ದೇಶದಲ್ಲಿ ದುಬಾರಿ ಮನೆ ಖರೀದಿಯಲ್ಲಿ ಬೆಂಗಳೂರಿಗೆ 4ನೇ ಸ್ಥಾನ, ನಂ.1 ಯಾರು?
ಕೆಲಸಕ್ಕಾಗಿ ನಗರಕ್ಕೆ ಬಂದು ಸಂಪಾದನೆ ದುಡ್ಡಲ್ಲಿ ಒಂದು ಮನೆ ಖರೀದಿಸಬೇಕು ಅನ್ನೋದು ಹಲವರ ಕನಸು. ಆದರೆ ನಗರಗಳಲ್ಲಿ ಬೆಲೆ ನೋಡಿ ಸುಮ್ಮನಾಗುವವರ ಸಂಖ್ಯೆ ಹೆಚ್ಚು. ಇದೀಗ ಮನೆ ಖರೀದಿ ಕುರಿತು ರೋಚಕ ಮಾಹಿತಿ ಬಹಿರಂಗವಾಗಿದೆ. ಭಾರತದಲ್ಲಿ ದುಬಾರಿ ಮನೆ ಅಂದರೆ 1.5 ಕೋಟಿಗೂ ಅದಿಕ ಮೊತ್ತದ ಮನೆ ಖರೀದಿಸುವದಲ್ಲಿ ಯಾವ ನಗರ ನಂ.1? ಯಾವ ನಗರದಲ್ಲಿ ಎಷ್ಟು ಮಂದಿ ದುಬಾರಿ ಮನೆ ಖರೀದಿಸಿದ್ದಾರೆ?
ಬೆಂಗಳೂರು(ಮೇ.13) ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ನಗರ ಪ್ರದೇಶದಲ್ಲಿ ಮನೆ ಖರೀದಿ ಅಂದುಕೊಂಡಷ್ಟು ಸುಲಭವಲ್ಲ. ದುಬಾರಿ ಮೊತ್ತ, ನೋಂದಣಿ ಶುಲ್ಕ, ಮೋಸ ಹೋಗದಂತೆ ಮನೆ ಖರೀದಿ ಅತೀ ದೊಡ್ಡ ಸವಾಲು. ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಭಾರಿ ಬೇಡಿಕೆ ಪಡೆದುಕೊಂಡಿದೆ. ಇದೀಗ ದೇಶದ ನಗರ ಪ್ರದೇಶಗಳಲ್ಲಿ ಅತೀ ಹೆಚ್ಚು ದುಬಾರಿ ಮನೆ ಖರೀದಿಸುವ ನಗರ ಯಾವುದು ಅನ್ನೋ ವರದಿ ಬಹಿರಂಗವಾಗಿದೆ. ದುಬಾರಿ ಅಂದರೆ 1.5 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಮನೆ ಖರೀದಿಯಲ್ಲಿ 2024ರ ಆರಂಭದಿಂದ ಇದುವರೆಗಿನ ಅಂಕಿ ಅಂಶ ಪ್ರಕಾರ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ.
ನಗರ ಪ್ರದೇಶದಲ್ಲಿ ಮಾರಾಟವಾಗುತ್ತಿರುವ ಮನೆಗಳ ಪೈಕಿ ಶೇಕಡಾ 21ರಷ್ಟು ದುಬಾರಿ ಹಾಗೂ ಐಷಾರಾಮಿ ಮನೆಗಳಾಗಿವೆ. 2024ರ ಸಾಲಿನಲ ಮೊದಲಾರ್ಥದಲ್ಲಿ ಗರಿಷ್ಠ ದುಬಾರಿ ಮನೆ ಖರೀದಿಸಿದವರ ಪಟ್ಟಿಯಲ್ಲಿ ನಿರೀಕ್ಷೆಯಂತೆ ಮುಂಬೈ ಮೊದಲ ಸ್ಥಾನ ಪಡೆದುಕೊಂಡಿದೆ. ಮುಂಬೈ ಮಹಾನಗರದಲ್ಲಿ ಮನೆ ಬಾಡಿಗೆ, ಮನೆ ಖರೀದಿ ಊಹೆಗೆ ನಿಲುಕದ್ದು. 2024ರ ಆರಂಭದಿಂದ ಇದುವರೆಗೆ ಮುಂಬೈನಲ್ಲಿ 9,360 ದುಬಾರಿ ಮನೆಗಳು ಮಾರಾಟವಾಗಿದೆ.
20 ಕೋಟಿ ಬಂಗಲೆ ಕೊಳ್ಳಲು ಯೂರೂ ಇಲ್ಲ, 60 ವರ್ಷದಿಂದ ಖಾಲಿ ಇರೋ ಇಲ್ಲಿ ದೆವ್ವದ ಕಾಟವೇ?
ಬೆಂಗಳೂರಿನಲ್ಲಿ 1.5 ಕೋಟಿಗೂ ಅಧಿಕ ಮೊತ್ತದ ಮನೆಗಳನ್ನು 3,455 ಕುಟುಂಬಗಳು ಖರೀದಿಸಿದೆ.ಈ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಈ ಮನೆಗಳ ಕನಿಷ್ಠ ಮೊತ್ತ 1.5, ಆದರೆ ಗರಿಷ್ಠ ಮೊತ್ತ ಎಷ್ಟು ಅನ್ನೋದು ಬಹಿರಂಗವಾಗಿಲ್ಲ. ಇನ್ನು ಎರಡನೇ ಸ್ಥಾನದಲ್ಲಿರುವ ದೆಹಲಿಯಲ್ಲಿ 6,060 ದುಬಾರಿ ಮನೆಗಳು ಮಾರಾಟವಾಗಿದೆ. ತ್ವರಿತವಾಗಿ ಬೆಳೆಯುತ್ತಿರುವ ಹೈದರಾಬಾದ್ ನಗರದಲ್ಲಿ 5,755 ದುಬಾರಿ ಮನೆಗಳು ಮಾರಾಟವಾಗಿದೆ. ಬೆಂಗಳೂರಿನ ನಂತರದ ಸ್ಥಾನದಲ್ಲಿ ಪುಣೆ 1,530 ಮನೆಗಳು, ಚೆನ್ನೈನಲ್ಲಿ 530 ಹಾಗೂ ಕೋಲ್ಕತಾದಲ್ಲಿ 380 ಐಷಾರಾಮಿ ಮನೆಗಳು ಮಾರಾಟವಾಗಿದೆ.
ದುಬಾರಿ ಮನೆಗಳ ಖರೀದಿಯಲ್ಲಿ ಗಣನೀಯ ಏರಿಕೆಯಾಗಿದೆ. ಆದರೆ ಮಧ್ಯಮ ವರ್ಗದ ಬೆಲೆಯ ಮನೆಗಳ ಖರೀದಿಯಲ್ಲಿ ಗಣನೀಯ ಕುಸಿತ ಕಂಡಿದೆ. 2023ರಲ್ಲಿ ದುಬಾರಿ ಬೆಲೆಯ ಮನೆ ಖರೀದಿ ಶೇಕಡಾ 7ರಷ್ಟಿತ್ತು. ಈ ಬಾರಿ ಶೇಕಡಾ 21ಕ್ಕೆ ಏರಿಕೆಯಾಗಿದೆ. ಆದರೆ ಮಧ್ಯಮ ವರ್ಗದ ಮನೆ ಖರೀದಿ ಶೇಕಡಾ 37ರಿಂದ ಶೇಕಡಾ 20ಕ್ಕೆ ಕುಸಿತ ಕಂಡಿದೆ. ಮಧ್ಯಮ ವರ್ಗದ ಮನೆ ಬೆಲೆಯೂ ಗಗನಕ್ಕೇರುತ್ತಿರುವ ಕಾರಣ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. 2024ರ ಮೊದಲಾರ್ಧದಲ್ಲಿ ಭಾರತದ ಟಾಪ್ 7 ನಗರದಲ್ಲಿ ಒಟ್ಟು 1.30 ಲಕ್ಷ ಮನೆಗಳು ಮಾರಾಟವಾಗಿದೆ.
ಜಾನ್ವಿ ಕಪೂರ್ ಚೆನ್ನೈ ಮನೆಯಲ್ಲೀಗ ನೀವೂ ಉಳಿಯಬಹುದು, ಈ ದಿನಕ್ಕೆ ಬುಕ್ ಮಾಡಿ ನಟಿಯಿಂದಲೇ ಆತಿಥ್ಯ ಪಡೆಯಿರಿ!