ತಿಂಗಳಾಂತ್ಯಕ್ಕೆ ಬಿಬಿಎಂಪಿ 10 ಸಾವಿರ ಕೋಟಿ ಬಜೆಟ್‌..? 3ನೇ ಬಾರಿಯೂ ಅಧಿಕಾರಿಗಳಿಂದ ಬಜೆಟ್‌ ಮಂಡನೆ

ಬಿಬಿಎಂಪಿ ಆದಾಯದಿಂದ ಬೆಂಗಳೂರಿನಲ್ಲಿ ಮೂಲಸೌಕರ್ಯ ಕಾಮಗಾರಿ ಕೈಗೊಳ್ಳುವುದು ಕಷ್ಟವಾಗಿದೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಬಿಬಿಎಂಪಿಗೆ ನೀಡಿದ ಸುಮಾರು 6 ಸಾವಿರ ಕೋಟಿ ರೂ. ಹಾಗೂ ಬಿಬಿಎಂಪಿ ಆದಾಯ ಸುಮಾರು 4 ಸಾವಿರ ಕೋಟಿ ರೂ. ಒಟ್ಟಾರೆ 10 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಬಜೆಟ್‌ ನಿರೀಕ್ಷಿಸಲಾಗಿದೆ.

bbmp budget likely to be presented by february end ash

ಬೆಂಗಳೂರು (ಫೆಬ್ರವರಿ 20, 2023): ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಬಿಬಿಎಂಪಿಗೆ ನೀಡಿದ ಅನುದಾನ ಆಧರಿಸಿ ಬಜೆಟ್‌ ಸಿದ್ಧತೆ ಕಾರ್ಯ ಆರಂಭವಾಗಿದ್ದು, ಫೆಬ್ರವರಿ 24ರ ವೇಳೆಗೆ ನಗರಾಭಿವೃದ್ಧಿ ಇಲಾಖೆಯ ಅನುಮೋದನೆಗೆ ಕರಡು ಸಲ್ಲಿಸಲಾಗುತ್ತದೆ. ಫೆಬ್ರವರಿ ಅಂತ್ಯ ಅಥವಾ ಮಾಚ್‌ರ್‍ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್‌ ಮಂಡನೆ ಆಗಲಿದೆ ಎಂದು ಬಿಬಿಎಂಪಿ ಹಣಕಾಸು ವಿಭಾಗದ ಮೂಲಗಳು ತಿಳಿಸಿವೆ.

10 ಸಾವಿರ ಕೋಟಿ ರೂ. ಬಜೆಟ್‌?
ಬಿಬಿಎಂಪಿಗೆ ಆಸ್ತಿ ತೆರಿಗೆ ಮಾತ್ರ ಅತಿದೊಡ್ಡ ಆದಾಯದ ಮೂಲವಾಗಿದೆ. 2022-23 ಸಾಲಿನಲ್ಲಿ 10,943.54 ಕೋಟಿ ರೂ. ಬಜೆಟ್‌ ಮಂಡಿಸಲಾಗಿತ್ತು. 4,200 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಅದರಲ್ಲಿ ಈವರೆಗೆ 3 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಇದನ್ನು ಗಮನಿಸಿದರೆ ಬಿಬಿಎಂಪಿ ಆದಾಯದಿಂದ ಬೆಂಗಳೂರಿನಲ್ಲಿ ಮೂಲಸೌಕರ್ಯ ಕಾಮಗಾರಿ ಕೈಗೊಳ್ಳುವುದು ಕಷ್ಟವಾಗಿದೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಬಿಬಿಎಂಪಿಗೆ ನೀಡಿದ ಸುಮಾರು 6 ಸಾವಿರ ಕೋಟಿ ರೂ. ಹಾಗೂ ಬಿಬಿಎಂಪಿ ಆದಾಯ ಸುಮಾರು 4 ಸಾವಿರ ಕೋಟಿ ರೂ. ಒಟ್ಟಾರೆ 10 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಬಜೆಟ್‌ ನಿರೀಕ್ಷಿಸಲಾಗಿದೆ.

ಇದನ್ನು ಓದಿ: BBMP: ಬಿಬಿಎಂಪಿ ಆಸ್ತಿಗಳ ಸಂರಕ್ಷಣೆಗೆ ತಂತಿ ಬೇಲಿ ಹಾಕಲು ನಿರ್ಧಾರ

3ನೇ ಬಾರಿಯೂ ಅಧಿಕಾರಿಗಳಿಂದ ಬಜೆಟ್‌ ಮಂಡನೆ
ಬಿಬಿಎಂಪಿ ಸದಸ್ಯರ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡಿದ್ದು, ಈವರೆಗೆ ಚುನಾವಣೆ ನಡೆದಿಲ್ಲ. ಹೀಗಾಗಿ ಅಧಿಕಾರಿಗಳೇ ಬಜೆಟ್‌ ಮಂಡಿಸಬೇಕಿದೆ. 2021-22 ಮತ್ತು 2022-23ನೇ ಸಾಲಿನ ಬಜೆಟನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತರು ಮಂಡಿಸಿದ್ದರು. ಈ ಬಾರಿಯೂ ಅವರೇ ಮಂಡಿಸಲಿದ್ದಾರೆ.

  • ಆಸ್ತಿ ತೆರಿಗೆಯೇ ಬಿಬಿಎಂಪಿಯ ಅತೀ ದೊಡ್ಡ ಆಸ್ತಿ ಮೂಲ
  • ರಾಜ್ಯ ಸರ್ಕಾರದ ಅನುದಾನದಲ್ಲೇ ಅಭಿವೃದ್ಧಿ ಕಾರ್ಯ
  • ಬಿಬಿಎಂಪಿಯ ಆಸ್ತಿ ತೆರಿಗೆ ಅಂದಾಜು 4 ಸಾವಿರ ಕೋಟಿ
  • ರಾಜ್ಯ ಸರ್ಕಾರದಿಂದ 6 ಸಾವಿರ ಕೋಟಿ ಅನುದಾನ
  • ಇದನ್ನು ಆಧರಿಸಿ ಬಜೆಟ್‌ ರೂಪಿಸುತ್ತಿರುವ ಬಿಬಿಎಂಪಿ 
  • ನಗರಾಭಿವೃದ್ಧಿ ಇಲಾಖೆಯ ಅನುಮೋದನೆಗೆ ಸಲ್ಲಿಕೆ
  • ಸರ್ಕಾರದಿಂದ ಒಪ್ಪಿಗೆ ಸಿಕ್ಕ ಬಳಿಕ ಬಜೆಟ್‌ ಮಂಡನೆ ಮಾಡಲಿರುವ ಹಣಕಾಸು ವಿಭಾಗದ ವಿಶೇಷ ಆಯುಕ್ತರು

ಇದನ್ನೂ ಓದಿ: ಬಿಬಿಎಂಪಿ ಆಡಳಿತಕ್ಕೆ 7400 ಸಿಬ್ಬಂದಿ ಸಾಲಲ್ಲ; ಇನ್ನೂ 700 ಸಿಬ್ಬಂದಿ ಬೇಕು! 

Latest Videos
Follow Us:
Download App:
  • android
  • ios