ಕೇಂದ್ರದಿಂದ ಮಹತ್ವದ ಹೆಜ್ಜೆ, ಭೀಮ್, ಯುಪಿಐ, ರುಪೇ ಡೆಬಿಟ್ ಕಾರ್ಡ್‌ ವಹಿವಾಟಿಗೆ ಪ್ರೋತ್ಸಾಹ ಧನ!

ಭಾರತದಲ್ಲಿ ಡಿಜಿಟಲ್ ಕ್ರಾಂತಿ ಮಾಡಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ರುಪೇ ಡೆಬಿಟ್ ಕಾರ್ಡ್‌ಗಳು,  ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 

Big boost for India digital payment Cabinet approves incentive scheme for RuPay Debit Cards and BHIM UPI transactions ckm

ನವದೆಹಲಿ(ಜ.11): ಭಾರತದಲ್ಲಿ ಡಿಜಿಟರ್ ಕ್ರಾಂತಿಗೆ ನಾಂದಿ ಹಾಡಿರುವ ಮೋದಿ ಸರ್ಕಾರ ಹಂತ ಹಂತವಾಗಿ ಭಾರತವನ್ನು ಡಿಜಿಟಲೀಕರಣ ಮಾಡುತ್ತಿದೆ. ಈಗಾಗಲೇ ಹಲವು ಮಹತ್ವದ ಯೋಜನೆಗಳ ಮೂಲಕ ಭಾರತದ ಭಾಷ್ಯ ಬದಲಿಸಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. 2022 ಏಪ್ರಿಲ್‌ನಿಂದ ಒಂದು ವರ್ಷದ ಅವಧಿಗೆ ರುಪೇ ಡೆಬಿಟ್ ಕಾರ್ಡ್‌ಗಳು, ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳಿಗೆ (ವ್ಯಕ್ತಿಯಿಂದ ವ್ಯಾಪಾರಿಗೆ) ಪ್ರೋತ್ಸಾಹಕ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  

ಹಣಕಾಸು ವರ್ಷ 2022-23 ರಲ್ಲಿ ರುಪೇ ಡೆಬಿಟ್ ಕಾರ್ಡ್‌ಗಳ ಮತ್ತು ಕಡಿಮೆ ಮೌಲ್ಯದ ಭೀಮ್-ಯುಪಿಐ (Bharat interface for money) ವಹಿವಾಟುಗಳ (P2M) ಪ್ರಚಾರಕ್ಕಾಗಿ ಅನುಮೋದಿತ ಪ್ರೋತ್ಸಾಹ ಯೋಜನೆಯು  2,600 ಕೋಟಿಗಳಷ್ಟು ಹಣಕಾಸಿನ ವೆಚ್ಚ  ಹೊಂದಿದೆ. ಈ ಯೋಜನೆಯಡಿಯಲ್ಲಿ, 2022-23ರ ಪ್ರಸಕ್ತ ಹಣಕಾಸು ವರ್ಷದಲ್ಲಿ ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು (ಪಿ2ಎಂ) ಬಳಸಿಕೊಂಡು ಪಾಯಿಂಟ್-ಆಫ್-ಸೇಲ್ (PoS) ಮತ್ತು ಇ-ಕಾಮರ್ಸ್ ವಹಿವಾಟುಗಳನ್ನು ಉತ್ತೇಜಿಸಲು ಬ್ಯಾಂಕುಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡಲಿದೆ. 

ಡಿಜಿಟಲ್ ಪಾವತಿಯಲ್ಲಿ ಬೆಂಗಳೂರು ದೇಶದಲ್ಲೇ ನಂ.1

ಆರ್ಥಿಕ ಮತ್ತು ಬಳಕೆದಾರ ಸ್ನೇಹಿ ಪಾವತಿ ವೇದಿಕೆಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2022-23ರ ಹಣಕಾಸು ವರ್ಷದ ಬಜೆಟ್‌ನ  ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಈ ಹಿಂದಿನ ಬಜೆಟ್‌ನಲ್ಲಿ ಘೋಷಿಸಲಾದ ಡಿಜಿಟಲ್ ಪಾವತಿಗಳಿಗೆ ಆರ್ಥಿಕ ಬೆಂಬಲವನ್ನು ಮುಂದುವರಿಸುವ ಸರ್ಕಾರದ ಉದ್ದೇಶವನ್ನು ಘೋಷಿಸಿದ್ದರು. ಈ ಘೋಷಣೆಗೆ ಅನುಗುಣವಾಗಿ ಯೋಜನೆ ರೂಪಿಸಲಾಗಿದೆ.

2021-22ರ ಹಣಕಾಸು ವರ್ಷದಲ್ಲಿ, ಡಿಜಿಟಲ್ ವಹಿವಾಟುಗಳಿಗೆ ಮತ್ತಷ್ಟು ಉತ್ತೇಜನ ನೀಡಲು 2021-22ರ ಹಣಕಾಸು ವರ್ಷದ ಬಜೆಟ್ ಘೋಷಣೆಗೆ ಅನುಗುಣವಾಗಿ ಸರ್ಕಾರವು ಪ್ರೋತ್ಸಾಹಕ ಯೋಜನೆಯನ್ನು ಅನುಮೋದಿಸಿತ್ತು. ಇದರ ಪರಿಣಾಮವಾಗಿ, ಒಟ್ಟು ಡಿಜಿಟಲ್ ಪಾವತಿ ವಹಿವಾಟುಗಳು ವರ್ಷದಿಂದ ವರ್ಷಕ್ಕೆ 59% ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ,  ಹಣಕಾಸು ವರ್ಷ 2020-21 ರಲ್ಲಿ 5,554 ಕೋಟಿಗಳಿಂದ ಹಣಕಾಸು ವರ್ಷ 2021-22 ರಲ್ಲಿ 8,840 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಭೀಮ್-ಯುಪಿಐ ವಹಿವಾಟುಗಳು ವರ್ಷದಿಂದ ವರ್ಷಕ್ಕೆ 106% ಬೆಳವಣಿಗೆಯನ್ನು ದಾಖಲಿಸಿವೆ, ಹಣಕಾಸು ವರ್ಷ2020-21ರಲ್ಲಿ ₹2,233 ಕೋಟಿಗಳಿಂದ ಹಣಕಾಸು ವರ್ಷ 2021-22ರಲ್ಲಿ 4,597 ಕೋಟಿಗಳಿ ರೂಪಾಯಿಗಳಿಗೆ ಏರಿಕೆಯಾಗಿದೆ. 

ಗೂಗಲ್ ಪೇ, ಪೇಟಿಎಂ ವಹಿವಾಟುಗಳಿಗೆ ಕಡಿವಾಣ? ಶೀಘ್ರದಲ್ಲೇ ಯುಪಿಐ ಪಾವತಿ ಆ್ಯಪ್ ಗಳಿಗೆ ಮಿತಿ ಹೇರಿಕೆ

ಡಿಜಿಟಲ್ ಪಾವತಿ ವ್ಯವಸ್ಥೆಗಳಲ್ಲಿನ ವಿವಿಧ ಭಾಗಿದಾರರು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್  ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯ ಬೆಳವಣಿಗೆಯ ಮೇಲೆ ಶೂನ್ಯ ಎಂಡಿಆರ್‌  ಆಡಳಿತದ ಸಂಭಾವ್ಯ ಪ್ರತಿಕೂಲ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಪರಿಸರ ವ್ಯವಸ್ಥೆಯ ಭಾಗಿದಾರರಿಗೆ ವೆಚ್ಚಕ್ಕೆ ತಕ್ಕದಾದ ಮೌಲ್ಯದ ಪ್ರತಿಪಾದನೆಯನ್ನು ರಚಿಸಲು, ವ್ಯಾಪಾರಿಗಳ ಅಂಗೀಕಾರವನ್ನು ಹೆಚ್ಚಿಸಲು ಮತ್ತು ನಗದು ಪಾವತಿಗಳನ್ನು ತೀವ್ರವಾಗಿ  ಕಡಿತಗೊಳಿಸಿ ಡಿಜಿಟಲ್ ಪಾವತಿಗಳಾದ ಭೀಮ್-ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್ ವಹಿವಾಟುಗಳನ್ನು ಉತ್ತೇಜಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ  (ಎನ್‌ಪಿಸಿಐ) ಇತರ ವಿಷಯಗಳ ಜೊತೆಗೆ ವಿನಂತಿಸಿದೆ.. 
 
ದೇಶಾದ್ಯಂತ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಭಾರತ ಸರ್ಕಾರವು ವಿವಿಧ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ ವರ್ಷಗಳಲ್ಲಿ, ಡಿಜಿಟಲ್ ಪಾವತಿ ವಹಿವಾಟುಗಳು ಪ್ರಚಂಡ ಬೆಳವಣಿಗೆಯನ್ನು ಕಂಡಿವೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ, ಡಿಜಿಟಲ್ ಪಾವತಿಗಳು ಸಣ್ಣ ವ್ಯಾಪಾರಿಗಳು ಸೇರಿದಂತೆ ವ್ಯವಹಾರಗಳ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಿದವು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿತು.  ಯುಪಿಐ ಡಿಸೆಂಬರ್ 2022 ರಲ್ಲಿ 12.82 ಲಕ್ಷ ಕೋಟಿ ರೂಪಾಯಿ ಮೌಲ್ಯದೊಂದಿಗೆ 782.9 ಕೋಟಿ ಡಿಜಿಟಲ್ ಪಾವತಿ ವಹಿವಾಟುಗಳ ದಾಖಲೆಯನ್ನು ಸಾಧಿಸಿದೆ.

ಈ ಪ್ರೋತ್ಸಾಹಕ ಯೋಜನೆಯು ದೃಢವಾದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ರುಪೇ ಡೆಬಿಟ್ ಕಾರ್ಡ್ ಮತ್ತು ಭೀಮ್-ಯುಪಿಐ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಅನುಕೂಲವಾಗುತ್ತದೆ. 'ಸಬ್ಕಾ ಸಾಥ್, ಸಬ್ಕಾ ವಿಕಾಸ್ (ಎಲ್ಲರ ಜೊತೆ, ಎಲ್ಲರ ವಿಕಾಸ)' ಉದ್ದೇಶಕ್ಕೆ ಅನುಗುಣವಾಗಿ, ಈ ಯೋಜನೆಯು ಯುಪಿಐ ಲೈಟ್ ಮತ್ತು ಯುಪಿಐ 123 ಪೇ ಅನ್ನು ಆರ್ಥಿಕ ಮತ್ತು ಬಳಕೆದಾರ ಸ್ನೇಹಿ ಡಿಜಿಟಲ್ ಪಾವತಿ ಪರಿಹಾರಗಳಾಗಿ ಉತ್ತೇಜಿಸುತ್ತದೆ ಮತ್ತು ಎಲ್ಲಾ ವಲಯಗಳು ಮತ್ತು ಎಲ್ಲಾ ಮಟ್ಟದ ಜನರೊಡನೆ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಮತ್ತಷ್ಟು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. 

Latest Videos
Follow Us:
Download App:
  • android
  • ios