Asianet Suvarna News Asianet Suvarna News

ತಗ್ಗಿದ ಅಗತ್ಯ ವಸ್ತುಗಳ ಬೆಲೆ, ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7ಕ್ಕೆ ಇಳಿಕೆ?

*ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಆರ್ ಬಿಐ ಸಹನ ಮಟ್ಟಕ್ಕಿಂತ ಕೆಳಗಿಳಿಯುವ ನಿರೀಕ್ಷೆ
*ಚಿಲ್ಲರೆ ಹಣದುಬ್ಬರ ಇಳಿಕೆ ನಿರೀಕ್ಷೆ ವ್ಯಕ್ತಪಡಿಸಿದ ಸಮೀಕ್ಷೆ
*ಶುಕ್ರವಾರ ಹೊರಬೀಳಲಿದೆ ಜುಲೈ ತಿಂಗಳ ಚಿಲ್ಲರೆ ಹಣದುಬ್ಬರದ ಅಧಿಕೃತ ಮಾಹಿತಿ 
 

Retail Inflation Likely to Drop in July Will it Come Under RBIs Tolerance Level
Author
Bangalore, First Published Aug 11, 2022, 2:24 PM IST

ನವದೆಹಲಿ (ಜು.11): ಆರ್ಥಿಕ ಹಿಂಜರಿತದ ಭೀತಿಯಿಂದ ಜಾಗತಿಕ ವಸ್ತುಗಳ ಬೆಲೆಗಳು ತಗ್ಗುತ್ತಿರುವ ಬೆನ್ನಲ್ಲೇ ಭಾರತದಲ್ಲಿ ಹಣದುಬ್ಬರ ಜುಲೈನಲ್ಲಿ ಕಡಿಮೆಯಾಗಿರುವ ಸಾಧ್ಯತೆಯಿದೆ. ಇತ್ತೀಚೆಗೆ ಕಚ್ಚಾ ತೈಲ ಬೆಲೆ ತಗ್ಗಿರೋದು  ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ನೆರವು ನೀಡಿದೆ.  ಇನ್ನು ಆರ್ ಬಿಐ ಕೂಡ 2022-23 ಹಣಕಾಸು ಸಾಲಿನ  ಹಣದುಬ್ಬರ ದರವನ್ನು ಶೇ.6.7 ಕ್ಕೆ ಅಂದಾಜಿಸಿದೆ. ಆದರೆ, ಮನಿ ಕಂಟ್ರೋಲ್ ನಡೆಸಿದ ಸಮೀಕ್ಷೆ ಪ್ರಕಾರ ಭಾರತದಲ್ಲಿ ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7ಕ್ಕೆ ಇಳಿಕೆಯಾಗಿರುವ ಸಾಧ್ಯತೆಯಿದೆ. ಜುಲೈ ತಿಂಗಳ ಹಣದುಬ್ಬರ ದರದ ಅಧಿಕೃತ ಮಾಹಿತಿ ನಾಳೆಯಷ್ಟೇ (ಶುಕ್ರವಾರ) ಬಹಿರಂಗಗೊಳ್ಳಲಿದೆ. ಮೇ ತಿಂಗಳಲ್ಲಿ ಶೇ.7.04 ರಷ್ಟಿದ್ದ ಹಣದುಬ್ಬರ ಜೂನ್ ನಲ್ಲಿ ಶೇ. 7.01ಕ್ಕೆ ಇಳಿಕೆಯಾಗಿತ್ತು. ಹೀಗಾಗಿ ಜುಲೈನಲ್ಲಿ ಕೂಡ ಹಣದುಬ್ಬರ ತಗ್ಗುವ ನಿರೀಕ್ಷೆಯಂತೂ ಇದ್ದೇಇದೆ. ಮನಿಕಂಟ್ರೋಲ್ ವರದಿ ಪ್ರಕಾರ ಆಹಾರ ಪದಾರ್ಥಗಳ ಬೆಲೆ ಇಳಿಕೆ ಹಾಗೂ ನಿರ್ದಿಷ್ಟ ಪ್ರಮುಖ  ವಸ್ತುಗಳ ಬೆಲೆ ತಗ್ಗಿರುವ ಕಾರಣ ಜುಲೈ ತಿಂಗಳ ಹಣದುಬ್ಬರ ಇಳಿಕೆಯಾಗಿರುವ ನಿರೀಕ್ಷೆಯಿದೆ ಎಂದು ಹೇಳಿದೆ.

ಎರಡು ಹಾಗೂ ಮೂರನೇ ತ್ರೈಮಾಸಿಕದಲ್ಲಿ ಹಣದುಬ್ಬರ (Inflation)  ಶೇ. 6ಕ್ಕಿಂತ ಹೆಚ್ಚಿರುವ ನಿರೀಕ್ಷೆಯಿದೆ ಎಂದು ಗ್ರ್ಯಾಂಟ್ ಥೊರ್ನ್ ಟನ್ ಭಾರತ್ ಪಾಲುದಾರ ವಿವೇಕ್ ಐಯ್ಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಆರ್ ಬಿಐ ಹಣದುಬ್ಬರ ನಿಯಂತ್ರಣಕ್ಕೆ ರೆಪೋದರ (Repo rate) ಏರಿಕೆಯನ್ನು ಸಾಧನವಾಗಿ ಬಳಸುವ ಬದಲು ಬೆಳವಣಿಗೆ ಕುಂಠಿತಗೊಳ್ಳದಂತೆ ನಗದು ಹರಿವಿನ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯವನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.

ಡಿಜಿಟಲ್ ಸಾಲಕ್ಕೆ ಆರ್ ಬಿಐ ಮೂಗುದಾರ; ಕಠಿಣ ಮಾರ್ಗಸೂಚಿ ಬಿಡುಗಡೆ

2022-23ನೇ ಹಣಕಾಸು ಸಾಲಿಗೆ ಹಣದುಬ್ಬರ ಅಂದಾಜನ್ನು ಆರ್ ಬಿಐ (RBI)  ಶೇ.6.7ಕ್ಕೆ ನಿಗದಿಪಡಿಸಿದೆ. 2022 ರಲ್ಲಿ ಮಳೆಗಾಲ ಸಾಮಾನ್ಯವಾಗಿರುತ್ತದೆ ಹಾಗೂ ಕಚ್ಚಾ ತೈಲ (Crude oil) ಬೆಲೆ ಪ್ರತಿ ಬ್ಯಾರೆಲ್ ಗೆ 105 ಡಾಲರ್ ಇರುವ ನಿರೀಕ್ಷೆಯಿದೆ ಎಂದು ಆರ್ ಬಿಐ ಈ ಅಂದಾಜು ಮಾಡಿತ್ತು. '2022-23ನೇ ಸಾಲಿಗೆ ಹಣದುಬ್ಬರವನ್ನು ಶೇ. 6.7 ಅಂದಾಜಿಸಲಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಶೇ. 7.1, ಮೂರನೇ ತ್ರೈಮಾಸಿಕದಲ್ಲಿ ಶೇ.6.4  ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.5.8ಕ್ಕೆ ಅಂದಾಜಿಸಲಾಗಿದೆ. ಇನ್ನು 2023-24ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಸಿಪಿಐ ಹಣದುಬ್ಬರವನ್ನು ಶೇ.5.0ಕ್ಕೆ ಅಂದಾಜಿಸಲಾಗಿದೆ' ಎಂದು ಆರ್ ಬಿಐ ಹಣಕಾಸು ನೀತಿ (Monetary Policy) ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಿಪಿಐ (CPI) ಆಧಾರಿತ ಚಿಲ್ಲರೆ ಹಣದುಬ್ಬರ ಆರ್ ಬಿಐ (RBI) ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟವನ್ನು ಕಳೆದ ಐದು ತಿಂಗಳಿಂದ ಮೀರುತ್ತ ಬಂದಿದೆ.  ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.95ಕ್ಕೆ ಏರಿಕೆಯಾಗಿದ್ರೆ, ಫೆಬ್ರವರಿಯಲ್ಲಿ ಶೇ.6.07ಕ್ಕೆ ಹೆಚ್ಚಳವಾಗಿತ್ತು. ಆರ್ ಬಿಐ ಚಿಲ್ಲರೆ ಹಣದುಬ್ಬರ ಸಹನಾ ಮಿತಿಯನ್ನು ಶೇ.4ಕ್ಕೆ ನಿಗದಿಪಡಿಸಿದ್ದು, ಉಭಯ ಕಡೆ ಶೇ.2ರಷ್ಟು ಮಾರ್ಜಿನ್ (Margin) ನೀಡಿದೆ. ಹೀಗಾಗಿ ಹಣದುಬ್ಬರದ ಗರಿಷ್ಠ ಮಿತಿ ಶೇ.6.

1,508 ರೂ.ಗೆ ವಿಮಾನದಲ್ಲಿ ಪ್ರಯಾಣಿಸಿ: ಗೋ ಫಸ್ಟ್‌ನಿಂದ ಇಂಡಿಪೆಂಡೆನ್ಸ್ ಡೇ ಸೇಲ್‌

ದೇಶದಲ್ಲಿ ಹಣದುಬ್ಬರ ಹೆಚ್ಚಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕಾಗಿ ಆರ್ ಬಿಐ ಈ ವರ್ಷ ಈಗಾಗಲೇ ಮೂರು ಬಾರಿ ರೆಪೋ ದರವನ್ನು (Repo rate) ಹೆಚ್ಚಳ ಮಾಡಿದೆ. ಆ.5ರಂದು ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ ಗಳಷ್ಟು (Bais Points) ಏರಿಕೆ  ಮಾಡಿದೆ. ಜೂನ್ ನಲ್ಲಿ ರೆಪೋ ದರವನ್ನು 50 ಮೂಲಾಂಕಗಳಷ್ಟು  (50 basis points) ಹೆಚ್ಚಳ ಮಾಡಿತ್ತು. ಮೇನಲ್ಲಿ 40 ಮೂಲಾಂಕಗಳಷ್ಟು ಏರಿಸಿತ್ತು. 
 

Follow Us:
Download App:
  • android
  • ios