Asianet Suvarna News Asianet Suvarna News

ಸಿಲಿಕಾನ್ ಸಿಟಿ ಅಂದ್ರೆ ಸುಮ್ಮನೇನಾ? ಆನ್ ಲೈನ್ ಶಾಪಿಂಗ್ ನಲ್ಲೂ ಬೆಂಗಳೂರಿಗರು ಮುಂದಿಲ್ಲಅಂದ್ರೆ ಹೆಂಗೆ?

ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್)  ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಇಡೀ ದೇಶದಲ್ಲೇ ಬೆಂಗಳೂರು ನಿವಾಸಿಗಳು ಅತೀಹೆಚ್ಚು ಸಮಯವನ್ನು ಇ-ಕಾಮರ್ಸ್ ತಾಣಗಳಲ್ಲಿ ಕಳೆಯುತ್ತಿರೋದು ಪತ್ತೆಯಾಗಿದೆ. ಸಿಲಿಕಾನ್ ಸಿಟಿ ಜನರು  ವಾರಕ್ಕೆ ಗರಿಷ್ಠ  4 ಗಂಟೆ 2 ನಿಮಿಷಗಳನ್ನು ಆನ್ ಲೈನ್ ಶಾಪಿಂಗ್ ನಲ್ಲಿ ಕಳೆಯುತ್ತಿದ್ದಾರೆ ಎಂದು ಈ ಅಧ್ಯಯನ ವರದಿ ತಿಳಿಸಿದೆ. 
 

Bengaluru spends maximum time on Amazon Flipkart other e commerce sites Guwahati tops list of Tier II cities anu
Author
First Published Jun 30, 2023, 1:37 PM IST

ನವದೆಹಲಿ (ಜೂ.30): ಇ-ಕಾಮರ್ಸ್ ತಾಣಗಳಲ್ಲಿ ಶಾಪಿಂಗ್ ನಡೆಸಲು  ಅತೀಹೆಚ್ಚು ಸಮಯ ವ್ಯಯಿಸುವ ದೇಶದ ಪ್ರಮುಖ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್)  ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ದೇಶದ ಟೈರ್ -1 ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನ ಗಳಿಸಿದ್ದು, ಇಲ್ಲಿನ ನಿವಾಸಿಗಳು ವಾರಕ್ಕೆ ಗರಿಷ್ಠ  4 ಗಂಟೆ 2 ನಿಮಿಷಗಳನ್ನು ಆನ್ ಲೈನ್ ಶಾಪಿಂಗ್ ನಲ್ಲಿ ಕಳೆಯುತ್ತಿದ್ದಾರೆ. ಸಿಎಂಆರ್ ನಡೆಸಿದ ಅಧ್ಯಯನವು ದೇಶದ ಟೈರ್ 1 ಮಾತ್ರವಲ್ಲದೆ, ಟೈರ್ 2 ಹಾಗೂ ಇತರ ನಗರಗಳ ನಿವಾಸಿಗಳ ಆನ್ ಲೈನ್ ಶಾಪಿಂಗ್ ಗೀಳಿನ ಮೇಲೆ ಬೆಳಕು ಚೆಲ್ಲಿದೆ. ಈ ನಗರಗಳ ನಿವಾಸಿಗಳು ಪ್ರತಿ ವಾರ ಸರಾಸರಿ 2 ಗಂಟೆ 25 ನಿಮಿಷಗಳನ್ನು ಆನ್ ಲೈನ್ ಶಾಪಿಂಗ್ ಗೆ ವ್ಯಯಿಸುತ್ತಿದ್ದಾರೆ. ಟೈರ್ 2 ನಗರಗಳಾದ ಗುವಾಹಟಿ, ಕೊಯಮತ್ತೂರು ಹಾಗೂ ಲಖ್ನೋ ಇ-ಕಾಮರ್ಸ್ ತಾಣಗಳಲ್ಲಿ ಅತೀಹೆಚ್ಚು ಸಮಯ ಕಳೆಯುವ ನಗರಗಳಲ್ಲಿ ಮುಂಚೂಣಿಯಲ್ಲಿವೆ. ಭಾರತೀಯ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಅಮೆಜಾನ್, ಫ್ಲಿಪ್ ಕಾರ್ಟ್, ಮಿಶೋ, ಟಾಟಾ ಹಾಗೂ ರಿಲಯನ್ಸ್  ಈ ಗ್ರಾಹಕರನ್ನು ಸೆಳೆಯಲು ಪೈಪೋಟಿ ನಡೆಸುತ್ತಿವೆ ಎಂದು ಅಧ್ಯಯನ ತಿಳಿಸಿದೆ. ದೇಶಾದ್ಯಂತ ಲಭ್ಯವಿರುವ ಅಮೆಜಾನ್ ಗ್ರಾಹಕರ ನಂಬಿಕೆ ಗಳಿಸಿರುವ ಜೊತೆಗೆ ಅವರ ನೆಚ್ಚಿನ ಆಯ್ಕೆಯೂ ಆಗಿದೆ ಎಂದು ಈ ಅಧ್ಯಯನ ಹೇಳಿದೆ.

ಭಾರತೀಯರ ಮೇಲೆ ಇ-ಕಾಮರ್ಸ್ ಪ್ರಭಾವ
ಸಿಎಂಆರ್ ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್ ಮುಖ್ಯಸ್ಥರಾದ ಪ್ರಭು ರಾಮ್ ಅವರ ಪ್ರಕಾರ ಇ-ಕಾಮರ್ಸ್ ಗ್ರಾಹಕರಿಗೆ ವೈವಿಧ್ಯಮಯ ಆಯ್ಕೆಗಳು, ಅನುಕೂಲ ಹಾಗೂ ಆರಾಮ ಒದಗಿಸಿದೆ. ಈ ಮೂಲಕ ಮಹತ್ವಾಕಾಂಕ್ಷೆಯ ಭಾರತದಲ್ಲಿ ಯುವ ಗ್ರಾಹಕರನ್ನು ಆನ್ ಲೈನ್ ನಲ್ಲಿ ಹೆಚ್ಚಿನ ಶಾಪಿಂಗ್ ಮಾಡಲು ಹಾಗೂ ಅವರ ಬಯಕೆಗಳನ್ನು ಪೂರೈಸಿಕೊಳ್ಳಲು ಸದೃಢಗೊಳಿಸುತ್ತಿದೆ. 

ಆನ್‌ಲೈನ್ ಮೂಲಕ ಆರ್ಡರ್, 4 ವರ್ಷದ ಬಳಿಕ ಡೆಲಿವರಿ; ಕಳೆದುಕೊಳ್ಳಬೇಡಿ ಭರವಸೆ!

ಅಧ್ಯಯನದಲ್ಲಿ ಕಂಡುಬಂದ ಪ್ರಮುಖಾಂಶಗಳು
*ಇ-ಕಾಮರ್ಸ್ ತಾಣಗಳಲ್ಲಿ ಮಹಿಳಾ ಉದ್ಯಮಿಗಳು ಹಾಗೂ ಇತರರು ವಾರ್ಷಿಕ ಸರಾಸರಿ 149 ಗಂಟೆಗಳನ್ನು ಕಳೆಯುತ್ತಿದ್ದಾರೆ. ಅದರಲ್ಲಿ ಶೇ.29ರಷ್ಟು ಮಂದಿ 15 ಸಾವಿರ ರೂ.ನಿಂದ 20 ಸಾವಿರ ರೂ. ಮೌಲ್ಯದ ಸ್ಮಾರ್ಟ್ ಫೋನ್ ಗಳನ್ನು ಆನ್ ಲೈನ್ ನಲ್ಲಿ ಖರೀದಿಸುತ್ತಿದ್ದಾರೆ.
*ಅತೀಕಿರಿಯ ವಯೋಮಾನದವರು (ಶೇ.51) ಹಿರಿಯರಿಗೆ (ಶೇ.47) ಹೋಲಿಸಿದರೆ ಆನ್ ಲೈನ್ ನಲ್ಲಿ ಹೆಚ್ಚಿನ ಶಾಪಿಂಗ್ ನಡೆಸುತ್ತಿದ್ದಾರೆ. 
*ಕಳೆದ ಆರು ತಿಂಗಳಲ್ಲಿ 2/3ರಷ್ಟು ಗ್ರಾಹಕರು 20,000 ರೂ. ಅನ್ನು ಆನ್ ಲೈನ್ ಶಾಪಿಂಗ್ ಗೆ ವ್ಯಯಿಸಿದ್ದಾರೆ. ಮುಂಬೈಯಲ್ಲಿ ಅತ್ಯಧಿಕ ವೆಚ್ಚ (24,200ರೂ.) ಮಾಡಲಾಗುತ್ತದೆ.
*ಆನ್ ಲೈನ್ ನಲ್ಲಿ ಅತೀಹೆಚ್ಚು ಖರೀದಿಸುವ ವಸ್ತುಗಳಲ್ಲಿ ಬಟ್ಟೆ ಹಾಗೂ ಇತರ ಅಲಂಕಾರಿಕ (ಶೇ.62) ಹಾಗೂ ಎಲೆಕ್ಟ್ರಾನಿಕ್ಸ್ ಹಾಗೂ ಗಜೆಟ್ ಗಳು (ಶೇ.54) ಅಗ್ರ ಸ್ಥಾನದಲ್ಲಿವೆ. 

ಆನ್ ಲೈನ್ ಶಾಪಿಂಗ್ ಹೆಚ್ಚಳಕ್ಕೆ ಮೂರು ಕಾರಣಗಳು
ಆನ್ ಲೈನ್ ಶಾಪಿಂಗ್ ಗೆ ಗ್ರಾಹಕರನ್ನು ಆಕರ್ಷಿಸುವಲ್ಲಿ ಮೂರು ಅಂಶಗಳು ನಿರ್ಣಾಯವಾಗಿವೆ. ಅವೇ ಆಕರ್ಷಕ ಬೆಲೆಗಳು (ಶೇ.57), ಆರಾಮದಾಯಕ ರಿಟರ್ನ್ /ವಿನಿಮಯ ಪ್ರಕ್ರಿಯೆ (ಶೇ.57) ಹಾಗೂ ಆಕರ್ಷಕ ಆಫರ್ ಗಳು (ಶೇ.49). 

ಆನ್‌ಲೈನ್ ಡ್ರೆಸ್ ಶಾಪಿಂಗ್‌ನಲ್ಲೇ ವರ್ಚುವಲ್ ಟ್ರೈ, AI ಪರಿಚಯಿಸಿದ ಗೂಗಲ್!

ಗ್ರಾಹಕರ ನೆಚ್ಚಿನ ಇ-ಕಾಮರ್ಸ್ ತಾಣಗಳು
ಅಮೆಜಾನ್ ಗ್ರಾಹಕರ ಅತ್ಯಂತ ನೆಚ್ಚಿನ ಆನ್ ಲೈನ್ ಶಾಪಿಂಗ್ ತಾಣವಾಗಿದೆ. ಶೇ.75ರಷ್ಟು ಜನರು ಆನ್ ಲೈನ್ ಶಾಪಿಂಗ್ ಗೆ ಅಮೆಜಾನ್ ಅನ್ನು ಆಯ್ಕೆ ಮಾಡುತ್ತಾರೆ. ನಂತರದ ಸ್ಥಾನದಲ್ಲಿ ಫ್ಲಿಪ್ ಕಾರ್ಟ್ ಶೇ.70), ಮಿಶೋ (ಶೇ.30), ಜಿಯೋ ಮಾರ್ಟ್ (ಶೇ.20)  ಹಾಗೂ ಇತರ ತಾಣಗಳಿವೆ. ಶೇ.63ರಷ್ಟು ಅಮೆಜಾನ್ ಬಳಕೆದಾರರು ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫ್ಲಿಪ್ ಕಾರ್ಟ್ ನ ಶೇ.52ರಷ್ಟು ಗ್ರಾಹಕರು ಹಾಗೂ ರಿಲಯನ್ಸ್ ಡಿಜಿಟಲ್ ಸಂಸ್ಥೆಯ ಶೇ.46ರಷ್ಟು ಮಂದಿ ಸೇವೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. 
 

Follow Us:
Download App:
  • android
  • ios