರೇ ಭರಿಸಲಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಆಂತರಿಕ ಗುಪ್ತಚರ ದಳದ ಬೆದರಿಕೆ ಗ್ರಹಿಕೆ ವರದಿಯನ್ನು ಆಧರಿಸಿ, ಕೇಂದ್ರ ಗೃಹ ಸಚಿವಾಲಯವು, ಅದಾನಿ ಸಮೂಹದ ಅಧ್ಯಕ್ಷರಿಗೆ ಈ ರಕ್ಷಣೆಯನ್ನು ನೀಡಲು ನಿರ್ಧರಿಸಿದೆ. ಗೌತಮ್ ಅದಾನಿಗೆ ಝಡ್ ಕೆಟಗರಿ ಭದ್ರತೆ ನೀಡಲಾಗಿದೆ. ಇದರ ಅಡಿಯಲ್ಲಿ ಒಟ್ಟು 33 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅದಾನಿ ಭದ್ರತೆಯು ಸಶಸ್ತ್ರ ಪಡೆಗಳ ಕೈಯಲ್ಲಿರುತ್ತದೆ. ಗೃಹ ಸಚಿವಾಲಯದ ಮೂಲಗಳ ಪ್ರಕಾರ, ಗೌತಮ್ ಅದಾನಿ ಅವರ ಮನೆಯಲ್ಲಿ 10 ಸಶಸ್ತ್ರ ಸ್ಟ್ಯಾಟಿಕ್ ಗಾರ್ಡ್‌ಗಳು ಇರುತ್ತಾರೆ. ಇದಲ್ಲದೆ, 6 ಸುತ್ತಿನ ಪಿಎಸ್‌ಒಗಳು, ಮೂರು ಪಾಳಿಗಳಲ್ಲಿ 12 ಸಶಸ್ತ್ರ ಸ್ಕಾಟ್ ಕಮಾಂಡೋಗಳು, ಪಾಳಿಯಲ್ಲಿ 2 ವಾಚರ್‌ಗಳು ಮತ್ತು 3 ಗಂಟೆಯೂ ತರಬೇತಿ ಪಡೆದ ಚಾಲಕರನ್ನು ಅವರ ಭದ್ರತೆಗೆ ನಿಯೋಜಿಸಲಾಗುತ್ತದೆ. ಮೂಲಗಳ ಪ್ರಕಾರ, ಆಂತರಿಕ ಗುಪ್ತಚರ ದಳ ನೀಡಿರುವ ಬೆದರಿಕೆಯ ಗ್ರಹಿಕೆಯ ವರದಿಯನ್ನು ಆಧರಿಸಿ, ಕೇಂದ್ರ ಗೃಹ ಸಚಿವಾಲಯವು ಗೌತಮ್ ಅದಾನಿಗೆ ವಿಐಪಿ ಭದ್ರತೆಯನ್ನು ನೀಡಿದೆ. 

ವಿಶೇಷವೆಂದರೆ, ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ವ್ಯವಹಾರವು ಕಳೆದ ಕೆಲವು ವರ್ಷಗಳಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದೆ. ಇದರಿಂದಾಗಿ ಅವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಗೌತಮ್ ಅದಾನಿ ಸಂಪತ್ತು ಹೆಚ್ಚಾಗಲು ಕಂಪನಿಗಳ ಅತ್ಯುತ್ತಮ ಕಾರ್ಯಕ್ಷಮತೆಯೇ ಕಾರಣ. ಅದಾನಿಯ ಒಟ್ಟು 7 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ.

ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ: ಗೌತಮ್ ಅದಾನಿ ಏಷ್ಯಾದ ಶ್ರೀಮಂತ ವ್ಯಕ್ತಿಗಳಲ್ಲದೆ, ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಟಾಪ್-10 ಬಿಲಿಯನೇರ್‌ಗಳ ಪಟ್ಟಿಯಲ್ಲಿ ಗೌತಮ್ ಅದಾನಿ ಅವರ ಹೆಸರು ಎಲೋನ್ ಮಸ್ಕ್, ಬರ್ನಾರ್ಡ್ ಅರ್ನಾಲ್ಟ್ ಮತ್ತು ಜೆಫ್ ಬೆಜೋಸ್ ನಂತರ ಬರುತ್ತದೆ. ಫೋರ್ಬ್ಸ್‌ನ ರಿಯಲ್‌ ಟೈಮ್‌ ಬಿಲಿಯನೇರ್‌ ಪಟ್ಟಿಯ ಪ್ರಕಾರ, ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು 129.1 ಬಿಲಿಯನ್ ಅಮೆರಿಕನ್‌ ಡಾಲರ್‌ ಆಗಿದೆ.

ಜಗತ್ತಿನ ಶ್ರೀಮಂತ ವ್ಯಕ್ತಿಗಳ ಸರಳ ಅಭ್ಯಾಸಗಳಿವು, ಅಳವಡಿಸಿಕೊಂಡರೆ ಜೀವನ ಬಿಂದಾಸ್!

ಮುಖೇಶ್ ಅಂಬಾನಿಗೆ ಭದ್ರತೆ: ಇದಕ್ಕೂ ಮುನ್ನ ಗೃಹ ಸಚಿವಾಲಯವು ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿಗೆ ಕೇಂದ್ರ ಭದ್ರತೆಯನ್ನು ನೀಡಿದೆ. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪ್ರತಿ ತಿಂಗಳು ತಮ್ಮ ಭದ್ರತೆಗಾಗಿ ಖರ್ಚು ಮಾಡಿದ ಮೊತ್ತವನ್ನು ಸಂಬಂಧಪಟ್ಟ ಇಲಾಖೆಗೆ ಪಾವತಿಸುತ್ತಾರೆ. ಮುಖೇಶ್ ಅಂಬಾನಿ ಪೇಮೆಂಟ್ ಆಧಾರದ ಮೇಲೆ ಕೇಂದ್ರ ಸರ್ಕಾರದ ವಿಐಪಿ ಭದ್ರತೆಯನ್ನು ಪಡೆದಿರುವಂತೆ, ಗೌತಮ್ ಅದಾನಿ ಅವರಿಗೆ ಗೃಹ ಸಚಿವಾಲಯವು ಭದ್ರತೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವದ 4ನೇ ಅತಿ ಶ್ರೀಮಂತ ವ್ಯಕ್ತಿ ಅದಾನಿಗೆ ಎಸ್‌ಬಿಐನಿಂದ 14 ಸಾವಿರ ಕೋಟಿ ಸಾಲ ಬೇಕಂತೆ..!

ಅದಾನಿ ಪೋರ್ಟ್ಸ್ Q1 ನಿವ್ವಳ ಲಾಭವು 17% ನಷ್ಟು ಇಳಿಕೆ: ಅದಾನಿ ಪೋರ್ಟ್ಸ್‌ ಮತ್ತು ವಿಶೇಷ ಆರ್ಥಿಕ ವಲಯ (APSEZ) ಸೋಮವಾರದಂದು ದಾಖಲೆಯ ಸರಕು ಪ್ರಮಾಣಗಳ ಹೊರತಾಗಿಯೂ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಏಕೀಕೃತ ನಿವ್ವಳ ಲಾಭದಲ್ಲಿ ₹ 1,091.56 ಕೋಟಿಗೆ 16.86 ರಷ್ಟು ಕುಸಿತವನ್ನು ವರದಿ ಮಾಡಿದೆ. ದೇಶದ ಅತಿ ದೊಡ್ಡ ಇಂಟಿಗ್ರೇಟೆಡ್ ಲಾಜಿಸ್ಟಿಕ್ಸ್ ಕಂಪನಿಯು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ₹1,312.9 ಕೋಟಿ ಕ್ರೋಢೀಕೃತ ನಿವ್ವಳ ಲಾಭವನ್ನು ಗಳಿಸಿತ್ತು ಎಂದು ರೆಗ್ಯಲೆಟರಿ ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. ಜೂನ್ ತ್ರೈಮಾಸಿಕದಲ್ಲಿ ಅದರ ಒಟ್ಟು ಆದಾಯವು ₹ 5,099.25 ಕೋಟಿಗೆ ಏರಿತು, Q1 FY22 ರಲ್ಲಿ ₹ 5,073 ಕೋಟಿ ಇತ್ತು. ಕಂಪನಿಯ ಒಟ್ಟು ವೆಚ್ಚಗಳು ಹಿಂದಿನ ₹3,660.28 ಕೋಟಿಯಿಂದ ₹4,174.24 ಕೋಟಿಗೆ ಏರಿಕೆಯಾಗಿದೆ.

Latest Videos
Follow Us:
Download App:
  • android
  • ios