ಜೆಟ್ ಏರ್’ವೇಸ್ ಸ್ವಾಧೀನಕ್ಕೆ ಬ್ಯಾಂಕ್ ಒಕ್ಕೂಟಗಳ ಒತ್ತಾಯ| ಪ್ರಧಾನಿ ಮೋದಿಗೆ ಪತ್ರ ಬರೆದ ಅಖಿಲ ಭಾರತೀಯ ಬ್ಯಾಂಕ್ ನೌಕರರ ಅಸೋಸಿಯೇಷನ್| ‘ಏರ್’ಲೈನ್ಸ್ ಗೆ ಬ್ಯಾಂಕುಗಳು ಸಾಲ ನೀಡದಿರುವಂತೆ  ಸರ್ಕಾರ ಖಾತ್ರಿಪಡಿಸಿಕೊಳ್ಳಬೇಕು’| ಹೆಚ್ಚಿನ ರೀತಿಯ ಸಾಲ ನೀಡುವಂತೆ ಒತ್ತಾಯಿಸುವಂತಿಲ್ಲ ಎಂದ ಒಕ್ಕೂಟ|

ನವದೆಹಲಿ(ಏ.19): 22 ಸಾವಿರ ಉದ್ಯೋಗಿಗಳ ಭವಿಷ್ಯ ಕಾಪಾಡುವ ನಿಟ್ಟಿನಲ್ಲಿ ಜೆಟ್ ಏರ್’ವೇಸ್ ನ್ನು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬ್ಯಾಂಕ್ ಒಕ್ಕೂಟಗಳು ಆಗ್ರಹಿಸಿವೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಏರ್’ಲೈನ್ಸ್ ಗೆ ಬ್ಯಾಂಕುಗಳು ಸಾಲ ನೀಡದಿರುವಂತೆ ಸರ್ಕಾರ ಖಾತ್ರಿಪಡಿಸಿಕೊಳ್ಳಬೇಕು ಎಂದು ಅಖಿಲ ಭಾರತೀಯ ಬ್ಯಾಂಕ್ ನೌಕರರ ಅಸೋಸಿಯೇಷನ್ ಮೋದಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

400 ಕೋಟಿ ರೂ. ಮಧ್ಯಂತರ ಹಣಕ್ಕೆ ಸಾಲದಾತರು ನಿರಾಕರಿಸಿದ ಬಳಿಕ, ಜೆಟ್ ಏರ್’ವೇಸ್ ಕಳೆದ ಬುಧವಾರದಿಂದ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ಬ್ಯಾಂಕುಗಳು ಜೆಟ್ ಏರ್’ವೇಸ್ ಕಂಪನಿಗೆ ಹೆಚ್ಚಿನ ರೀತಿಯ ಸಾಲ ನೀಡುವಂತೆ ಒತ್ತಾಯಿಸುವಂತಿಲ್ಲ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.