Small Business Ideas: ಹೊಸ ವರ್ಷದಲ್ಲಿ ನೀವೂ ಶುರು ಮಾಡಿ ಇಂಥ ಬ್ಯುಸಿನೆಸ್

ವ್ಯಕ್ತಿ ಸ್ವಂತ ವ್ಯವಹಾರ ಪ್ರಾರಂಭಿಸಲು ಉತ್ತಮ ಪ್ಲಾನ್ ಜೊತೆ ವ್ಯವಹಾರ ಪ್ರಾರಂಭಿಸಲು ಸಾಕಷ್ಟು ಹಣ ಅಗತ್ಯವಿದೆ. ಕಡಿಮೆ ಹೂಡಿಕೆಯಲ್ಲಿ ಸ್ವಂತ ವ್ಯವಹಾರ ಪ್ರಾರಂಭಿಸಲು ಸಾಧ್ಯವಿಲ್ಲ ಎಂದಲ್ಲ. ಕಡಿಮೆ ಬಂಡವಾಳ ಹೂಡ್ತೇವೆ ಎನ್ನುವವರಿಗೂ ಸಾಕಷ್ಟು ವ್ಯವಹಾರದ ಆಯ್ಕೆಯಿದೆ.
 

Small Business Ideas With Low Investment

ಜೀವನದಲ್ಲಿ ಹಣ ಅತ್ಯಂತ ಮುಖ್ಯ. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದ ಒಂದು ನಿರ್ದಿಷ್ಟ ಸಮಯದ ನಂತರ ಹಣ ಗಳಿಸಲು ಪ್ರಾರಂಭಿಸುತ್ತಾನೆ. ಈಗಿನ ಯುವಕರು ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬೀಳೋದಿಲ್ಲ. ಹೊಸ ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗ್ತಾರೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಕೆಳಗೆ ಕೆಲಸ ಮಾಡುವುದಕ್ಕಿಂತ ಸ್ವಂತ ದುಡಿಮೆ ಬೆಸ್ಟ್ ಎನ್ನುವವರ ಸಂಖ್ಯೆ ಹೆಚ್ಚಿದೆ. ಇಂದಿನ ಯುವಕರಲ್ಲಿ ಹೊಸತನ್ನು ಮಾಡಬೇಕೆಂಬ ಉತ್ಸಾಹ ಹೆಚ್ಚಿದೆ. ಯುವಕರಿಗೆ ಸಹಾಯವಾಗುವ, ಕಡಿಮೆ ಖರ್ಚಿನಲ್ಲಿ ಶುರುಮಾಡಬಹುದಾದ ಕೆಲ ವ್ಯವಹಾರಗಳ ಬಗ್ಗೆ ನಾವಿಂದು ಹೇಳ್ತೆವೆ. 

ನೇಮಕಾತಿ ಸಂಸ್ಥೆ (Recruitment Firm) : ಯುವಕರಿಗೆ ಉದ್ಯೋಗ  ಕೊಡಿಸುವ ಕೆಲಸ ಇದಾಗಿದೆ. ಅವರ ವಿದ್ಯಾರ್ಹತೆಗೆ ತಕ್ಕಂತೆ ನೀವು ಕೆಲಸ ಕೊಡಿಸಬೇಕು. ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ರಿಕ್ವಿಟ್ಮೆಂಟ್ ಫರ್ಮ್ ನಿಂದ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತದೆ.  

ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ (Real Estate Consulting) : ಹೆಚ್ಚು ಸಂಪಾದಿಸುವ ವ್ಯಕ್ತಿ ಹೆಚ್ಚೆಚ್ಚು ಹೂಡಿಕೆ ಮಾಡ್ತಾನೆ. ಅದ್ರಲ್ಲಿ ಆಸ್ತಿ ಖರೀದಿ ಕೂಡ ಒಂದು. ಕೆಲವರು ಆಸ್ತಿ ಖರೀದಿ ಮಾಡಿದ್ರೆ ಮತ್ತೆ ಕೆಲವರು ಮಾರಾಟ ಮಾಡ್ತಾರೆ. ನೀವು ಅವರ ಖರೀದಿ ಹಾಗೂ ಮಾರಾಟಕ್ಕೆ ನೆರವಾದ್ರೆ ನಿಮಗೆ ಹಣ ಸಿಗುತ್ತದೆ.  

ಆನ್‌ಲೈನ್ ಮಾರ್ಕೆಟಿಂಗ್ (Online Shopping Portals) : ಆನ್‌ಲೈನ್ ಮಾರ್ಕೆಟಿಂಗ್ ಈಗಿನ ದಿನಗಳಲ್ಲಿ ಒಳ್ಳೆ ಆಯ್ಕೆ. ನೀವು ಸ್ಟಾಕ್ ಇಡಬೇಕಾಗಿಲ್ಲ. ಇದ್ರಲ್ಲಿ ಸಾಕಷ್ಟು ವಿಧಗಳಿವೆ. ನಿಮಗೆ ಅನುಕೂಲವಾದ ರೀತಿಯಲ್ಲಿ ನೀವು ವ್ಯಾಪಾರ ಶುರು ಮಾಡಬಹುದು.  

ಆನ್‌ಲೈನ್ ಬ್ಲಾಗಿಂಗ್- ವೆಬ್‌ಸೈಟ್ (Blogging And Website) : ಇಂದಿನ ಕಾಲದಲ್ಲಿ ಮನೆಯಲ್ಲಿ ಕುಳಿತು ನಿಮ್ಮ ಸಮಯಕ್ಕೆ ತಕ್ಕಂತೆ ಕೆಲಸ ಮಾಡುವ ಮೂಲಕ ಹಣ ಗಳಿಸಬಹುದಾದ ಅತ್ಯುತ್ತಮ ವ್ಯವಹಾರ ಇದಾಗಿದೆ. ಇದಕ್ಕೆ ಹೂಡಿಕೆ ತುಂಬಾ ಕಡಿಮೆ. Google Blogger ಬಳಸಿಕೊಂಡು ನಿಮ್ಮ ಸ್ವಂತ ಸೈಟ್ ಪ್ರಾರಂಭಿಸಬಹುದು.  

ಈವೆಂಟ್ ಮ್ಯಾನೇಜ್ಮೆಂಟ್ ಫರ್ಮ್ (Event Management) : ಕೆಲಸದ ಒತ್ತಡದಿಂದಾಗಿ ಮನೆಯಲ್ಲಿ ಅಡುಗೆ ಮಾಡೋದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಜನರು ಯಾವುದೇ ಫಂಕ್ಷನ್ ಇದ್ರೂ ಅದನ್ನು ಈವೆಂಟ್ ಮ್ಯಾನೇಜ್ಮೆಂಟ್ ಗೆ ನೀಡುತ್ತಾರೆ. ನಿಮಗೆ ಇದ್ರಲ್ಲಿ ಆಸಕ್ತಿಯಿದ್ದರೆ ನಿಮ್ಮ ನೆಟ್ವರ್ಕ್ ಬೆಳೆಸಿಕೊಂಡು ನೀವು ಈ ವ್ಯವಹಾರ ಶುರು ಮಾಡಬಹುದು.

Personal Finance: ಏಜೆಂಟ್ ಇಲ್ಲದೆ ಆಸ್ತಿ ಮಾರಾಟಕ್ಕೆ ಇಳಿದ್ರೆ ಆಗೋ ನಷ್ಟವೇನು?

ಕೋಚಿಂಗ್ ಸೆಂಟರ್ (Training Institute) : ಕೋಚಿಂಗ್ ನಲ್ಲಿ ನಾನಾ ರೀತಿಯಿದೆ. ಉತ್ತಮ ತರಬೇತುದಾರರನ್ನು ನೇಮಿಸಿಕೊಂಡು ನೀವು ಕಮಿಷನ್ ಆಧಾರದ ಮೇಲೆ ಇದನ್ನು ನಡೆಸಬಹುದು.

ಮಹಿಳೆಯರಿಗೆ ಜಿಮ್ : ಪ್ರತಿ ಮಹಿಳೆ ತೂಕ ಇಳಿಸಿಕೊಳ್ಳುವ ಆತರದಲ್ಲಿರುತ್ತಾಳೆ. ಹಾಗಾಗಿ ನೀವು ಮಹಿಳೆಯರಿಗೆ ಜಿಮ್ ತೆರೆಯಬಹುದು. ಮಹಿಳೆಯರಿಗೆ ಕೆಲವೊಂದು ಜಿಮ್ ಯಂತ್ರವಿದ್ರೆ ಸಾಕು. ಪುರುಷರಿಗೆ ಹೋಲಿಸಿದ್ರೆ ಮಹಿಳೆಯರ ಜಿಮ್ ಖರ್ಚು ಕಡಿಮೆ.  

ಮೊಬೈಲ್ ಫುಡ್ ಕೋರ್ಟ್ : ಹೋಟೆಲ್ ಅಥವಾ ರೆಸ್ಟೋರೆಂಟ್‌ ನಲ್ಲಿ ಜನರ ಸಂಖ್ಯೆ ಸಾಕಷ್ಟಿರುತ್ತದೆ. ನೀವು ರುಚಿಯಾದ ಅಡುಗೆ ಮಾಡ್ತಿದ್ದರೆ ಫುಡ್ ಕೋರ್ಟ್ ತೆರೆಯಬಹುದು. ಉತ್ತಮ ಆದಾಯ ನೀಡುವ ಬ್ಯುಸಿನೆಸ್ ನಲ್ಲಿ ಇದೂ ಒಂದು.

ವೆಡ್ಡಿಂಗ್ ಪ್ಲಾನರ್ : ವೆಡ್ಡಿಂಗ್ ಪ್ಲಾನರ್ ಎಂದರೆ ಮದುವೆಯ ಎಲ್ಲಾ ವ್ಯವಸ್ಥೆಗಳನ್ನು ನೀವೇ ನೋಡಿಕೊಳ್ಳುವುದು. ಇದು ಕೂಡ ಈಗಿನ ದಿನಗಳಲ್ಲಿ ಹೆಚ್ಚು ಬೇಡಿಕೆಯಿರುವ ಬ್ಯುಸಿನೆಸ್ ಆಗಿದೆ.  

New Year 2023: ಹೊಸವರ್ಷನಾದ್ರೂ ದುಡ್ಡು ಉಳಿಸ್ಬೇಕು ಅಂದ್ಕೊಂಡಿದ್ದೀರಾ? ಇಲ್ಲಿದೆ ಟಿಪ್ಸ್‌

ಮದುವೆ ಬ್ರೋಕರ್ : ಇದು ಕೂಡ ಅಗತ್ಯವಾಗಿದೆ. ಮದುವೆ ಬ್ರೋಕರ್ ಕೆಲಸವನ್ನು ನೀವು ಈಗ ಆನ್ಲೈನ್ ಮೂಲಕವೇ ಮಾಡಬಹುದು. ಹುಡುಗ ಹುಡುಗಿ ಮದುವೆ ಮಾಡಿ ಕಮಿಷನ್ ಪಡೆಯಬಹುದು.   

Latest Videos
Follow Us:
Download App:
  • android
  • ios