Asianet Suvarna News Asianet Suvarna News

Good Business: ಹೊಸ ವರ್ಷ ಬ್ಯಾಂಕ್ ಮಿತ್ರನಾಗಿ ಹಣ ಸಂಪಾದಿಸಿ

ಸರ್ಕಾರ ಅನೇಕ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುತ್ತಿದೆ. ಅದ್ರಲ್ಲಿ ಬ್ಯಾಂಕ್ ಮಿತ್ರ ಕೂಡ ಒಂದು. ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರು ಅಥವಾ ವ್ಯವಹಾರ ಶುರು ಮಾಡುವ ಪ್ಲಾನ್ ನಲ್ಲಿರುವವರು ಬ್ಯಾಂಕ್ ಜೊತೆ ಕೈ ಜೋಡಿಸಿ ಹಣ ಗಳಿಕೆ ಶುರು ಮಾಡಬಹುದು.
 

Bank Mitra Csc Registration
Author
First Published Jan 7, 2023, 11:25 AM IST

ಸದ್ಯ ನೀವು ನಿರುದ್ಯೋಗಿಯಾಗಿದ್ದು, ಉತ್ತಮ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಮಿನಿ ಬ್ಯಾಂಕ್ ತೆರೆಯಬಹುದು. ಇದು ವ್ಯವಹಾರ ಶುರು ಮಾಡಲು ಉತ್ತಮ ಆಯ್ಕೆಯಾಗಿದೆ. ಮಿನಿ ಬ್ಯಾಂಕ್ ನಿರುದ್ಯೋಗಿ ಯುವಕರು ಮತ್ತು ನಿವೃತ್ತ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗದ ಅತ್ಯುತ್ತಮ ಸಾಧನವಾಗಿದೆ. ನಾವಿಂದು ಈ ಮಿನಿ ಬ್ಯಾಂಕ್ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ. 

ಮಿನಿ ಬ್ಯಾಂಕ್ (Mini Bank) ಎಂದರೆ ಗ್ರಾಹಕ ಸೇವಾ ಕೇಂದ್ರ. ಇದನ್ನು ಬ್ಯಾಂಕ್ ಸಿಎಸ್ಪಿ (CSP) ಅಥವಾ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ (Correspondent ) ಔಟ್ಲೆಟ್ ಎಂದೂ ಕರೆಯಲಾಗುತ್ತದೆ. ಸಿಎಸ್ಪಿ ನಿರ್ವಹಿಸುವವರನ್ನು ಬ್ಯಾಂಕ್ ಮಿತ್ರ ಅಥವಾ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಎಂದು ಕರೆಯಲಾಗುತ್ತದೆ. ಬ್ಯಾಂಕ್‌ಗಳು ನಾಗರಿಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಸಾಧ್ಯವಾಗದ ಸ್ಥಳಗಳಲ್ಲಿ ಬ್ಯಾಂಕ್ ಮಿತ್ರರನ್ನು ನೇಮಿಸುತ್ತದೆ. ಬ್ಯಾಂಕ್ ಖಾತೆ ತೆರೆಯುವುದು, ವಿಮೆ ಪಡೆಯುವುದು, ಹಣ (Money) ಜಮಾ ಮಾಡುವುದು ಸೇರಿದಂತೆ ಇತರ ಬ್ಯಾಂಕ್ ಕೆಲಸಗಳಲ್ಲಿ ಇತರರಿಗೆ ಸಹಾಯ ಮಾಡವುದು ಬ್ಯಾಂಕ್ ಮಿತ್ರನ ಕೆಲಸವಾಗಿರುತ್ತದೆ.

ಮಿನಿ ಬ್ಯಾಂಕ್ ಯಾವಾಗ ಆರಂಭವಾಯಿತು? : ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ನು ಅನುಷ್ಠಾನಗೊಳಿಸಿದ ಸಮಯದಲ್ಲಿ ಗ್ರಾಹಕ ಸೇವಾ ಕೇಂದ್ರಗಳನ್ನು ಶುರು ಮಾಡಲಾಯ್ತು. ಇದನ್ನು ಬ್ಯಾಂಕ್ ಮಿತ್ರ ಎಂದು ಕರೆಯಲಾಗುತ್ತದೆ. ಈಗ್ಲೂ ಅನೇಕ ಹಳ್ಳಿಗಳಲ್ಲಿ ಬ್ಯಾಂಕ್ ಸೌಲಭ್ಯವಿಲ್ಲ. ನೀವು ಆ ಹಳ್ಳಿಗಳಲ್ಲಿ ಮಿನಿ ಬ್ಯಾಂಕ್ ಶುರು ಮಾಡಬಹುದು.   

BUSINESS IDEA: ಹತ್ತನೆ ಕ್ಲಾಸ್ ಪಾಸ್ ಆದ್ರೂ ಸಾಕು, ಹಳ್ಳಿಯಲ್ಲಿ ಶುರು ಮಾಡಿ ಈ ಬ್ಯುಸಿನೆಸ್

ಇದರ ಆರಂಭ ಹೇಗೆ? : ಜನ್ ಧನ್ ಯೋಜನೆ ಅಡಿಯಲ್ಲಿ, ನೀವು ನಗರ ಅಥವಾ ಹಳ್ಳಿಯಲ್ಲಿ ಎಲ್ಲಿಯಾದರೂ ಮಿನಿ ಬ್ಯಾಂಕ್ ತೆರೆಯಬಹುದು. ಬ್ಯಾಂಕಿನಿಂದ ನಿಗದಿತ ಸಂಬಳ ನಿಮಗೆ ಸಿಗುತ್ತದೆ.  ಹೆಚ್ಚಿನ ಬ್ಯಾಂಕ್‌ಗಳು 5000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಸಂಬಳ ನೀಡುತ್ತವೆ.  ಇದಲ್ಲದೇ ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಪ್ರತಿಯೊಂದು ವ್ಯವಹಾರಕ್ಕೂ ಪ್ರತ್ಯೇಕ ಕಮಿಷನ್ ಇರುತ್ತದೆ.   
ಇದನ್ನು ತೆರೆಯಲು ಮೊದಲು ಸಿಎಸ್ಸಿ ಬ್ಯಾಂಕಿಂಗ್ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್ http://bankmitra.csccloud.in/  ಗೆ ಹೋಗಬೇಕು. ಹೊಸ ಬ್ಯಾಂಕ್ ಮಿತ್ರ ನೋಂದಣಿಗೆ ನೀವು ಆರು ಹಂತ ಪೂರ್ಣಗೊಳಿಸಬೇಕಾಗುತ್ತದೆ. ಬ್ಯಾಂಕ್ ಮಿತ್ರಕ್ಕೆ ನೋಂದಣಿ ಮಾಡಿದ ನಂತರ ನೀವು ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಬ್ಯಾಂಕ್ ಕರೆಸ್ಪಾಂಡೆಂಟ್ ಅಥವಾ  ಬ್ಯಾಂಕ್ ಮಿತ್ರರಾಗಬಹುದು.  

ಮಿನಿ ಬ್ಯಾಂಕ್ ನಲ್ಲಿದೆ ಈ ಸೌಲಭ್ಯ : ಉಳಿತಾಯ ಖಾತೆ ತೆರೆಯುವುದು, ಆರ್ ಡಿ ಅಥವಾ ಎಫ್ ಡಿ ತೆರೆಯುವ ಸೌಲಭ್ಯ, ನಗದು ಠೇವಣಿ ಅಥವಾ ಹಿಂಪಡೆಯುವ ಸೌಲಭ್ಯ, ಓವರ್ಡ್ರಾಫ್ಟ್ ಸೇವೆ, ಕಿಸಾನ್ ಕ್ರೆಡಿಟ್ ಕಾರ್ಡ್, ಪಿಂಚಣಿ ಖಾತೆ  ಮತ್ತು ವಿಮೆ ಮತ್ತು ಮ್ಯೂಚುಯಲ್ ಫಂಡ್ ಉತ್ಪನ್ನಗಳ ಮಾರಾಟ, ಕ್ರೆಡಿಟ್ ಕಾರ್ಡ್ ಸೌಲಭ್ಯ ಈ ಎಲ್ಲ ಸೇವೆ ಇದ್ರಲ್ಲಿ ಲಭ್ಯವಿದೆ. 

Business Ideas : ಆನ್ಲೈನ್ ಯುಗದಲ್ಲಿ ಈ ಬ್ಯುಸಿನೆಸ್ ಶುರು ಮಾಡಿ, ಕೈಗೆ ಸೇರುತ್ತೆ ದುಡ್ಡು

ಎಷ್ಟು ಹೂಡಿಕೆ ಅಗತ್ಯ? : ಮಿನಿ ಬ್ಯಾಂಕ್ ತೆರೆಯಲು ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ.  100 ಚದರ ಅಡಿ ಜಾಗ, ಡೆಸ್ಕ್ಟಾಪ್ ಅಥವಾ ಲ್ಯಾಪ್ಟಾಪ್, ಪ್ರಿಂಟರ್, ಸ್ಕ್ಯಾನರ್, ಇಂಟರ್ನೆಟ್ ಸಂಪರ್ಕ ಅಗತ್ಯವಿರುತ್ತದೆ.  ಮಿನಿ ಬ್ಯಾಂಕ್ ತೆರೆಯಲು ನೀವು ಬ್ಯಾಂಕಿನಿಂದ ಸಾಲವನ್ನು ಸಹ ತೆಗೆದುಕೊಳ್ಳಬಹುದು. ನೀವು ಒಟ್ಟು 1.25 ಲಕ್ಷದವರೆಗೆ ಸಾಲ ಪಡೆಯಬಹುದು. ಇದನ್ನು ನೀವು ಎಲ್ಲಿ ಬೇಕಾದ್ರೂ ತೆರೆಯಬಹುದು. ನಗರಗಳಲ್ಲಿ  ಅವುಗಳನ್ನು ವಾರ್ಡ್‌ಗಳ ಆಧಾರದ ಮೇಲೆ ತೆರೆಯಲಾಗುತ್ತದೆ. ಆದರೆ ಹಳ್ಳಿಗಳಲ್ಲಿ  ಬ್ಯಾಂಕುಗಳು ತಮ್ಮ ಪ್ರದೇಶದ ಆಧಾರದ ಮೇಲೆ ಬ್ಯಾಂಕ್ ಮಿತ್ರ ಮತ್ತು ಗ್ರಾಹಕ ಸೇವಾ ಕೇಂದ್ರಗಳನ್ನು ಆಯ್ಕೆಮಾಡುತ್ತವೆ.
 

Follow Us:
Download App:
  • android
  • ios