ಬೆಂಗಳೂರಿನ ಶ್ರೀಮಂತ ಯಾರು? 113 ಬಿಲೇನಿಯರ್ಸ್ ಪೈಕಿ ಮೊದಲ ಸ್ಥಾನದಲ್ಲಿ ಯಾರಿದ್ದಾರೆ? ಸಿಲಿಕಾನ್ ಸಿಟಿಯಲ್ಲಿ ಸಾವಿರ ಕೋಟಿ ಆಸ್ತಿ ಹೊಂದಿದರ ಸಂಖ್ಯೆ ಏರಿಕೆಯಾಗಿದೆ. ಅತೀ ಹೆಚ್ಚು ಶ್ರೀಮಂತ ಯಾರು, ಇವರ ಆಸ್ತಿ ಎಷ್ಟಿದೆ?
ಬೆಂಗಳೂರು (ಅ.05) ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಹಲವು ದಿಗ್ಗಜರು ಮುಂಚೂಣಿಯಲ್ಲಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿರುವ ಶ್ರೀಮಂತರು ಯಾರು? ಅನ್ನೋ ಕುತೂಹಲಕ್ಕೂ ಉತ್ತರ ಸಿಕ್ಕಿದೆ. ಹುರನ್ ಇಂಡಿಯಾ ರಿಚ್ ಲಿಸ್ಟ್ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಶ್ರೀಮಂತರು ಹಾಗೂ ಅವರ ಸಂಪತ್ತು ಬಹಿರಂಗವಾಗಿದೆ. ವಿಶೇಷ ಅಂದರೆ ಅತೀ ಹೆಚ್ಚು ಶ್ರೀಮಂತರನ್ನು ಹೊಂದಿರುವ ಭಾರತದ ಮೂರನೇ ನಗರ ಬೆಂಗಳೂರು, ಮುಂಬೈ ಹಾಗೂ ದೆಹಲಿ ಮೊದಲೆರೆಡು ಸ್ಥಾನ ಪಡೆದಿದೆ.
ಬೆಂಗಳೂರಿನ ನಂ.1 ಶ್ರೀಮಂತ
ಬೆಂಗಳೂರಿನ ನಂಬರ್ 1 ಶ್ರೀಮಂತ ಇನ್ಫೋಸಿಸ್ ನಾರಾಯಣ ಮೂರ್ತಿ ಅಲ್ಲ. ಇದು ಉದ್ಯಮಿ, ವಿಪ್ರೋ ಮಾಜಿ ಚೇರ್ಮೆ್ ಅಜೀಮ್ ಪ್ರೇಮ್‌ಜಿ. ತರಕಾರಿ ಸೇರಿದಂತೆ ಇತರ ವಸ್ತುಗಳ ಕಂಪನಿಯನ್ನು ಅಜೀಮ್ ಪ್ರೇಮ್‌ಜಿ ದೇಶದ ಅತೀ ದೊಡ್ಡ ಐಟಿ ಕಂಪನಿಯಾಗಿ ಪರಿವರ್ತಿಸಿದ್ದು ಮಾತ್ರವಲ್ಲ, ದೇಶ ವಿದೇಶಗಳಲ್ಲಿ ವಿಸ್ತರಣೆ ಮಾಡಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಜೀಮ್ ಪ್ರೇಮ್‌ಜಿ ಬೆಂಗಳೂರಿನ ಅತೀ ಶ್ರೀಮಂತ ವ್ಯಕ್ತಿ. ಇವರ ಒಟ್ಟು ಸಂಪತ್ತು ಮೌಲ್ಯ 2.21 ಲಕ್ಷ ಕೋಟಿ ರೂಪಾಯಿ.
- ಬೆಂಗಳೂರಿನ ಟಾಪ್ 7 ಶ್ರೀಮಂತ ಉದ್ಯಮಿಗಳು ಹಾಗೂ ಅವರ ಒಟ್ಟು ಸಂಪತ್ತು ಮೌಲ್ಯ
- ಅಜೀಮ್ ಪ್ರೇಮ್‌ಜಿ ಹಾಗೂ ಕುಟುಂಬ, 2,21,250 ಕೋಟಿ ರೂಪಾಯಿ (ವಿಪ್ರೋ ಐಟಿ ಕಂಪನಿ)
- ನಿತಿನ್ ಕಾಮತ್ ಹಾಗೂ ಕುಟುಂಬ, 40,020 ಕೋಟಿ ರೂಪಾಯಿ (ಝೀರೋಧ ಫಿನಾನ್ಸ್ ಸರ್ವೀಸ್)
- ರಂಜನ್ ಪೈ, 34,700 ಕೋಟಿ ರೂಪಾಯಿ (ಮಣಿಪಾಲ್ ಗ್ರೂಪ್, ಶಿಕ್ಷಣ ಹಾಗೂ ಆರೋಗ್ಯ)
- ಎನ್ಆರ್ ನಾರಾಯಣ ಮೂರ್ತಿ ಹಾಗೂ ಕುಟುಂಬ, 32,150 ಕೋಟಿ ರೂಪಾಯಿ (ಇನ್ಫೋಸಿಸ್, ಐಟಿ ಸರ್ವೀಸ್)
- ರಾಜಾ ಬಾಗಮನೆ, 31,510 ಕೋಟಿ ರೂಪಾಯಿ (ಬಾಗಮನೆ ಡೆವಲಪ್ಪರ್ಸ್, ರಿಯಲ್ ಎಸ್ಟೇಟ್)
- ಜಿಎಂಆರ್ ರಾವ್ ಹಾಗೂ ಕುಟುಂಬ, 31,340 ಕೋಟಿ ರೂಪಾಯಿ (ಜಿಎಂಆರ್ ಕಂಪನಿ)
- ಎಸ್ ಗೋಪಾಲಕೃಷ್ಣ ಹಾಗೂ ಕುಟುಂಬ, 30,740 ಕೋಟಿ ರೂಪಾಯಿ(ಇನ್ಫೋಸಿಸ್, ಐಟಿ ಸರ್ವೀಸ್)
- ಯುವ ಉದ್ಯಮಿ ನಿತಿನ್ ಕಾಮತ್ ಕುಟುಂಬಕ್ಕೆ 2ನೇ ಸ್ಥಾನ
ನಿತಿನ್ ಕಾಮತ್ ಹಾಗೂ ನಿಖಿಲ್ ಕಾಮತ್ ದೇಶದ ಶ್ರೀಮಂತ ಯುವ ಉದ್ಯಮಿಗಳು ಎಂದು ಗುರುತಿಸಿಕೊಂಡಿದ್ದಾರ. ಶ್ರಮವಹಿಸಿ ಉದ್ಯಮಸ್ರಾಮಾಜ್ಯ ಕಟ್ಟಿ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವಿಶೇಷ ಅಂದರೆ ಬೆಂಗಳೂರಿನ ಶ್ರೀಮಂತ ಉದ್ಯಮಿಗಳ ಪೈಕಿ ನಿತಿನ್ ಕಾಮತ್ ಕುಟುಂಬಕ್ಕೆ 2ನೇ ಸ್ಥಾನ. ಇವರ ಒಟ್ಟು ಸಂಪತ್ತು ಮೌಲ್ಯ ಬರೋಬ್ಬರಿ 40 ಸಾವಿರ ಕೋಟಿ ರೂಪಾಯಿ.
ದೇಶದ 8ನೇ ಶ್ರೀಮಂತ ಅಜೀಮ್ ಪ್ರೇಮ್‌ಜಿ
ಬೆಂಗಳೂರಿನ ನಂಬರ್ 1 ಶ್ರೀಮಂತ ಅಜೀಮ್ ಪ್ರೇಮ್‌ಜಿ ದೇಶದ 8ನೇ ಶ್ರೀಮಂತ ವ್ಯಕ್ತಿಯಾಗಿ ಬಡ್ತಿ ಪಡೆದಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅಜೀಮ್ ಪ್ರೇಮ್‌ಜಿ ಆದಾಯ 6 ಪಟ್ಟು ಹೆಚ್ಚಾಗಿದೆ. ಹೀಗಾಗಿ ಕಳೆದ ವರ್ಷ ದೇಶದ 34ನೇ ಶ್ರೀಮಂತ ಉದ್ಯಮಿಯಾಗಿದ್ದ ಅಜೀಮ್ ಪ್ರೇಮ್‌ಜಿ ಇದೀಗ ದೇಶದ 8ನೇ ಶ್ರೀಮಂತ ಉದ್ಯಮಿಯಾಗಿ ಬಡ್ತಿ ಪಡೆದಿದ್ದಾರೆ.
ಟೆಕ್ ನಗರದಲ್ಲಿ ಭರ್ಜರಿ ಹೂಡಿಕೆ
ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಸೇರಿದಂತೆ ಹಲವು ಐಟಿ ಕಂಪನಿಗಳು ಬೆಂಗಳೂರನ್ನು ಕೇಂದ್ರವನ್ನಾಗಿಸಿಕೊಂಡಿದೆ. ಇತ್ತೀಚೆಗೆ ಆ್ಯಪಲ್ ಕೂಡ ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ವ್ಯಾಪಕವಾಗಿ ಬೆಂಗಳೂರು ಬೆಳೆಯುತ್ತಿದೆ. ಇಲ್ಲಿ ಹೂಡಿಕೆ ಹೆಚ್ಚಾಗುತ್ತಿದೆ. ಉದ್ಯೋಗಗಳು ಸೃಷ್ಟಿಯಾಗುತ್ತಿದೆ. ಶ್ರೀಮಂತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.


