Asianet Suvarna News Asianet Suvarna News

Business Idea: ಹತ್ತನೆ ಕ್ಲಾಸ್ ಪಾಸ್ ಆದ್ರೂ ಸಾಕು, ಹಳ್ಳಿಯಲ್ಲಿ ಶುರು ಮಾಡಿ ಈ ಬ್ಯುಸಿನೆಸ್

ಬುದ್ಧಿವಂತಿಕೆ, ಶ್ರಮವಿದ್ರೆ ಎಲ್ಲಿ ಬೇಕಾದ್ರೂ ಹಣ ಗಳಿಸಬಹುದು. ಹಳ್ಳಿಯಲ್ಲಿ ಕೂಡ ಆದಾಯ ಗಳಿಸಲು ಸಾಕಷ್ಟು ಮಾರ್ಗವಿದೆ. ನಿಮಗೆ ಯಾವುದು ಸೂಕ್ತ ಎಂಬುದನ್ನು ನೋಡಿ ನೀವು ಬ್ಯುಸಿನೆಸ್ ಆಯ್ದುಕೊಂಡ್ರೆ ಎಂದಿಗೂ ನಷ್ಟವಾಗೋದಿಲ್ಲ.
 

Know The Ways To Earn Money In The Village
Author
First Published Jan 6, 2023, 3:24 PM IST

ಹಳ್ಳಿಗಳಲ್ಲಿ ಹಣ ಗಳಿಸಲು ಅವಕಾಶ ಇಲ್ಲ ಎಂದು ಅನೇಕರು ಹೇಳ್ತಿರುತ್ತಾರೆ. ಇದು ಸುಳ್ಳು. ನಗರಕ್ಕೆ ಹೋಲಿಕೆ ಮಾಡಿದ್ರೆ ಹಳ್ಳಿಗಳಲ್ಲಿ ಆಯ್ಕೆ ಕಡಿಮೆ ಆದ್ರೆ ಅವಕಾಶ ಇಲ್ಲವೇ ಇಲ್ಲ ಎಂಬುದು ನಿಜವಲ್ಲ. ಹಳ್ಳಿಗಳಲ್ಲಿ ವಾಸಿಸುವ ಜನರು ಕೂಡ ಅನೇಕ ರೀತಿಯಲ್ಲಿ ಆದಾಯ ಗಳಿಸಬಹುದು. ನಾವಿಂದು ಹಳ್ಳಿಯಲ್ಲಿ ಮಾಡಬಹುದಾದ ಕೆಲ ಬ್ಯುಸಿನೆಸ್ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.

ಈ ಬ್ಯುಸಿನೆಸ್ (Business) ಗೆ ಹೆಚ್ಚಿನ ವಿದ್ಯೆಯ ಅಗತ್ಯವಿಲ್ಲ. ನೀವು ಹತ್ತನೇ ತರಗತಿ ಪಾಸ್ ಆಗಿದ್ರೂ ಈ ವ್ಯವಹಾರ ಶುರು ಮಾಡಬಹುದು. ಹಾಗೆಯೇ ನಿಮಗೆ ಹೆಚ್ಚು ಹಣ (Money)  ಹೂಡಿಕೆ (Investment) ಮಾಡಬೇಕಾಗಿಲ್ಲ.

ಹಳ್ಳಿಗಳಲ್ಲಿ ಶುರು ಮಾಡಿ ಈ ವ್ಯವಹಾರ : ರಸಗೊಬ್ಬರದ ಅಂಗಡಿ : ಹಳ್ಳಿಗಳಲ್ಲಿ ಗೊಬ್ಬರ ಅಗತ್ಯ. ಹಾಗಾಗಿ ನೀವು ಗೊಬ್ಬರದ ಅಂಗಡಿ ಶುರು ಮಾಡಬಹುದು. ಇದು ಲಾಭದಾಯಕ ವ್ಯಾಪಾರವಾಗಿದೆ.  ಇದಕ್ಕೆ ಪರವಾನಗಿ ಪಡೆಯಬೇಕು. ಅಗತ್ಯಕ್ಕೆ ತಕ್ಕಂತೆ ರೈತರಿಗೆ ಗೊಬ್ಬರ ಒದಗಿಸಬೇಕಾದ ಕಾರಣ ನೀವು ಸುಮಾರು 5 ಲಕ್ಷದಿಂದ 10 ಲಕ್ಷದವರೆಗೆ ಗೊಬ್ಬರ ಸ್ಟಾಕ್ ಇಡಬೇಕು.

Business Ideas : ಆನ್ಲೈನ್ ಯುಗದಲ್ಲಿ ಈ ಬ್ಯುಸಿನೆಸ್ ಶುರು ಮಾಡಿ, ಕೈಗೆ ಸೇರುತ್ತೆ ದುಡ್ಡು

ಬೀಜಗಳ ಅಂಗಡಿ (Seeds Shop) : ಗ್ರಾಮೀಣ ಭಾರತದ ಜನರ ಮುಖ್ಯ ಉದ್ಯೋಗ ಕೃಷಿ. ಕೃಷಿಯಲ್ಲಿ ಮೊದಲ ಅವಶ್ಯಕತೆ ಬೀಜಗಳು. ನೀವು  ಬೀಜ ಸಂಗ್ರಹಣೆಯ ವ್ಯವಹಾರವನ್ನು ಪ್ರಾರಂಭಿಸಬಹುದು. ಇದಕ್ಕಾಗಿ ನಿಮಗೆ ಸುಮಾರು 50 ಸಾವಿರ ರೂಪಾಯಿ ಖರ್ಚು ಬರುತ್ತದೆ. ಇದಕ್ಕೂ ನೀವು ಪರವಾನಗಿ ತೆಗೆದುಕೊಳ್ಳಬೇಕು. ಉತ್ತಮ ಗುಣಮಟ್ಟದ ಬೀಜಗಳನ್ನು ನೀವು ನೀಡಿದ್ರೆ ಹೆಚ್ಚು ಆದಾಯ ಪಡೆಯಬಹುದು. ನಿಮ್ಮ  ಈ ವ್ಯವಹಾರಕ್ಕೆ ಮುದ್ರಾ ಸಾಲ ಸಿಗುತ್ತದೆ. 

CSC ಕೇಂದ್ರ : 10 ನೇ ತೇರ್ಗಡೆ ಹೊಂದಿರುವ 18 ವರ್ಷ ನಿರುದ್ಯೋಗಿಯಾಗಿರುವ ಯಾವುದೇ ವ್ಯಕ್ತಿ ಸಿಎಸ್ಸಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದು. ಪ್ರತಿ ತಿಂಗಳು 3 ರಿಂದ 4 ಸಾವಿರ ರೂಪಾಯಿಯನ್ನು ನೀವು ಇದ್ರಿಂದ ಗಳಿಸಬಹುದು. ಕೇಂದ್ರ ಸರ್ಕಾರ ಒದಗಿಸುವ ಸೌಲಭ್ಯಗಳನ್ನು ನಾಗರಿಕರಿಗೆ ತಲುಪಿಸುವುದು ಸಿಎಸ್‌ಸಿ ಕೇಂದ್ರದ ಕೆಲಸವಾಗಿದೆ. ಇದಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಪರವಾನಗಿ ಪಡೆಯಬೇಕು. 

ಮಣ್ಣು ಪರೀಕ್ಷಾ ಕೇಂದ್ರ (Soil Test Center) : ಮಣ್ಣು ಪರೀಕ್ಷಾ ಕೇಂದ್ರದ ಮೂಲಕವೂ ಗ್ರಾಮದಲ್ಲಿ ಉತ್ತಮ ಆದಾಯ ಗಳಿಸಬಹುದು. ಮಣ್ಣು ಪರೀಕ್ಷಾ ಕೇಂದ್ರಕ್ಕೆ 11 ಜನ ಸದಸ್ಯರಿರಬೇಕು. ಎಲ್ಲಾ ರೈತರು ತಮ್ಮ ಜಮೀನಿನ ಮಣ್ಣನ್ನು ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಂಡು ಉತ್ತಮ ಬೆಳೆ ಬೆಳೆಯಬಹುದು. 

ನರ್ಸರಿ (Nursery) : ಗ್ರಾಮದಲ್ಲಿ ನರ್ಸರಿಯನ್ನೂ ಆದಾಯದ ಮೂಲವನ್ನಾಗಿ ಮಾಡಿಕೊಳ್ಳಬಹುದು. ಭೂಮಿ ಹೊಂದಿದ್ದರೆ  ಕೆಲವು ಹೂವಿನ ಗಿಡಗಳು ಮತ್ತು ಕೆಲವು  ಗಿಡಗಳನ್ನು ಬೆಳೆಸಿ, ಅದನ್ನು ಮಾರಾಟ ಮಾಡುವ ಮೂಲಕ ನೀವು ಹಣ ಗಳಿಸಬಹುದು. 10 ರಿಂದ 50 ಸಾವಿರ ರೂಪಾಯಿಗಳಲ್ಲಿ ನೀವು ಈ ವ್ಯವಹಾರ ಶುರು ಮಾಡಬಹುದು. 

ಢಾಬಾ : ಅಡುಗೆಯಲ್ಲಿ ಆಸಕ್ತಿಯಿದ್ದರೆ, ರಸ್ತೆ ಬದಿಯಲ್ಲಿ ನೀವು ಢಾಬಾ ತೆರೆಯಬಹುದು. ನೀವು ಮುಖ್ಯ ರಸ್ತೆ ಬದಿಯಲ್ಲಿ ಇದನ್ನು ಶುರು ಮಾಡಬೇಕಾಗುತ್ತದೆ. ಇಲ್ಲವೆ ಜನನಿಬಿಡಿ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವೇ ತರಕಾರಿ ಬೆಳೆಯುತ್ತಿದ್ದರೆ ಆಹಾರಕ್ಕೆ ಅದನ್ನೇ ಬಳಸಬಹುದು. ಜೊತೆಗೆ ಡಾಭಾದಲ್ಲಿ ಅದನ್ನು ಮಾರಾಟ ಕೂಡ ಮಾಡಬಹುದು. ಢಾಬಾ ತೆರೆಯಲು ಪರವಾನಗಿ ಮತ್ತು ಜಿಎಸ್ಟಿಎನ್ ಸಂಖ್ಯೆ ಅಗತ್ಯವಿರುತ್ತದೆ.  

ಮನೆ ಇರೋರು ಎಲ್ಲರೂ ಹಿಡಿ ಬಳಸ್ತಾರೆ, ವ್ಯಾಪಾರ ಆಗೋದು ಪಕ್ಕಾ

ಕೋಳಿ ಸಾಗಣೆ (Poultry Farming) : ಹಳ್ಳಿಯಲ್ಲಿ ಹಣ ಗಳಿಸಲು ಕೋಳಿ ಸಾಕಣೆ ಒಂದು ಉತ್ತಮ ಮಾರ್ಗವಾಗಿದೆ.  50 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಿ ನೀವು ಕೋಳಿ ಫಾರಂ ಆರಂಭಿಸಬಹುದು. ನಗರಕ್ಕೆ ಹೋಗಿ ಮೊಟ್ಟೆ ಮತ್ತು ಕೋಳಿ ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದು. 
 

Follow Us:
Download App:
  • android
  • ios