Bank Holidays:ಬ್ಯಾಂಕ್ ಕೆಲಸವಿದ್ರೆ ಮುಂದೂಡಿ; ಇಂದಿನಿಂದ 5 ದಿನ ರಜೆ
ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳಿರುವ ಕಾರಣ ಬ್ಯಾಂಕುಗಳಿಗೆ ಕೂಡ ಜಾಸ್ತಿ ರಜೆಗಳಿವೆ.ಹೀಗಾಗಿ ಬ್ಯಾಂಕಿಗೆ ಭೇಟಿ ನೀಡುವ ಮುನ್ನ ಆರ್ ಬಿಐ ರಜಾಪಟ್ಟಿ ನೋಡಿ ಹೋಗೋದು ಉತ್ತಮ.ಕೆಲವು ರಾಜ್ಯಗಳಲ್ಲಿ ಇಂದಿನಿಂದ ಆ.16ರ ತನಕ ಒಟ್ಟು 5 ದಿನಗಳ ಕಾಲ ಬ್ಯಾಂಕುಗಳಿಗೆ ರಜೆಯಿದೆ.
Business Desk:ಆಗಸ್ಟ್ ಅಂದ್ರೆ ಹಬ್ಬಗಳ ತಿಂಗಳು. ರಾಷ್ಟ್ರೀಯ, ಧಾರ್ಮಿಕ ಹಬ್ಬಗಳ ಹಿನ್ನೆಲೆಯಲ್ಲಿ ಈ ತಿಂಗಳು ಬ್ಯಾಂಕುಗಳಿಗೆ ಸಾಲು ಸಾಲು ರಜೆಗಳಿವೆ. ಬ್ಯಾಂಕುಗಳ ರಜೆಗಳಿಗೆ ಸಂಬಂಧಿಸಿ ಪ್ರತಿ ತಿಂಗಳು ಆರ್ ಬಿಐ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಹಾಗೆಯೇ ಆಗಸ್ಟ್ ತಿಂಗಳಿಗೆ ಸಂಬಂಧಿಸಿ ಆರ್ ಬಿಐ ಬಿಡುಗಡೆ ಮಾಡಿದ ರಜಾಪಟ್ಟಿಯಲ್ಲಿ ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರಗಳು ಸೇರಿದಂತೆ ಒಟ್ಟು 16 ದಿನಗಳ ಕಾಲ ಬ್ಯಾಂಕುಗಳು ಮುಚ್ಚಿರಲಿವೆ. ಬ್ಯಾಂಕಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ ಹಾಗೂ ಎಟಿಎಂ ವ್ಯವಹಾರಗಳಿಗೆ ಯಾವುದೇ ತೊಂದರೆ ಇರೋದಿಲ್ಲ.ಆದ್ರೆ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಯಾವುದಾದ್ರೂ ಕೆಲಸ ಮಾಡಬೇಕಿದ್ರೆ ಮಾತ್ರ ರಜಾದಿನಗಳ ಪಟ್ಟಿ ನೋಡಿಕೊಂಡು ಹೋಗೋದು ಒಳ್ಳೆಯದು. ಕೆಲವು ರಾಜ್ಯಗಳಲ್ಲಿ ಇಂದಿನಿಂದ ನಾಲ್ಕು ದಿನಗಳ ಕಲ ಬ್ಯಾಂಕುಗಳಿಗೆ ರಜೆಯಿದೆ. ಆಗಸ್ಟ್ 12, 13, 14 ಹಾಗೂ 15ರಂದು ರಕ್ಷಾಬಂಧನ, ದೇಶಪ್ರೇಮ ದಿನ ಹಾಗೂ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ರಜೆಯಿದೆ. ಇನ್ನು ಮಹಾರಾಷ್ಟ್ರದಲ್ಲಿ ಆಗಸ್ಟ್ 16ರಂದು ಪಾರ್ಸಿ ಹೊಸ ವರ್ಷದ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ರಜೆಯಿದೆ.
ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಆಯಾ ಪ್ರದೇಶದ ಆಚರಣೆಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಸಾರ್ವಜನಿಕ (Pulic) ಹಾಗೂ ಗೆಜೆಟೆಡ್ ರಜೆಗಳು (Gazetted holidays) ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಭಾನುವಾರ (Sunday) ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ (Saturday) ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ.
ಅಟಲ್ ಪಿಂಚಣಿ ಯೋಜನೆ ನಿಯಮ ಬದಲಾವಣೆ;ಇವರಿಗಿಲ್ಲ ಫಲಾನುಭವಿಯಾಗೋ ಭಾಗ್ಯ
ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು. ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಕೋಆಪರೇಟಿವ್ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ಅನ್ವಯಿಸಲಿವೆ.
ಮಹಾರಾಷ್ಟ್ರದಲ್ಲಿ ಆಗಸ್ಟ್ 12ರಂದು ರಕ್ಷಾಬಂಧನ ಹಿನ್ನೆಲೆಯಲ್ಲಿ ರಜೆಯಾದ್ರೆ, ಆ.13ರಂದು ಎರಡನೇ ಶನಿವಾರ, ಆ.14ರಂದು ಭಾನುವಾರ ಹಾಗೂ ಆ.15ರಂದು ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ರಜೆಯಿದೆ. ಇನ್ನು ಆ.16ರಂದು ಪಾರ್ಸಿ ಹೊಸ ವರ್ಷದ ಹಿನ್ನೆಲೆಯಲ್ಲಿ ರಜೆಯಿದೆ. ಹೀಗೆ ಮಹಾರಾಷ್ಟ್ರದಲ್ಲಿ ಒಟ್ಟು 5 ದಿನಗಳ ಕಾಲ ಬ್ಯಾಂಕುಗಳಿಗೆ ರಜೆಯಿದೆ. ಇನ್ನು ಉತ್ತರ ಪ್ರದೇಶದಲ್ಲಿ ಆ.12ರಿಂದ ಆ.15ರ ತನಕ ನಾಲ್ಕು ದಿನಗಳ ಕಾಲ ಬ್ಯಾಂಕುಗಳಿಗೆ ರಜೆಯಿದೆ. ಕರ್ನಾಟಕದಲ್ಲಿ ಆ.11ರಿಂದ ಆ.15ರ ತನಕ ಮೂರು ದಿನಗಳ ಕಾಲ ಬ್ಯಾಂಕುಗಳು ಮುಚ್ಚಿರಲಿವೆ. ಇನ್ನು ಮುಂದಿನ ವಾರ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ಮತ್ತೆ ರಜೆಯಿದೆ. ಆ.18,19 ಹಾಗೂ 20ರಂದು ವಿವಿಧ ರಾಜ್ಯಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ರಜೆಯಿದೆ.
ಬ್ಯಾಂಕ್ ರಜೆಗಳು ಹೀಗಿವೆ:
ಆ.12: ರಕ್ಷಾ ಬಂಧನ (ಕಾನ್ಪುರ್ ಹಾಗೂ ಲಖನೌ)
ಆ.13: ದೇಶಪ್ರೇಮ ದಿನ ( Patriot’s Day)(ಇಂಫಾಲ್), ಎರಡನೇ ಶನಿವಾರ
ಆ. 14: ಭಾನುವಾರ
ಆ.15: ಸ್ವಾತಂತ್ರ್ಯ ದಿನ (ಭಾರತದಾದ್ಯಂತ)
ಆ.16: ಪಾರ್ಸಿ ಹೊಸ ವರ್ಷ (ಬೆಲ್ಪುರ್, ಮುಂಬೈ ಹಾಗೂ ನಾಗ್ಪುರ)
ತಗ್ಗಿದ ಅಗತ್ಯ ವಸ್ತುಗಳ ಬೆಲೆ, ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7ಕ್ಕೆ ಇಳಿಕೆ?
ಬ್ಯಾಂಕಿಗೆ ಹೋಗಿ ಮಾಡಬೇಕಾದ ಯಾವುದೇ ಕೆಲಸವಿದ್ರೂ ರಜಾಪಟ್ಟಿಯನ್ನು ಗಮನಿಸಿ ಮುಂದೂಡೋದು ಉತ್ತಮ. ಇಲ್ಲವಾದ್ರೆ ನಿಮ್ಮ ಸಮಯ ಹಾಗೂ ಶ್ರಮ ಎರಡೂ ವ್ಯರ್ಥವಾಗುತ್ತದೆ.