ಚೋಲೆ ಕುಲ್ಚಾ ಮಾರಿ ಕೋಟ್ಯಾಧಿಪತಿಯಾದವನಿಗೆ ಕೂರಲೂ ಟೈಂ ಇಲ್ಲ!

ಬೀದಿ ಬದಿ ವ್ಯಾಪಾರಿಗಳು ಕೈತುಂಬ ಸಂಪಾದನೆ ಮಾಡ್ತಾರೆ. ವರ್ಷಕ್ಕೆ ಕೋಟಿ ಕೋಟಿ ಗಳಿಸುವ ವ್ಯಾಪಾರಿಗಳು ನಮ್ಮಲ್ಲಿದ್ದಾರೆ. ಆದ್ರೆ ಅವರ ಕೆಲಸ ಸುಲಭವೇನಲ್ಲ. ಚೋಲೆ – ಕುಲ್ಚಾ ಮಾರಾಟ ಮಾಡಿ ಹಣ ಸಂಪಾದನೆ ಮಾಡ್ತಿರುವ ವ್ಯಕ್ತಿಯೊಬ್ಬರಿಗೆ ಕುಳಿತುಕೊಳ್ಳಲೂ ಸಮಯವಿಲ್ಲ. 
 

Became a millionaire by selling chole kulcha

ಕೆಲಸ ಯಾವ್ದೇ ಇರಲಿ ಅದ್ರಲ್ಲಿ ಶ್ರದ್ಧೆ ಹಾಗೂ ನಿರಂತರ ಪರಿಶ್ರಮ ಮುಖ್ಯ. ಬ್ಯುಸಿನೆಸ್ (Business) ಶುರು ಮಾಡಿದ ಆರಂಭದಲ್ಲಿಯೇ ಕೋಟ್ಯಾಧಿಪತಿ (millionaire) ಯಾಗ್ತೇನೆ ಎಂದು ಕನಸು ಕಾಣೋದು ಎಷ್ಟು ಮೂರ್ಖತನವೋ ಅದೇ ರೀತಿ, ಕೋಟ್ಯಾಧಿಪತಿಯಾದ್ಮೇಲೆ ಆರಾಮವಾಗಿರ್ತೇನೆ ಅಂತ ಭಾವಿಸೋದು ಕೂಡ ಮೂರ್ಖತನ. ಯಶಸ್ಸಿನ ತುತ್ತತುದಿ ತಲುಪಿದ ನಂತ್ರವೂ ನೀವು ಕೆಲಸ ಮುಂದುವರಿಸೋದು ಅನಿವಾರ್ಯ. ಇದಕ್ಕೆ ಸಿಯಾ ರಾಮ್‌ (Siya Ram) ಉತ್ತಮ ನಿದರ್ಶನ. ದೆಹಲಿಯಲ್ಲಿ ಚೋಲೆ ಕುಲ್ಚಾಗೆ ಪ್ರಸಿದ್ಧಿ ಪಡೆದಿರುವ ಸಿಯಾ ರಾಮ್, ಕೋಟ್ಯಾಧಿಪತಿಯಾದ್ರೂ ಕೆಲಸ ನಿಲ್ಲಿಸಿಲ್ಲ. ಅವರ ಸತತ ಪ್ರಯತ್ನವೇ ಅವರನ್ನು ಇಷ್ಟು ಪ್ರಸಿದ್ಧಿಗೆ ತಂದು ನಿಲ್ಲಿಸಿದೆ.

ದೆಹಲಿಯ ಲಜಪತ್ ನಗರದಲ್ಲಿ ಸಿಯಾ ರಾಮ್‌ ಚೋಲೆ ಪ್ರಸಿದ್ಧಿ ಪಡೆದಿದೆ. ಪೂರ್ಣ ಸಮರ್ಪಣೆಯೊಂದಿಗೆ ಈ ವ್ಯವಹಾರವನ್ನು ಶುರು ಮಾಡಿದ ಅವರು ಕೋಟಿಗಟ್ಟಲೆ ವ್ಯವಹಾರ ನಡೆಸುತ್ತಿದ್ದಾರೆ. ಅದಕ್ಕೆ ಸಿಯಾರಾಮ್ ಸಾಕಷ್ಟು ಶ್ರಮಪಟ್ಟಿದ್ದಾರೆ. ಸಾಟಿಯಿಲ್ಲದ ರುಚಿ ಹೊಂದಿರುವ  ಚೋಲೆ ಕುಲ್ಚಾ (Chole Kulcha) ತಿನ್ನಲು ಬೇರೆ ಬೇರೆ ಊರುಗಳಿಂದ ಜನ ಬರ್ತಾರೆ. 

ಗಾರ್ಬೇಜ್‌ ಕೆಫೆ, ಇಲ್ಲಿ ಉಚಿತವಾಗಿ ಸಿಗುತ್ತೆ ಊಟ!

ಲಜಪತ್ ನಗರದ ಸೆಂಟ್ರಲ್ ಮಾರ್ಕೆಟ್‌ ಹಾಗೂ ಬಟ್ಟೆ ಅಂಗಡಿಗಳ ಮಧ್ಯೆ ಫುಟ್ಬಾತ್ ನಲ್ಲಿ ಸಿಯಾ ರಾಮ್ ಚೋಲೆ – ಕುಲ್ಚಾ ಮಾರಾಟ ಮಾಡ್ತಾರೆ.  ಸಣ್ಣ ಗಾಡಿಯಲ್ಲಿ, ಕಲ್ಲಿದ್ದಲು ಕುಲುಮೆ ಮತ್ತು ಅಲ್ಯೂಮಿನಿಯಮ್ ಪಾತ್ರೆ ಇಟ್ಕೊಂಡು ಚೋಲೆ – ಕುಲ್ಚಾ ಮಾರಾಟ ಆರಂಭಿಸಿದ್ದರು. 60 ವರ್ಷಗಳ ಹಿಂದೆ ಅತೀ ಸಣ್ಣ ಪ್ರಮಾಣದಲ್ಲಿ ಶುರುವಾದ ಅವರ ವ್ಯವಹಾರ ಈಗ ಕೋಟ್ಯಾಂತರ ರೂಪಾಯಿ ಬ್ಯುಸಿನೆಸ್ ಮಾಡ್ತಿದೆ.

ಅಲಿಘರ್‌ನಿಂದ ದೆಹಲಿಯವರೆಗಿನ ಅತ್ಯಂತ ಪ್ರಸಿದ್ಧ ಬೀದಿ ಆಹಾರ ಮಾರಾಟಗಾರರಲ್ಲಿ ಒಬ್ಬರಾಗುವ ಸಿಯಾ ರಾಮ್, ತಮ್ಮ ಪಾಕ ಪದ್ಧತಿಗೆ ಹೆಸರುವಾಸಿಯಾಗಿದ್ದಾರೆ. 32 ಮಸಾಲೆ ಮಿಶ್ರಣ ಅವರ ಚೋಲಾ – ಕುಲ್ಚಾ ರುಚಿಯನ್ನು ದುಪ್ಪಟ್ಟು ಮಾಡುತ್ತದೆ. ಬೇರೆ ಕಡೆ ಸಿಗುವ ಕುಲ್ಚಾಗಿಂತ ಸಿಯಾ ರಾಮ್ ಕುಲ್ಚಾ ಡಿಫರೆಂಟ್ ಆಗಿರಲು ಇದೇ ಕಾರಣ. ದೆಹಲಿಯ ಅತ್ಯುತ್ತಮ ಬೀದಿ ಆಹಾರ ಎಂಬ ಗೌರವ  ಸಿಯಾ ರಾಮ್ ಪಾಕ ಪದ್ಧತಿಗೆ ಸಿಕ್ಕಿದೆ. 

'ಅಮೆರಿಕದ 4692 ಕೋಟಿ ಬೇಡ..' ಸ್ವಂತ ಹಣದಲ್ಲೇ Colombo Port Project ಮುಗಿಸುವ ನಿರ್ಧಾರಕ್ಕೆ ಬಂದ ಅದಾನಿ!

ಅತ್ಯಂತ ಸರಳವಾಗಿರುವ ಸಿಯಾ ರಾಮ್, ಕೋಟಿ ಸಂಪಾದನೆ ಮಾಡಿದ್ರೂ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ಸಿಯಾ ರಾಮ್ ಇಡೀ ದಿನ ತಮ್ಮ ಚೋಲೆ – ಕುಲ್ಚಾ ಕೆಲಸದಲ್ಲಿ ಬ್ಯುಸಿಯಿರ್ತಾರೆ. ಬೆಳಿಗ್ಗೆಯೇ ಅವರ ಕುಟುಂಬ ವಸ್ತುಗಳ ಜೊತೆ ಲಜಪತ್ ನಗರದ ತಮ್ಮ ಜಾಗಕ್ಕೆ ಬರುತ್ತದೆ. ಸ್ಥಳ ಸ್ವಚ್ಛಗೊಳಿಸಿ, ಮಸಾಲೆ ಸಿದ್ಧಪಡಿಸಿಕೊಂಡು ಸಿಯಾ ರಾಮ್ ಗ್ರಾಹಕರಿಗಾಗಿ ಕಾಯ್ತಾರೆ. ಪ್ರತಿಯೊಬ್ಬ ಗ್ರಾಹಕರನ್ನು ದೇವರಂತೆ ನೋಡುವ ಸಿಯಾ ರಾಮ್, ಅತಿ ಕಾಳಜಿಯಿಂದ ಹಾಗೂ ಸ್ವಚ್ಛತೆಯಿಂದ ಸರ್ವ್ ಮಾಡ್ತಾರೆ. ಇಷ್ಟು ವರ್ಷವಾದ್ರೂ ಅವರ ಸ್ವಾದದಲ್ಲಿ ಬದಲಾವಣೆಯಾಗಿಲ್ಲ. ಜನರು ಇಷ್ಟಪಟ್ಟು ಅವರ ಚೋಲೆ – ಕುಲ್ಚಾ ಸೇವನೆ ಮಾಡ್ತಾರೆ. ದಿನಕ್ಕೆ ಅಂದಾಜು 5000ಕ್ಕೂ ಹೆಚ್ಚು ಪ್ಲೇಟ್ ಚೋಲೆ – ಕುಲ್ಚಾವನ್ನು ಸಿಯಾ ರಾಮ್ ಮಾರಾಟ ಮಾಡ್ತಾರೆ. ಒಂದು ಪ್ಲೇಟ್ ಬೆಲೆ ಕೇವಲ 60 ರೂಪಾಯಿ ಇದ್ದು, ಜನಸಾಮಾನ್ಯ ಆರಾಮವಾಗಿ ಇದನ್ನು ಖರೀದಿ ಮಾಡ್ಬಹುದಾಗಿದೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಸಿಯಾ ರಾಮ್ ನೋಡಿದ್ರೆ ಅವರು ಕೋಟ್ಯಾಧಿಪತಿ ಎನ್ನಲು ಸಾಧ್ಯವಿಲ್ಲ. 

Latest Videos
Follow Us:
Download App:
  • android
  • ios