ಏಪ್ರಿಲ್‌ನಲ್ಲಿ ಸಾಲು ಸಾಲು ಸರ್ಕಾರಿ ರಜೆ| ಸರ್ಕಾರಿ ರಜೆಯ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೂ ರಜೆ| ಹಲವು ದಿನ ಸ್ಥಗಿತಗೊಳ್ಳಲಿದೆ ಬ್ಯಾಂಕ್ ಸೇವೆ| ಏಪ್ರಿಲ್‌ನಲ್ಲಿ ಕರ್ನಾಟಕದಲ್ಲಿ ಎಷ್ಟು ದಿನ ಬ್ಯಾಂಕ್ ರಜೆ|

ಬೆಂಗಳೂರು(ಏ.01): 2019ರ ಏಪ್ರಿಲ್ ತಿಂಗಳು ಆರಂಭವಾಗಿದ್ದು, ಸರ್ಕಾರಿ ರಜೆಗಳ ಹಿನ್ನೆಲೆಯಲ್ಲಿ ಕೆಲವು ದಿನ ಬ್ಯಾಂಕ್ ರಜೆ ಇರಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಲು ಸಾಲು ಸರ್ಕಾರಿ ರಜೆಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಸೇವೆ ಕೂಡ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ರಜೆಗೆ ತಕ್ಕಂತೆ ಹಣಕಾಸು ವ್ಯವಹಾರ ಮಾಡಬೇಕಿದೆ.

ಅದರಂತೆ ಏಪ್ರಿಲ್‌ನಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜೆ ದಿನಗಳತ್ತ ಗಮನಹರಿಸುವುದಾದರೆ..

ಆರ್ಥಿಕ ವರ್ಷ ಮುಕ್ತಾಯ-ಏ.01

ಉಗಾದಿ-ಏ.06

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ-ಏ.14

ರಾಮ ನವಮಿ-ಏ.14

ಮಹಾವೀರ್ ಜಯಂತಿ-ಏ.17

ಗುಡ್ ಫ್ರೈಡೇ-ಏ.19

ಅಲ್ಲದೇ ಏಪ್ರಿಲ್‌ನಲ್ಲಿ ಒಟ್ಟು 4 ಭಾನುವಾರ ಬರಲಿದ್ದು, ಏ.07, ಏ.14, ಏ.21, ಏ.28 ದಿನದಂದು ಬ್ಯಾಂಕ್ ರಜೆ ಇರಲಿದೆ. ಏ.13,ಏ.27 ಎರಡನೇ ಶನಿವಾರ ಇರುವುದರಿಂದ ಈ ದಿನಗಳಂದೂ ಬ್ಯಾಂಕ್ ರಜೆ ಇರಲಿದೆ.