ಮುಂಬೈ(ಡಿ.25): ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ (ಅನುತ್ಪಾದಕ ಆಸ್ತಿ ಅಥವಾ ಎನ್‌ಪಿಎ) ಸೆಪ್ಟೆಂಬರ್‌ ಅಂತ್ಯಕ್ಕೆ ಶೇ.9.1ರಷ್ಟು ಸುಧಾರಿಸಿದೆ ಎಂದು ಆರ್‌ಬಿಐ ತಿಳಿಸಿದೆ.

2018ರಲ್ಲಿ ಶೇ.11.2ರಷ್ಟಿದ್ದ ಎನ್‌ಪಿಎ ಇದೀಗ ಶೇ.9.1ಕ್ಕೆ ಇಳಿದಿದೆ. ಎನ್‌ಪಿಎ ಸ್ಥಿರವಾಗಿ ಮತ್ತು ಕಡಿಮೆಯಾಗುತ್ತಿರುವುದು, ಬ್ಯಾಂಕಿಂಗ್ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ ಎಂದು ಆರ್‌ಬಿಐ ಹೇಳಿದೆ.

RBIಗೂ ಈರುಳ್ಳಿ ಬಿಸಿ, ಬಡ್ಡಿ ದರ ಕಡಿತಕ್ಕೆ ಹಿಂದೇಟು!

2019ರ ಹಣಕಾಸು ವರ್ಷದಲ್ಲಿ ಎಲ್ಲ ವಾಣಿಜ್ಯ ಬ್ಯಾಂಕ್‌ಗಳಲ್ಲಿನ ಎನ್‌ಪಿಎ ಶೇ.3.7ಕ್ಕೆ ಇಳಿಕೆಯಾಗಿದ್ದು, 2018ನೇ ಹಣಕಾಸು ವರ್ಷದಲ್ಲಿಇದು ಶೇ.6ರಷ್ಟಿತ್ತು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

‘ಬ್ಯಾಂಕ್‌ಗಳಲ್ಲಿಕಳೆದ ಏಳು ವರ್ಷಗಳಿಂದ ಗಣನೀಯವಾಗಿ ಹೆಚ್ಚುತ್ತಿದ್ದ ಎನ್‌ಪಿಎ ನಿವ್ವಳ ಅನುಪಾತ ತಗ್ಗಿದ್ದು, ಪ್ರಸಕ್ತ ಸಾಲಿನಲ್ಲಿ ಕಳಪೆ ಸಾಲಗಳ ಗುರುತಿಸುವ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಬ್ಯಾಂಕಿಂಗ್‌ ಅಭಿವೃದ್ಧಿ ಮತ್ತು ಟ್ರೆಂಡ್'ಗಳಿಗೆ ಸಂಬಂಧಿಸಿದ ತನ್ನ ವರದಿಯಲ್ಲಿ ಆರ್‌ಬಿಐ ಈ ಮಾಹಿತಿಯನ್ನು ಪ್ರಕಟಿಸಿದೆ. ಬ್ಯಾಂಕಿಂಗ್ ಕ್ಷೇತ್ರದ ಬೆಳವಣಿಗೆಗೆ ಇದು ಸಹಕಾರಿ ಎಂದು ಆರ್‌ಬಿಐ ಅಭಿಪ್ರಾಯಪಟ್ಟಿದೆ.

ಈ ಎರಡು ಬ್ಯಾಂಕ್‌ಗಳ ವಿಲೀನಕ್ಕೆ ಆರ್‌ಬಿಐ ನಕಾರ!

5 ಕೋಟಿ ಮತ್ತು ಅದಕ್ಕೂ ಹೆಚ್ಚಿನ ಮೊತ್ತದ ಎನ್‌ಪಿಎ ಖಾತೆಗಳ ಪಾಲು ದೇಶದ ಒಟ್ಟು ಜಿಎನ್'ಪಿಎಯಲ್ಲಿಶೇ.91ರಷ್ಟಿದೆ. ಸಾಲ ವಸೂಲಾತಿಗೆ ಸಂಬಂಧಿಸಿದ ಆರ್‌ಬಿಐ ನಿಯಮಗಳು ಮತ್ತು ಬ್ಯಾಂಕ್‌ಗಳ ಪ್ರಯತ್ನಗಳು ಈ ನಿಟ್ಟಿನಲ್ಲಿ ಫಲ ನೀಡುತ್ತಿವೆ.

ದಿವಾಳಿ ಕಾಯ್ದೆಯು ಎನ್‌ಪಿಎ ನಿರ್ವಹಣೆಗೆ ಪೂರಕವಾಗಿದೆ ಎಂದು ಆರ್‌ಬಿಐ ತನ್ನ ವರದಿಯಲ್ಲಿ ಹೇಳಿದೆ.

ಡಿಸೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ