2023ರ ಆಗಮನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷವನ್ನು ಸ್ವಾಗತಿಸುವ ಜೊತೆಗೆ ಆ ವರ್ಷದಲ್ಲಿ ಏನೆಲ್ಲ ಮಾಡಬೇಕು ಎಂಬ ಬಗ್ಗೆ ಯೋಜನೆ ರೂಪಿಸೋದು ಕೂಡ ಮುಖ್ಯ. ಅದೇರೀತಿ ಹೊಸ ವರ್ಷದಲ್ಲಿ ಯಾವೆಲ್ಲ ದಿನ ಬ್ಯಾಂಕ್ ಗಳಿಗೆ ರಜೆಗಳಿವೆ ಎಂಬುದನ್ನು ತಿಳಿದುಕೊಂಡರೆ ಬ್ಯಾಂಕಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿ ಮುಗಿಸಲು ಯಾವುದೇ ಅಡಚಣೆ ಉಂಟಾಗೋದಿಲ್ಲ.
ನವದೆಹಲಿ (ಡಿ.17): 2022ಕ್ಕೆ ವಿದಾಯ ಹೇಳಿ ಹೊಸ ವರ್ಷ 2023ರ ಸ್ವಾಗತಕ್ಕೆ ಜಗತ್ತು ಸಜ್ಜಾಗುತ್ತಿದೆ. ಈ ವರ್ಷದಲ್ಲಿ ಏನು ಮಾಡಿದ್ದೇವೆ ಎಂಬುದನ್ನು ಅವಲೋಕಿಸುವ ಜೊತೆಗೆ ಮುಂದಿನ ವರ್ಷಕ್ಕೆ ಏನು ಯೋಜನೆ ಎಂಬುದನ್ನು ನಿರ್ಧರಿಸಲು ಇದು ಸಕಾಲ. ಹಾಗೆಯೇ ಹೊಸ ವರ್ಷದಲ್ಲಿ ನಮ್ಮ ನಿತ್ಯದ ಬದುಕಿನ ಮೇಲೆ ಪರಿಣಾಮ ಬೀರಬಲ್ಲ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವುದು ಕೂಡ ಮುಖ್ಯ. ಹೊಸ ವರ್ಷದಲ್ಲಿ ಯಾವೆಲ್ಲ ದಿನ ಸರ್ಕಾರಿ ರಜೆಗಳಿರುತ್ತವೆ ಎಂಬ ಬಗ್ಗೆ ಸರ್ಕಾರ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಹಾಗೆಯೇ ಬ್ಯಾಂಕ್ ಗಳ ರಜೆಗೆ ಸಂಬಂಧಿಸಿ ಕೂಡ ಮಾಹಿತಿ ಹೊಂದಿರೋದು ಉತ್ತಮ. ಸಾಮಾನ್ಯವಾಗಿ ಹೊಸ ತಿಂಗಳ ಪ್ರಾರಂಭಕ್ಕೂ ಮುನ್ನ ಆರ್ ಬಿಐ ಬ್ಯಾಂಕ್ ರಜೆಗೆ ಸಂಬಂಧಿಸಿ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಆದರೆ, ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳ ಬ್ಯಾಂಕುಗಳಿಗೆ ಅನ್ವಯಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆ ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ.
ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು. ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ (Public sector), ಖಾಸಗಿ ವಲಯ (Private sector), ವಿದೇಶಿ ಬ್ಯಾಂಕುಗಳು (Foreign banks), ಕೋಆಪರೇಟಿವ್ ಬ್ಯಾಂಕುಗಳು (Co-operative banks) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ (Regonal banks) ಅನ್ವಯಿಸಲಿವೆ.
ಸಾವರಿನ್ ಗೋಲ್ಡ್ ಬಾಂಡ್ ಮೂರನೇ ಸರಣಿ ಡಿ.19ರಿಂದ ಪ್ರಾರಂಭ; ಆನ್ ಲೈನ್ ನಲ್ಲಿ ಖರೀದಿಸೋದು ಹೇಗೆ?
ಬ್ಯಾಂಕುಗಳಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ (Online transaction) ಹಾಗೂ ಎಟಿಎಂ ವ್ಯವಹಾರಗಳಿಗೆ (ATM transaction) ಯಾವುದೇ ತೊಂದರೆಯಾಗೋದಿಲ್ಲ. ಆದರೆ, ಬ್ಯಾಂಕಿಗೆ (Bank) ಹೋಗಿಯೇ ಮಾಡಬೇಕಾದ ಯಾವುದಾದ್ರೂ ಕೆಲಸವಿದ್ರೆ ಮಾತ್ರ ಮುಂದೂಡುವುದು ಉತ್ತಮ. ಈ ವರ್ಷದ ಕೊನೆಯ ತಿಂಗಳಾಗಿರುವ ಕಾರಣ ಬ್ಯಾಂಕಿನಲ್ಲಿ ತುರ್ತಾಗಿ ಮಾಡಬೇಕಾದ ಕೆಲವೊಂದು ಕೆಲಸಗಳಿರಬಹುದು. ಹೀಗಾಗಿ ಡಿಸೆಂಬರ್ ನಲ್ಲಿ ಬ್ಯಾಂಕ್ ಗಳಿಗೆ ಯಾವೆಲ್ಲ ದಿನ ರಜೆಯಿದೆ ಎಂಬುದನ್ನು ಮೊದಲೇ ಗಮನಿಸಿ ಆ ಬಳಿಕ ಭೇಟಿ ನೀಡುವ ಪ್ಲ್ಯಾನ್ ಮಾಡಿ.
2023ರ ಬ್ಯಾಂಕ್ ರಜಾಪಟ್ಟಿ
ಜನವರಿ 1: ಭಾನುವಾರ; ಹೊಸ ವರ್ಷದ ಮೊದಲ ದಿನ
ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
ಜನವರಿ 26: ಗಣರಾಜ್ಯೋತ್ಸವ
ಫೆಬ್ರವರಿ 5: ಗುರು ರವಿದಾಸ್ ಜಯಂತಿ
ಫೆಬ್ರವರಿ 18: ಮಹಾಶಿವರಾತ್ರಿ
ಮಾರ್ಚ್ 8: ಹೋಲಿ
ಮಾರ್ಚ್ 22: ಯುಗಾದಿ
ಮಾರ್ಚ್ 30: ರಾಮ ನವಮಿ
ಏಪ್ರಿಲ್ 4: ಮಹಾವೀರ ಜಯಂತಿ
ಏಪ್ರಿಲ್ 7: ಗುಡ್ ಫ್ರೈಡೆ
ಏಪ್ರಿಲ್ 14: ಡಾ. ಅಂಬೇಡ್ಕರ್ ಜಯಂತಿ
ಏಪ್ರಿಲ್ 22: ಈದ್ -ಉಲ್-ಫಿತ್ತ್
ಮೇ 1: ಮೇ ದಿನ/ಕಾರ್ಮಿಕರ ದಿನ
ಮೇ 5: ಬುಧ ಪೂರ್ಣಿಮಾ
ಜೂನ್ 29: ಬಕ್ರೀದ್ /ಈದ್ ಅಲ್ ಅದಾ
ಜುಲೈ 29: ಮೊಹರಂ
ಆಗಸ್ಟ್ 15: ಸ್ವಾತಂತ್ರ್ಯೋತ್ಸವ
ಆಗಸ್ಟ್ 16: ಪಾರ್ಸಿ ಹೊಸ ವರ್ಷ
ಆಗಸ್ಟ್ 31: ರಕ್ಷಾ ಬಂಧನ
ಸೆಪ್ಟೆಂಬರ್ 7: ಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 19: ಗಣೇಶ್ ಚತುರ್ಥಿ
ಸೆಪ್ಟೆಂಬರ್ 28: ಈದ್ -ಇ-ಮಿಲಾದ್
ಅಕ್ಟೋಬರ್ 2: ಗಾಂಧಿ ಜಯಂತಿ
ಅಕ್ಟೋಬರ್ 21: ಮಹಾ ಸಪ್ತಮಿ
ಅಕ್ಟೋಬರ್ 22: ಮಹಾ ಅಷ್ಟಮಿ
ಅಕ್ಟೋಬರ್ 23: ಮಹಾ ನವಮಿ
ಅಕ್ಟೋಬರ್ 24: ವಿಜಯ ದಶಮಿ
ನವೆಂಬರ್ 12: ದೀಪಾವಳಿ
ನವೆಂಬರ್ 13: ದಿಪಾವಳಿ
ನವೆಂಬರ್ 15: ಬಾಯಿ ದೋಜ್
ನವೆಂಬರ್ 27: ಗುರು ನಾನಕ್ ಜಯಂತಿ
ಡಿಸೆಂಬರ್ 25: ಕ್ರಿಸ್ ಮಸ್
Small Business Ideas: ಹೊಸ ವರ್ಷದಲ್ಲಿ ನೀವೂ ಶುರು ಮಾಡಿ ಇಂಥ ಬ್ಯುಸಿನೆಸ್
