ನವದೆಹಲಿ(ಮಾ.25): ಸಾರ್ವಜನಿಕ ಹಾಗೂ ಖಾಸಗಿ ವಲಯದ ಎಲ್ಲಾ ಬ್ಯಾಂಕ್‌ಗಳು ಮಾರ್ಚ್ 7 ರಿಂದ ಏಪ್ರಿಲ್ 4ರ ನಡುವೆ ಬರೋಬ್ಬರಿ ಏಳು ದಿನ ಮುಚ್ಚಿರಲಿವೆ. ಹೀಗಾಗಿ ಬ್ಯಾಂಕ್ ಸಂಬಂಧಿ ಏನೇ ಕೆಲಸವಿದ್ದರೂ ಈ ದಿನಾಂಕವನ್ನು ನೋಟ್‌ ಮಾಡಿಟ್ಟುಕೊಳ್ಳಿ. ಮಾರ್ಚ್ 27 ರಿಂದ ಮಾರ್ಚ್ 29ರವರೆಗೆ ಬ್ಯಾಂಕ್ ಸತತ ಮೂರು ದಿನ ಬಂದ್ ಇರಲಿವೆ. ಯಾಕೆಂದರೆ ಮಾರ್ಚ್ 27 ನಾಲ್ಕನೇ ಶನಿವಾರವಾಗಿದ್ದರೆ, ಮಾರ್ಚ್ 28 ರವಿವಾರ. ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟಿನಲ್ಲಿ ನೀಡಲಾದ ರಜಾ ಪಟ್ಟಿಯನ್ವಯ ಮಾರ್ಚ್ 29ರಂದು ಹೋಳಿ ಹಬ್ಬದ ಪ್ರಯುಕ್ತ ರಜೆ ಇರಲಿದೆ.

10 ಕೋಟಿ ಭಾರತೀಯರ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಮಾಹಿತಿ ಸೋರಿಕೆ!

ಇನ್ನು ಆರ್‌ಬಿಐ ಅನ್ವಯ ಮಾರ್ಚ್ 30ರಂದು ಬ್ಯಾಂಕ್‌ಗಳು ಪಾಟ್ನಾ(ಬಿಹಾರ)ದಲ್ಲಿ ಮುಚ್ಚಿರಲಿದ್ದು, ಉಳಿದೆಡೆ ತೆರೆದಿರಲಿವೆ. ಪಾಟ್ನಾದಲ್ಲಿ ಮಾರ್ಚ್ 27 ರಿಂದ ಏಪ್ರಿಲ್ 4ರವರೆಗೆ ಕೇವಲ ಎರಡು ದಿನವಷ್ಟೇ, ಮಾರ್ಚ್ 20 ಹಾಗೂ ಏಪ್ರಿಲ್ 3 ರಂದು ಬ್ಯಾಂಕ್ ಕಾರ್ಯ ನಿರ್ವಹಿಸಲಿದೆ. 

27 ಮಾರ್ಚ್ : ನಾಲ್ಕನೇ ಶನಿವಾರ

28 ಮಾರ್ಚ್ : ಭಾನುವಾರ

29 ಮಾರ್ಚ್ : ಹೋಳಿ ಪ್ರಯುಕ್ತ ರಜೆ

30 ಮಾರ್ಚ್ : ಪಾಟ್ನಾದಲ್ಲಿ ಹೋಳಿ ಪ್ರಯುಕ್ತ ರಜೆ

31 ಮಾರ್ಚ್ : ಹಣಕಾಸು ವರ್ಷ ಮುಕ್ತಾಯ

ಜ.1ರಿಂದ ಬ್ಯಾಂಕಲ್ಲಿ ಹೊಸ ನಿಯಮಗಳು: ಏನೇನು ಮಾಹಿತಿ ಅಗತ್ಯ? ಇಲ್ಲಿದೆ ವಿವರ

ಇದನ್ನು ಹೊರತುಪಡಿಸಿ 2021ರ ಏಪ್ರಿಲ್ 1ರಂದು ಅಕೌಂಟ್‌ ಕ್ಲೋಸಿಂಗ್ ಇರುವುದರಿಂದ ರಜೆ ಘೋಷಿಸಲಾಗಿದೆ. ಏಪ್ರಿಲ್ 2ರಂದು ಗುಡ್‌ ಫ್ರೈಡೆ ಹಾಗೂ ಏಪ್ರಿಲ್ ರಂದು ಭಾನುವಾರ ಹೀಗಾಗಿ ರಜೆ ಇರಲಿದೆ.