K-RIDE vs L&T tender dispute: ಸಬರ್ಬನ್ ಯೋಜನೆ ಅನುಷ್ಠಾನಗೊಳಿಸಲು ವಿಫಲವಾಗಿ ಟೆಂಡರ್ ನಿಯಮ ಉಲ್ಲಂಘಿಸಿದ ಎಲ್ ಆ್ಯಂಡ್ ಟಿ ಕಂಪನಿಯ ₹57 ಕೋಟಿಯನ್ನು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಮುಟ್ಟುಗೋಲು ಹಾಕಿಕೊಂಡಿದೆ.

ಎಲ್ ಆ್ಯಂಡ್ ಟಿ ಕಂಪನಿಯ ₹57 ಕೋಟಿ ಮುಟ್ಟುಗೋಲು

ಬೆಂಗಳೂರು: ಸಬರ್ಬನ್ ಯೋಜನೆ ಅನುಷ್ಠಾನಗೊಳಿಸಲು ವಿಫಲವಾಗಿ ಟೆಂಡರ್ ನಿಯಮ ಉಲ್ಲಂಘಿಸಿದ ಎಲ್ ಆ್ಯಂಡ್ ಟಿ ಕಂಪನಿಯ ₹57 ಕೋಟಿಯನ್ನು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಮುಟ್ಟುಗೋಲು ಹಾಕಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಪ ನಗರ ರೈಲು ಯೋಜನೆಯಲ್ಲಿ ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ ನಡುವಿನ ಕಾರಿಡಾರ್-2 ಹಾಗೂ ಹೀಲಲಗಿ-ರಾಜಾನಕುಂಟೆ ನಡುವಿನ ಕಾರಿಡಾರ್-4 ಮಾರ್ಗಗಳ ನಿರ್ಮಾಣ ಗುತ್ತಿಗೆಯನ್ನು ಎಲ್ ಆ್ಯಂಡ್ ಟಿ ಪಡೆದಿತ್ತು. ಆದರೆ, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ವಿಫಲವಾಗಿರುವುದಲ್ಲದೆ ಯೋಜನೆಯಿಂದಲೂ ಏಕಪಕ್ಷೀಯವಾಗಿ ಹಿಂದೆ ಸರಿದಿತ್ತು. ಈ ಹಿನ್ನೆಲೆಯಲ್ಲಿ ಎಲ್ ಆ್ಯಂಡ್ ಟಿ ಕಂಪನಿ ಬ್ಯಾಂಕಿಗೆ ನೀಡಿದ್ದ ಬ್ಯಾಂಕ್ ಗ್ಯಾರಂಟಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೆ-ರೈಡ್ ಮುಂದಾಗಿತ್ತು.

ಇದನ್ನೂ ಓದಿ: 80% ಖಾಸಗಿ ಆಟೋ ಗ್ಯಾಸ್‌ ಬಂಕ್‌ಗಳು ಬಂದ್‌

ಬ್ಯಾಂಕ್ ಗ್ಯಾರಂಟಿಗಳನ್ನು ವಶಪಡಿಸಿಕೊಳ್ಳುವುದನ್ನು ತಡೆಯಲು ಎಲ್ ಆ್ಯಂಡ್ ಟಿ ವಾಣಿಜ್ಯ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿ ತಾತ್ಕಾಲಿಕ ತಡೆ ಆದೇಶವನ್ನು ಪಡೆದಿತ್ತು. ಪ್ರಕರಣದಲ್ಲಿ ಎರಡು ಸಂಸ್ಥೆಗಳ ನಡುವೆ ಮಧ್ಯಸ್ಥಿಕೆಗಾಗಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಮಧ್ಯಸ್ಥಿಕೆ ನ್ಯಾಯ ಮಂಡಳಿಯನ್ನು ರಚಿಸಲಾಗಿತ್ತು. ವಿಚಾರಣೆ ಬಳಿಕ ಎಲ್ ಆ್ಯಂಡ್ ಟಿ ಸಂಸ್ಥೆಯ ಕಾರ್ಯಕ್ಷಮತಾ ಬ್ಯಾಂಕ್‌ ಗ್ಯಾರಂಟಿಗಳನ್ನು ಕೆ-ರೈಡ್ ಮುಟ್ಟುಗೋಲು ಹಾಕಿಕೊಳ್ಳುವ ಕ್ರಮ ಸರಿಯಿದೆ ಎಂದು ನ್ಯಾಯ ಮಂಡಳಿ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೆ- ರೈಡ್ 57 ಕೋಟಿ ಬ್ಯಾಂಕ್ ಗ್ಯಾರಂಟಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಇದನ್ನೂ ಓದಿ: ನನಗಾಗ 15 ವರ್ಷ ಪೋರ್ನ್ ಸೈಟ್‌ನಲ್ಲಿ ನನ್ನ ಮುಖ ಕಂಡು ಬೆಚ್ಚಿಬಿದ್ದಿದ್ದೆ: ಕರಾಳ ನೆನಪು ಹಂಚಿಕೊಂಡ ನಟಿ