ನವದೆಹಲಿ[ಅ.10]: ಲಕ್ಷ್ಮೀ ವಿಲಾಸ್‌ ಬ್ಯಾಂಕ್‌(ಎಲ್‌ವಿಬಿ)ನಲ್ಲಿ ಇಂಡಿಯಾಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ವಿಲೀನದ ಪ್ರಸ್ತಾವನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್‌(ಆರ್‌ಬಿಐ) ತಿರಸ್ಕರಿಸಿದೆ.

ICICI ಗ್ರಾಹಕರಿಗೆ ಬ್ಯಾಡ್ ನ್ಯೂಸ್: ಅ.16ರಿಂದ ಪ್ರತಿ ವ್ಯವಹಾರಕ್ಕೂ ಶುಲ್ಕ!

ಇಂಡಿಯಾ ಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಹಾಗೂ ಇಂಡಿಯಾ ಬುಲ್ಸ್‌ ಕಮರ್ಷಿಯಲ್‌ ಕ್ರೆಡಿಟ್‌ ಲಿ. ಅನ್ನು ಲಕ್ಷ್ಮೇ ವಿಲಾಸ್‌ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲು ಅನುಮತಿ ನೀಡಲಾಗದು ಎಂದು ಆರ್‌ಬಿಐ ಬುಧವಾರ ಪತ್ರ ಮುಖೇನ ಮಾಹಿತಿ ನೀಡಿದೆ ಎಂದು ಷೇರು ಮಾರುಕಟ್ಟೆಗೆ ನೀಡಿದ ವರದಿಯಲ್ಲಿ ಲಕ್ಷ್ಮೇ ವಿಲಾಸ್‌ ಬ್ಯಾಂಕ್‌ ತಿಳಿಸಿದೆ.

ICICI ಗ್ರಾಹಕರಿಗೆ ಬ್ಯಾಡ್ ನ್ಯೂಸ್: ಅ.16ರಿಂದ ಪ್ರತಿ ವ್ಯವಹಾರಕ್ಕೂ ಶುಲ್ಕ!

ಕಳೆದ 2 ವರ್ಷಗಳಿಂದ ಸಮರ್ಪಕ ಬಂಡವಾಳ ಕೊರತೆ, ಸ್ವತ್ತುಗಳ ಮೇಲಿನ ನಕರಾತ್ಮಕ ಆದಾಯ, ಹೆಚ್ಚು ಪ್ರಮಾಣದ ವಸೂಲಾಗದ ಸಾಲದಿಂದಾಗಿ ಲಕ್ಷ್ಮೇ ವಿಲಾಸ್‌ ಕೋರಿಕೆಯನ್ನು ಆರ್‌ಬಿಐ ತಿರಸ್ಕರಿಸಲಾಗಿದೆ ಎನ್ನಲಾಗಿದೆ.