ಆಯುಷ್ಮಾನ್ ಕಾರ್ಡ್ ಇದ್ರೆ ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆ ಉಚಿತ; ಹಾಗಾದ್ರೆ ಇದನ್ನು ಪಡೆಯೋದು ಹೇಗೆ?
ಆಯುಷ್ಮಾನ್ ಭಾರತ್ ಯೋಜನೆ ಅಥವಾ ಈಗಿನ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (ಪಿಎಂಜೆಎವೈ) ಅಡಿಯಲ್ಲಿ ಹೃದ್ರೋಗದಿಂದ ಹಿಡಿದು ಕ್ಯಾನ್ಸರ್ ತನಕ ಅನೇಕ ಗಂಭೀರ ಕಾಯಿಲೆಗಳಿಗೆ 5ಲಕ್ಷ ರೂ. ತನಕ ಉಚಿತ ಚಿಕಿತ್ಸೆ ಪಡೆಯಲು ಅವಕಾಶವಿದೆ.
ನವದೆಹಲಿ (ಸೆ.25): ವಿಶ್ವದ ಅತೀದೊಡ್ಡ ಆರೋಗ್ಯ ವಿಮಾ ಯೋಜನೆ ಎಂದು ಗುರುತಿಸಿಕೊಂಡಿರುವ ಆಯುಷ್ಮಾನ್ ಭಾರತ್ ಯೋಜನೆ ಅಥವಾ ಈಗಿನ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (ಪಿಎಂಜೆಎವೈ) ಬಡ ಹಾಗೂ ಕೆಳ ವರ್ಗದ ಕೋಟ್ಯಂತರ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳು ಸಿಗುವಂತೆ ಮಾಡಿದೆ. ಈ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ 5ಲಕ್ಷ ರೂ. ತನಕ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಲು ಅವಕಾಶವಿದೆ. ಕ್ಯಾನ್ಸರ್ , ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ದುಬಾರಿ ವೆಚ್ಚದ ಚಿಕಿತ್ಸೆಗಳ ವೆಚ್ಚವನ್ನು ಕೂಡ ಈ ಯೋಜನೆಯಡಿ ಭರಿಸಲು ಅವಕಾಶವಿದೆ. ಐದು ವಸಂತಗಳನ್ನು ಪೂರೈಸಿರುವ ಈ ಯೋಜನೆಗೆ ಈ ವರ್ಷ ಸರ್ಕಾರ ಬಜೆಟ್ ನಲ್ಲಿ 1,600 ಕೋಟಿ ರೂ. ಮೀಸಲಿಟ್ಟಿದೆ ಕೂಡ. ಆಯುಷ್ಮಾನ್ ಭಾರತ ಯೋಜನೆಯ ಮೂರನೇ ಹಂತವನ್ನು ಸೆ17ರಿಂದ ಪ್ರಾರಂಭಿಸಲಾಗಿದೆ. ಹೀಗಾಗಿ ಇನ್ನೂ ಈ ಯೋಜನೆಗೆ ಸೇರ್ಪಡೆಗೊಳ್ಳದವರು ಈ ಅವಕಾಶ ಬಳಸಿಕೊಳ್ಳಬಹುದು. ಸೇರ್ಪಡೆ ಪ್ರಕ್ರಿಯೆಯನ್ನು ಕೂಡ ಈ ಬಾರಿ ಸರಳಗೊಳಿಸಲಾಗಿದೆ. ಹಾಗಾದ್ರೆ ಆಯುಷ್ಮಾನ್ ಭಾರತ ಯೋಜನೆಗೆ ಸೇರ್ಪಡೆಗೊಳ್ಳುವುದು ಹೇಗೆ? ಇದರಡಿ ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು?
ಸೇರ್ಪಡೆ ಹೇಗೆ?
ಪಿಎಂಜೆಎವೈ ಯೋಜನೆಗೆ ಸೇರ್ಪಡೆಗೊಂಡವರಿಗೆ ಆಯುಷ್ಮಾನ್ ಕಾರ್ಡ್ ನೀಡಲಾಗುತ್ತದೆ. ಈ ಯೋಜನೆಗೆ ಮೊಬೈಲ್ ಅಪ್ಲಿಕೇಷನ್ ಮೂಲಕ ಸೇರ್ಪಡೆಗೊಳ್ಳಬಹುದು. ಆಯುಷ್ಮಾನ್ ಕಾರ್ಡ್ ಆಪ್ ಆಯುಷ್ಮಾನ್ ಭಾರತ (PM-JAY) ಡೌನ್ ಲೋಡ್ ಮಾಡಬೇಕು. ಆ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಬೇಕು. ನಂತರ ಫಿಂಗರ್ ಪ್ರಿಂಟ್, ಕಣ್ರೆಪ್ಸೆ, ಒಟಿಪಿ ಹಾಗೂ ಮುಖ ಆಧಾರಿತ ನೋಂದಣಿ ಮಾಡಿ. ಇದರ ಜೊತೆಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್, ವಾಸ್ತವ್ಯ ಪ್ರಮಾಣ ಪತ್ರ ಹಾಗೂ ಪಾಸ್ ಪೋರ್ಟ್ ಗಾತ್ರದ ಫೋಟೋ ಅಪ್ಲೋಡ್ ಆಡಿ. ಎಲ್ಲ ವಿವರಗಳು ಸರಿಯಾಗಿವೆಯಾ ಎಂಬುದನ್ನು ತಪ್ಪದೇ ಪರಿಶೀಲಿಸಿ.
PM Kisan Samman Nidhi:ಈ ದಿನ ರೈತರ ಖಾತೆಗೆ ಬರಲಿದೆ 15ನೇ ಕಂತಿನ ಹಣ, ಅರ್ಜಿ ಸಲ್ಲಿಕೆ ಹೇಗೆ?
5ಲಕ್ಷ ರೂ. ವಿಮೆ ಕವರೇಜ್
ಈ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ 5ಲಕ್ಷ ರೂ. ತನಕ ಕವರೇಜ್ ಪಡೆಯಬಹುದು. ಇನ್ನು ಈ ಯೋಜನೆಯಡಿ ಲಿಸ್ಟ್ ಮಾಡಿರುವ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ (ಖಾಸಗಿ ಕೂಡ ಸೇರಿದೆ) ಪಡೆಯಬಹುದಾಗಿದೆ. ಇನ್ನು ಈ ಕವರೇಜ್ 3 ದಿನಗಳ ಆಸ್ಪತ್ರೆ ಸೇರ್ಪಡೆ ಮುನ್ನದ ಹಾಗೂ 15 ದಿನಗಳ ಆಸ್ಪತ್ರೆ ಸೇರ್ಪಡೆ ಬಳಿಕದ ವೆಚ್ಚಗಳನ್ನು ಕೂಡ ಒಳಗೊಂಡಿದೆ. ಈ ಮೂಲಕ ಬಡವರಿಗೆ ಆಸ್ಪತ್ರೆ ವೆಚ್ಚದ ಭಾರವನ್ನು ಈ ಯೋಜನೆ ತಗ್ಗಿಸುತ್ತಿದೆ. ಪ್ರತಿವರ್ಷ ಆರು ಕೋಟಿ ಜನರಿಗೆ ಈ ಯೋಜನೆ ನೆರವಾಗುತ್ತಿದೆ. ಇನ್ನು ಆಯುಷ್ಮಾನ್ ಕಾರ್ಡ್ ಹೊಂದಿರುವವ್ಯಕ್ತಿ ದೇಶಾದ್ಯಂತ ಪಟ್ಟಿಯಲ್ಲಿರುವ ಯಾವುದೇ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.
ಅಲ್ಪ ಆದಾಯದಲ್ಲೇ ದುಡ್ಡಿನ ಉಳಿತಾಯ ಹೇಗೆ? ಮೂರು ಟಿಪ್ಸ್ ಕೊಟ್ಟ ನಟಿ ಅದಿತಿ ಪ್ರಭುದೇವ
ಯಾವೆಲ್ಲ ಕಾಯಿಲೆಗಳಿಗೆ ಕವರೇಜ್ ಸಿಗುತ್ತೆ?
ತೀವ್ರ ಮತ್ತು ತೀವ್ರ ನಿಗಾ ಸೇವೆಗಳ ವೆಚ್ಚವನ್ನು ಕೂಡ ಪಿಎಂಜೆಎವೈ ಅಡಿಯಲ್ಲಿ ಭರಿಸಬಹುದು. ಹೃದ್ರೋಗ ಚಿಕಿತ್ಸೆಯಿಂದ ಹಿಡಿದು ಕ್ಯಾನ್ಸರ್ ಚಿಕಿತ್ಸೆಯ ತನಕ ಈ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಈ ಯೋಜನೆ ಅಡಿ ಕವರೇಜ್ ಸಿಗುವ ಕೆಲವು ಕಾಯಿಲೆಗಳ ಪಟ್ಟಿ ಇಲ್ಲಿದೆ.
*ಪ್ರೋಸ್ಟೇಟ್ ಕ್ಯಾನ್ಸರ್
*ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್
*ಡಬಲ್ ವಾಲ್ವ ರಿಪ್ಲೇಸ್ ಮೆಂಟ್
*ಕಾರ್ರೋಟಿಡ್ ಆಂಜಿಯೋಪ್ಲಾಸ್ಟಿ ವಿಥ್ ಸ್ಟಂಟ್
*ಪಲ್ಮನರಿ ವಾಲ್ವ ರಿಪ್ಲೇಸ್ ಮೆಂಟ್
*ಸ್ಕಲ್ ಬೇಸ್ ಸರ್ಜರಿ
*ಆಂಟೀರಿಯರ್ ಸ್ಪೈನ್ ಫಿಕ್ಸೇಷನ್
*ಸುಟ್ಟ ಗಾಯಕ್ಕೆ ಸಂಬಂಧಿಸಿ ಟಿಶ್ಯೂ ಎಕ್ಸ್ ಪ್ಯಾಂಡರ್ ಚಿಕಿತ್ಸೆ