Asianet Suvarna News Asianet Suvarna News

Elvish Yadav: 24ನೇ ವಯಸ್ಸಲ್ಲೇ ಕೋಟ್ಯಧಿಪತಿ ಈ ಬಿಗ್ ಬಾಸ್ ವಿನ್ನರ್, ಯಾದವ್ ಗಳಿಕೆ ಮೂಲ ಯಾವುದು?

ಮನಸ್ಸೊಂದಿದ್ರೆ ಮಾರ್ಗ. ಈಗಿನ ದಿನಗಳಲ್ಲಿ ಕೋಟ್ಯಾಧಿಪತಿಯಾಗೋದು ಸುಲಭವಲ್ಲ. ಆದ್ರೆ ಬುದ್ಧಿವಂತಿಕೆ ಜೊತೆ ಶ್ರಮವಿದ್ರೆ ಸಾಧ್ಯ. ಇದನ್ನು ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ತೋರಿಸಿದ್ದಾರೆ. ಅವರ ತಿಂಗಳ ಗಳಿಕೆ, ಐಷಾರಾಮಿ ಮನೆ ಕೇಳಿದ್ರೆ ದಂಗಾಗ್ತೀರಾ.
 

Big Boss Ott Winner Elvish Yadav Net Worth Source Of Income roo
Author
First Published Aug 16, 2023, 3:02 PM IST

ಬಿಗ್ ಬಾಸ್ ಒಟಿಟಿ 2ನ ವಿಜೇತರು ಯಾರೆಂಬುದು ಈಗಾಗ್ಲೇ ಬಹಿರಂಗವಾಗಿದೆ. ಖ್ಯಾತ ಯುಟ್ಯೂಬರ್ ಎಲ್ವಿಶ್ ಯಾದವ್ ಕೈಗೆ ಬಿಗ್ ಬಾಸ್ ಒಟಿಟಿ 2 ವಿನ್ನರ್ ಪ್ರಶಸ್ತಿ ಸಿಕ್ಕಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಎಲ್ವಿಶ್ ಯಾದವ್, ಇಲ್ಲಿ ದಾಖಲೆ ಬರೆದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಿಗ್ ಬಾಸ್ ವಿಜೇತರಾದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಎಲ್ವಿಶ್ ಯಾದವ್ ಪಾತ್ರರಾಗಿದ್ದಾರೆ. ಎಲ್ವಿಶ್ ಗೆ 25 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಆದ್ರೆ ಸಾಮಾಜಿಕ ಮಾದ್ಯಮಗಳಲ್ಲಿ ಮೊದಲೇ ಪ್ರಸಿದ್ಧಿ ಹೊಂದಿರುವ ಎಲ್ವಿಶ್ ಮೊದಲೇ ಕೋಟ್ಯಾಧಿಪತಿ. 24 ವರ್ಷದ ಎಲ್ವಿಶ್, ಅನೇಕ ಮೂಲಗಳಿಂದ ಹಣ ಸಂಪಾದನೆ ಮಾಡ್ತಾರೆ. ಎಲ್ವಿಶ್ ಯಾದವ್ ಬಳಿ ದುಬಾರಿ ಬೆಲೆಯ ಮನೆ ಹಾಗೂ ಐಷಾರಾಮಿ ಕಾರಿದೆ. ನಾವಿಂದು ಎಲ್ವಿಶ್ ಗಳಿಕೆ ಮೂಲದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಯುಟ್ಯೂಬ್ (YouTube ) ಚಾನೆಲ್ ನಿಂದ ಹಣ ಗಳಿಸ್ತಾರೆ ಎಲ್ವಿಶ್ : ಎಲ್ವಿಶ್ ಯಾದವ್ (Elvish Yadav ) ಎರಡು ಯುಟ್ಯೂಬ್ ಚಾನೆಲ್ ಗಳನ್ನು ನಡೆಸ್ತಾರೆ. ಈ ಚಾನೆಲ್ ಮೂಲಕ ಅವರು ಪ್ರತಿ ತಿಂಗಳು 10 – 15 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾರೆ. ಎಲ್ವಿಶ್ ಯಾದವ್ ಬ್ಲಾಗ್ ನಲ್ಲಿ 61 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಹಾಗೂ ಎಲ್ವಿಶ್ ಯಾದವ್ ಚಾನೆಲ್ ಗೆ 1 ಕೋಟಿಗೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಎರಡೂ ಯುಟ್ಯೂಬ್ ನಲ್ಲಿ ಎಲ್ವಿಶ್ ಯಾದವ್ ಪರ್ಸನಲ್ ಲೈಫ್ ಬಗ್ಗೆ ನಿಮಗೊಂದಿಷ್ಟು ಮಾಹಿತಿ ಸಿಗುತ್ತದೆ. ಎಲ್ವಿಶ್ ಯಾದವ್ ಇನ್ಸ್ಟಾಗ್ರಾಮ್ ನಲ್ಲಿ ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. 14 ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಇನ್ಸ್ಟಾಗ್ರಾಮ್ ನಲ್ಲಿದ್ದಾರೆ. 
ಮೂಲತಃ ಗುರುಗ್ರಾಮ್‌ನ ನಿವಾಸಿ ಎಲ್ವಿಶ್ ಯಾದವ್. ಎಲ್ವಿಶ್ ತನ್ನ ಯೂಟ್ಯೂಬ್ ಚಾನೆಲ್ ಅನ್ನು 2016 ರಲ್ಲಿ ಪ್ರಾರಂಭಿಸಿದರು. ಎಲ್ವಿಶ್ systumm ಕ್ಲೋಥ್ ಹೆಸರಿನ ಬಟ್ಟೆ ಬ್ರ್ಯಾಂಡ್ ಒಂದರ ಮಾಲೀಕರಾಗಿದ್ದಾರೆ. 

ಅಂಬಾನಿಯಂತೆ ಶ್ರೀಮಂತರಾಗಬೇಕಾ? ಯಾವತ್ತೂ ಇಂಥ ತಪ್ಪುಗಳನ್ನು ಮಾಡ್ಬೇಡಿ!

ಕೋಟಿ ಮೌಲ್ಯದ ಮನೆ : ಎಲ್ವಿಶ್ ಯಾದವ್ ತಂದೆ ಒಬ್ಬ ಲೆಕ್ಚರ್. ಎಲ್ವಿಶ್ ಯಾವದ್ ಗುರುಗ್ರಾಮ್ ನ ವಜಿರಾಬಾದ್ ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಆ ಮನೆ ಮೌಲ್ಯ 12-14 ಕೋಟಿ ಎಂದು ಅಂದಾಜಿಸಲಾಗಿದೆ. ಇದು ನಾಲ್ಕು ಮಹಡಿಗಳ ಮನೆಯಾಗಿದೆ. ಮನೆ, ತಿಂಗಳ ಗಳಿಕೆ ಎಲ್ಲ ಸೇರಿದ್ರೆ ಎಲ್ವಿಶ್ ಯಾದವ್ ಒಟ್ಟೂ ಆಸ್ತಿ ಮೌಲ್ಯ 40 ಕೋಟಿ. ಎಲ್ವಿಶ್ ಯುಟ್ಯೂಬ್ ಕಂಟೆಂಟ್ ಮೇಲೆ ಸಾಕಷ್ಟು ಜಾಹೀರಾತುಗಳು ಬರುತ್ವೆ. ಹಾಗಾಗೇ ಎಲ್ವಿಶ್ ಗಳಿಕೆ ಹೆಚ್ಚಿದೆ.  ಬೇರೆ ಯುಟ್ಯೂಬರ್ ಜೊತೆ ಸೇರಿಯೂ ಅನೇಕ ವಿಡಿಯೋ ಮಾಡಿ, ಅದ್ರಿಂದಲೂ ಹಣ ಗಳಿಸ್ತಾರೆ ಎಲ್ವಿಶ್.

ಐಷಾರಾಮಿ ಕಾರು (Lavish Car):  ಎಲ್ವಿಶ್ ಯಾದವ್ ತನ್ನ ಜೀವನಶೈಲಿ ಮತ್ತು ದುಬಾರಿ ವಾಹನಗಳ ವಿಷ್ಯಕ್ಕೆ ಚರ್ಚೆಯಲ್ಲಿರುತ್ತಾರೆ. 1.75 ಕೋಟಿ ಬೆಲೆಯ ಪೋರ್ಷೆ 718 ಬಾಕ್ಸ್ ಸ್ಟರ್, 12 ರಿಂದ 19 ಲಕ್ಷ ಮೌಲ್ಯದ ಹ್ಯುಂಡೈ ವೆರ್ನಾ ಮತ್ತು 1.41 ಕೋಟಿ ಮೌಲ್ಯದ ಫಾರ್ಚುನರ್ ಸೇರಿದಂತೆ ಐಷಾರಾಮಿ ಕಾರುಗಳು ಎಲ್ವಿಶ್ ಬಳಿ ಇದೆ. ಇದಲ್ಲದೆ ರಾಯಲ್ ಎನ್ಫೀಲ್ಡ್ 350 ಬೈಕ್ ಹೊಂದಿದ್ದಾರೆ ಎಲ್ವಿಶ್. ಈ ಎಲ್ಲವನ್ನೂ ಎಲ್ವಿಶ್ ತಮ್ಮ ಯುಟ್ಯೂಬ್ ಗಳಿಕೆಯಿಂದ್ಲೇ ಖರೀದಿ ಮಾಡಿದ್ದಾರೆ ಎಂಬುದು ವಿಶೇಷ. 

ರತನ್ ಟಾಟಾರ 750 ಕೋಟಿ ರೂ. ಕಂಪೆನಿ ಸಂಭಾಳಿಸ್ತಿರೋದು ನೈಕಾದ ಮಾಜಿ ಉದ್ಯೋಗಿ

ಸಾಮಾಜಿಕ ಕಾರ್ಯಕರ್ತ (Social Worker) ಎಲ್ವಿಶ್ : ಬರೀ ಹಣ ಗಳಿಸೋದು ಮಾತ್ರವಲ್ಲ ಅದನ್ನು ಸರಿಯಾಗಿ ಬಳಕೆ ಮಾಡ್ತಾರೆ ಎಲ್ವಿಶ್. ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಎಲ್ವಿಶ್, ಎಲ್ವಿಶ್ ಯಾದವ್ ಪೌಂಡೇಶನ್ ಹೆಸರಿನ ಎನ್ಜಿಒ ನಡೆಸುತ್ತಿದ್ದಾರೆ. 

Follow Us:
Download App:
  • android
  • ios