ಈಗ ಎಲ್ಲವೂ ಆನ್‌ಲೈನ್ ಮೂಲಕವೇ ಖರೀದಿಸಲಾಗುತ್ತಿದೆ. ಆರ್ಡರ್ ಮಾಡಿದ ಕೆಲವೆ ನಿಮಿಷಗಳಲ್ಲಿ ವಸ್ತುಗಳು ಮನೆ ಬಾಗಿಲಿಗೆ ಬರುತ್ತದೆ. ಆದರೆ ಇಲ್ಲೊಬ್ಬ ಆರ್ಡರ್ ಮಾಡಿದ ವಸ್ತು ಪಡೆಯಲು ನಾಲ್ಕು ವರ್ಷ ಕಾದಿದ್ದಾರೆ. 2019ರಲ್ಲಿ ಬುಕ್ ಮಾಡಿ, ಇದೀಗ ಡೆಲಿವರಿ ಪಡೆದಿದ್ದಾರೆ.

ದೆಹಲಿ(ಜೂ.24): ಡಿಜಿಟಲ್ ಇಂಡಿಯಾದಲ್ಲಿ ಶಾಪಿಂಗ್ ಮಾತ್ರವಲ್ಲ, ಎಲ್ಲವೂ ಆನ್‌ಲೈನ್ ಆಗಿದೆ. ಆಹಾರ, ತರಕಾರಿ, ತಿನಿಸು ಸೇರಿದಂತೆ ಯಾವುದೇ ವಸ್ತುಗಳು ನಿಮಿಷದೊಳಗೆ ಮನೆ ಬಾಗಿಲಿಗೆ ಬಂದಿರುತ್ತದೆ. ಮಿಂಚಿನ ವೇಗದಲ್ಲಿ ಆನ್‌ಲೈನ್ ಸರ್ವೀಸ್ ನೀಡಲಾಗುತ್ತದೆ. ಆದರೆ ದೆಹಲಿಯ ವ್ಯಕ್ತಿಯೊಬ್ಬ 2019ರಲ್ಲಿ ಆನ್‌ಲೈನ್ ಮೂಲಕ ವಸ್ತುವೊಂದನ್ನು ಆರ್ಡರ್ ಮಾಡಿದ್ದಾರೆ. ಈ ವಸ್ತು ಡೆಲಿವರಿ ಆಗಲು 4 ನಿಮಿಷ, 4 ದಿನ ಅಲ್ಲ, ಬರೋಬ್ಬರಿ 4 ವರ್ಷ ಕಾಯಬೇಕಾಯಿತು. 4 ವರ್ಷದ ಬಳಿಕ ತಾನು ಆರ್ಡರ್ ಮಾಡಿದ ವಸ್ತು ಪಡೆದ ಖುಷಿಯಲ್ಲಿ ದೆಹಲಿಯ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ದೆಹಲಿ ಮೂಲಕ ಟೆಕ್ಕಿ ನಿತಿನ್ ಅಗರ್ವಾಲ್ 2019ರಲ್ಲಿ ಚೀನಾದ ಆಲಿಬಾಬ ವೆಬ್‌ಸೈಟ್ ಮೂಲಕ ವಸ್ತುವನ್ನು ಖರೀದಿಸಿದ್ದಾರೆ. ಆಲಿ ಎಕ್ಸ್‌ಪ್ರೆಸ್ ಮೂಲಕ ಆರ್ಡರ್ ಮಾಡಲಾಗಿದೆ. 2019ರಲ್ಲಿ ಆರ್ಡರ್ ಮಾಡಿದ ಬಳಿಕ ಡೆಲಿವರಿಗಾಗಿ ನಿತಿನ್ ಅಗರ್ವಾಲ್ ಕಾದು ಕುಳಿತಿದ್ದಾರೆ. ಆದರೆ ವಸ್ತು ಬರಲೇ ಇಲ್ಲ. ಇದಕ್ಕೆ ಕಾರಣ ನಿತಿನ್ ಆಲಿ ಆರ್ಡರ್ ಪ್ಲೇಸ್ ಮಾಡಿದ ಕೆಲ ದಿನಗಳಲ್ಲೇ ಚೀನಾದ ಆಲಿ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ವೆಬ್‌ಸೈಟ್, ಆನ್‌ಲೈನ್ ಶಾಪಿಂಗ್, ಆ್ಯಪ್ ಭಾರತದಲ್ಲಿ ಬ್ಯಾನ್ ಆಗಿತ್ತು. 

ಆನ್‌ಲೈನ್ ಡ್ರೆಸ್ ಶಾಪಿಂಗ್‌ನಲ್ಲೇ ವರ್ಚುವಲ್ ಟ್ರೈ, AI ಪರಿಚಯಿಸಿದ ಗೂಗಲ್!

2019ರಲ್ಲಿ ಆರ್ಡರ್ ಪ್ಲೇಸ್ ಆಗಿ ವಸ್ತುವನ್ನು ಪ್ಯಾಕ್ ಮಾಡಲಾಗಿದೆ. 2019ರಲ್ಲೇ ಈ ಕೆಲಸವೂ ನಡೆದಿದೆ. ಆದರೆ ಡೆಲಿವರಿ ಮಾತ್ರ ಸಾಧ್ಯವಾಗಿರಲಿಲ್ಲ. ಆರ್ಡರ್ ವಸ್ತು ಪಡೆಯಲು ಗ್ರಾಹಕರ ಸಹಾಯವಾಣಿ, ಆಲಿಬಾಬ ವೆಬ್‌ಸೈಟ್ ಹೆಲ್ಪ್ ಲೈನ್ ನಂಬರ್ ಸೇರಿದಂತೆ ಹಲವು ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಯಾವುದೂ ಕೈಗೂಡಲಿಲ್ಲ. ಆದರೆ ಭರವಸೆ ಮಾತ್ರ ಕಳೆದುಕೊಂಡಿರಲಿಲ್ಲ.

Scroll to load tweet…

ಭಾರತದ ಚೀನಾ ಆ್ಯಪ್ ನಿಷೇಧ, ವ್ಯಾಪಾರ ವಹಿವಾಟಿಗೆ ನಿರ್ಬಂಧಗಳಿಂದ ಸಂಕಷ್ಟ ಹೆಚ್ಚಾಯಿತು. ಹೀಗಾಗಿ ವಸ್ತುಗಳ ಡೆಲಿವರಿ ಮತ್ತಷ್ಟು ಕಗ್ಗಂಟಾಗಿತ್ತು. ಇದೀಗ 4 ವರ್ಷಗಳ ಬಳಿಕ ನಿತಿನ್ ಅಗರ್ವಾಲ್ ತಮ್ಮ ವಸ್ತು ಪಡೆದುಕೊಂಡಿದ್ದಾರೆ. ಈ ಕುರಿತ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೀವು ಭರವಸೆ ಕಳೆದುಕೊಳ್ಳಬೇಡಿ. 2019ರಲ್ಲಿ ನಾನು ಆಲಿ ಎಕ್ಸ್‌ಪ್ರೆಸ್ ಮೂಲಕ(ಸದ್ಯ ಭಾರತದಲ್ಲಿ ನಿಷೇಧ) ಆರ್ಡರ್ ಮಾಡಿದ್ದೆ. ಪಾರ್ಸೆಲ್ ಡೆಲಿವರಿ ಇದೀಗ ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಆಲಿಬಾಬಾ ಸೇರಿದಂತೆ ಚೀನಾದ ಹಲುವ ಕಂಪನಿಗಳು ವ್ಯಾಪಾರ ವಹಿವಾಟಿಗೆ ಭಾರತ ನಿಷೇಧ ಹೇರಿದೆ. ಆಲಿಬಾಬ ಕಂಪನಿಗೆ ಸ್ವತಃ ಚೀನಾ ಸರ್ಕಾರ ಕೂಡ ಭಾರಿ ಮೊತ್ತದ ದಂಡ ವಿಧಿಸಿತ್ತು. ವ್ಯಾಪಾರಿಗಳು ಅನ್ಯ ಆನ್‌ಲೈನ್‌ ಇ-ಕಾಮರ್ಸ್‌ ತಾಣಗಳಲ್ಲಿ ತಮ್ಮ ಉತ್ಪನ್ನ ಮಾರದಂತೆ 2015ರಿಂದಲೂ ಅಡ್ಡಿಪಡಿಸುವ ಮೂಲಕ ಏಕಸ್ವಾಮ್ಯ ಸೃಷ್ಟಿಸಿದ ಕಾರಣಕ್ಕಾಗಿ ಪ್ರಸಿದ್ಧ ಇ-ಕಾಮರ್ಸ್‌ ಕಂಪನಿ ಆಲಿಬಾಬಾ ಗ್ರೂಪ್‌ ಮೇಲೆ ಚೀನಾ ಸರ್ಕಾರ ಬರೋಬ್ಬರಿ 20 ಸಾವಿರ ಕೋಟಿ ರು. ದಂಡ ವಿಧಿಸಿತ್ತು. 

Online Shopping ನಲ್ಲೂ ಇದೆ ನಷ್ಟ, ನಿಮ್ಮ ದುಡ್ಡಿನ ಜಾಗೃತೆ ನೀವು ಮಾಡಬೇಕು!

ವಿಶ್ವದ ಅತಿದೊಡ್ಡ ಮೊಬೈಲ್‌ ಚಿಪ್‌ ಪೂರೈಕೆದಾರ ಸಂಸ್ಥೆ ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಕ್ವಾಲ್‌ಕಾಮ್‌ಗೆ 2015ರಲ್ಲಿ ಚೀನಾ 7 ಸಾವಿರ ಕೋಟಿ ರು. ದಂಡ ವಿಧಿಸಿತ್ತು. ಅದಕ್ಕೆ ಹೋಲಿಸಿದರೆ ಆಲಿಬಾಬಾ ಮೇಲೆ ವಿಧಿಸಿರುವುದು ಸುಮಾರು 3 ಪಟ್ಟು ಅಧಿಕ ದಂಡವಾಗಿದೆ ಈ ದಂಡವನ್ನು ವಿನಮ್ರವಾಗಿ ಒಪ್ಪಿಕೊಳ್ಳುತ್ತೇವೆ ಎಂದು ಆಲಿಬಾಬಾ ಕಂಪನಿ ಹೇಳಿತ್ತು. 2019ರಲ್ಲಿ ದೇಶೀಯವಾಗಿ ಆಲಿಬಾಬಾ ಎಷ್ಟುಆದಾಯವನ್ನು ಗಳಿಸಿತ್ತೋ ಅದರಲ್ಲಿ ಈ ದಂಡದ ಪಾಲು ಶೇ.4ರಷ್ಟಾಗಲಿದೆ ಎಂದು ದಂಡ ವಿಧಿಸಿರುವ ಚೀನಾದ ಮಾರುಕಟ್ಟೆನಿಯಂತ್ರಣ ಸಂಸ್ಥೆ ತಿಳಿಸಿದೆ.