ನವದೆಹಲಿ : ಮಾರ್ಚ್ 31 ಕ್ಕೆ ಆರ್ಥಿಕ ವರ್ಷ ಕೊನೆಯಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 1 ರಂದು ಎಲ್ಲಾ ಬ್ಯಾಂಕ್ ಬ್ರಾಂಚ್ ಗಳು ಮುಚ್ಚಿರಲಿವೆ. 

ಆರ್ಥಿಕ ವರ್ಷದ ಆರಂಭದ ದಿನವಾದ ಏಪ್ರಿಲ್ 1 ರಂದು ಬ್ಯಾಂಕ್ ಉದ್ಯೋಗಿಗಳು ಕೆಲಸ ನಿರ್ವಹಿಸಲಿದ್ದು, ಗ್ರಾಹಕರಿಗೆ ಬ್ಯಾಂಕ್ ಗಳು ಕೆಲಸ ನಿರ್ವಹಿಸುವುದಿಲ್ಲ. 

ಇನ್ನು ಏಪ್ರಿಲ್ 5 ರಂದು ಬಾಬು ಜಗ ಜೀವನ್ ರಾಮ್ ಜಯಂತಿ ಹಿನ್ನೆಲೆ ಆಂಧ್ರ ಹಾಗೂ ತೆಲಂಗಾಣದಲ್ಲಿ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಇನ್ನು ಏಪ್ರಿಲ್   6ರಂದು ಯುಗಾದಿ ಹಿನ್ನೆಲೆಯಲ್ಲಿ  ಬ್ಯಾಂಕ್ ರಜೆ ಇರಲಿದೆ. 

ಒಟ್ಟಿನಲ್ಲಿ ಸಾಲಾಗಿ ಕೆಲ ದಿನಗಳ ಕಾಲ ಬ್ಯಾಂಕ್ ರಜೆ ಇದ್ದು, ಗ್ರಾಹಕರು ತಮ್ಮ ಕೆಲಸ ಮುಗಿಸಿಕೊಳ್ಳುವುದು ಸೂಕ್ತ.