Asianet Suvarna News Asianet Suvarna News

ಕಿರಣ್‌ ಮಜುಂದಾರ್‌ ಶಾಗೆ ಆಸ್ಪ್ರೇಲಿಯಾ ಅತ್ಯುಚ್ಚ ಗೌರವ!

ಕಿರಣ್‌ ಮಜುಂದಾರ್‌ ಶಾಗೆ ಆಸ್ಪ್ರೇಲಿಯಾ ಅತ್ಯುಚ್ಚ ಗೌರವ| ಆರ್ಡರ್‌ ಆಫ್‌ ಆಸ್ಪ್ರೇಲಿಯಾ ಪ್ರದಾನ| ಇದಕ್ಕೆ ಪಾತ್ರರಾದ 4ನೇ ಭಾರತೀಯ ಪ್ರಜೆ

Australian civilian honour for Biocon Kiran Mazumdar Shaw
Author
Bangalore, First Published Jan 19, 2020, 10:28 AM IST
  • Facebook
  • Twitter
  • Whatsapp

ನವದೆಹಲಿ[ಜ.19]: ಆಸ್ಪ್ರೇಲಿಯಾ ಸರ್ಕಾರ ಕೊಡ ಮಾಡುವ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್‌ ಅಫ್‌ ಆಸ್ಪ್ರೇಲಿಯಾ’ಕ್ಕೆ ಬೆಂಗಳೂರು ಮೂಲದ ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ಅವರು ಪಾತ್ರರಾಗಿದ್ದಾರೆ.

ಆ ಮೂಲಕ ಈ ಗೌರವಕ್ಕೆ ಭಾಜನರಾದ ನಾಲ್ಕನೇ ಭಾರತೀಯ ವ್ಯಕ್ತಿ ಎಂಬ ಹಿರಿಮೆ ಮುಡಿಗೇರಿಸಿಕೊಂಡಿದ್ದಾರೆ. ಈ ಹಿಂದೆ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌, ಮಾಜಿ ಅಟಾರ್ನಿ ಜನರಲ್‌ ಸೋಲಿ ಸೊರಾಬ್ಜಿ ಹಾಗೂ ಸಮಾಜ ಸೇವಕಿ ಮದರ್‌ ಥೆರೇಸಾಗೆ ಈ ಗೌರವ ಲಭಿಸಿತ್ತು.

ಇ-ಸಿಗರೇಟ್ ಬ್ಯಾನ್ ಘೋಷಣೆ ನಿಮ್ಮಿಂದೇಕೆ?: ಕಿರಣ್ ಬೆರಗಾದರು ನಿರ್ಮಲಾ ಉತ್ತರಕ್ಕೆ!

ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದಲ್ಲಿನ ಆಸ್ಪ್ರೇಲಿಯಾ ರಾಯಭಾರಿ ಹರೀಂದರ್‌ ಸಿಧು ಗೌರವ ಪ್ರದಾನ ಮಾಡಿದ್ದಾರೆ.

ಆಸ್ಪ್ರೇಲಿಯಾ ಹಾಗೂ ಭಾರತ ನಡುವಿನ ಸಂಬಂಧ ಸುಧಾರಣೆಯಲ್ಲಿ ಕಿರಣ್‌ ಪಾತ್ರ ಪರಿಗಣಿಸಿ, ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಆಸ್ಪ್ರೇಲಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಮಜುಂದರ್‌ ಶಾ ಆಸ್ಪ್ರೇಲಿಯಾದ ಫೆಡರೇಶನ್‌ ವಿಶ್ವ ವಿದ್ಯಾಲಯದ ಹಳೇ ವಿದ್ಯಾರ್ಥಿಯೂ ಹೌದು.

ಕನ್ನಡಿಗರಿಗೆ ಅವಮಾನ: ಕೊನೆಗೂ ಕ್ಷಮೆ ಕೇಳಿದ ಕಿರಣ್ ಮಜುಂದಾರ್ ಶಾ

Follow Us:
Download App:
  • android
  • ios