ಕೊರೋನಾ ವೈರಸ್ ನಡುವೆ ಅದಾನಿ ಆದಾಯ ಡಬಲ್ 2021ರಲ್ಲಿ ಪ್ರತಿ ಗಂಟೆ ಹೆಚ್ಚುವರಿಯಾಗಿ 75 ಕೋಟಿ ಆದಾಯ ಗಳಿಕೆ ಏಷ್ಯಾದ ಎರಡನೇ 2ನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ
ನವದೆಹಲಿ(ಮೇ.23): ಭಾರತದ ಉದ್ಯಮಿ ಗೌತಮ್ ಅದಾನಿ ಇತ್ತೀಚೆಗೆ ಏಷ್ಯಾದ 2ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕೊರೋನಾ ವೈರಸ್ ಸಂಕಷ್ಟದ ನಡುವೆ ಅದಾನಿ ಸಂಪತ್ತು ವೃದ್ಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲೇನಿಯರ್ ಇಂಡೆಕ್ಸ್ ಬಿಡುಗಡೆ ಮಾಡಿದ ಏಷ್ಯಾದ ಶ್ರೀಮಂತ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿರುವ ಅದಾನಿ ಅದಾಯದ ವಿವರವೂ ಬಹಿರಂಗಗೊಂಡಿದೆ. ಈ ಪ್ರಕಾರ ಗೌತಮಿ ಅದಾನಿ 2021ರಲ್ಲಿ ಪ್ರತಿ ಗಂಟೆ ಹೆಚ್ಚುವರಿಯಾಗಿ 75 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ.
ಏಷ್ಯಾ ಶ್ರೀಮಂತ ವ್ಯಕ್ತಿ ಪಟ್ಟಿ ಬಿಡುಗಡೆ; ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟ ಗೌತಮ್ ಅದಾನಿ!
ಗೌತಮ್ ಅದಾನಿ ಕಳೆದ 142 ದಿನದಲ್ಲಿ 2.5 ಲಕ್ಷ ಕೋಟಿ ಆದಾಯಗಳಿಸಿದ್ದಾರೆ. ಈ ಮೂಲಕ ಮೇ 23ರ ವೇಳೆಗೆ ಗೌತಮ್ ಅದಾನಿ ಒಟ್ಟು ಆದಾಯ 5.03 ಲಕ್ಷ ಕೋಟಿ ರೂಪಾಯಿ. 2020ರರಲ್ಲಿ ಸರಿಸುಮೂರು ಎರಡೂವರೆ ಲಕ್ಷ ಕೋಟಿ ರೂಪಾಯಿ ಆದಾಯವಿದ್ದ ಅದಾನಿ, ಇದೀಗ 5.03 ಲಕ್ಷ ಕೋಟಿ ರೂಪಾಯಿಗೆ ವೃದ್ಧಿಸಿಕೊಂಡಿದ್ದಾರೆ. ಇದರೊಂದಿಗೆ ಈ ವರ್ಷದ 142 ದಿನ ಪ್ರತಿ ಗಂಟೆ ಅದಾನಿ 75 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಆದಾಯ ಗಳಿಸಿದ್ದಾರೆ.
1980ರಲ್ಲಿ ವಜ್ರ ವ್ಯಾಪಾರಿಯಾಗಿ ಬ್ಯೂಸಿನೆಸ್ ಆರಂಭಿಸಿದ ಗೌತಮ್ ಅದಾನಿ, 1988ರಲ್ಲಿ ತಮ್ಮ ರಾಜ್ಯ ಗುಜರಾತ್‌ಗೆ ತೆರಳಿ ಅದಾನಿ ಎಂಟರ್‌ಪ್ರೈಸಸ್ ಕಂಪನಿ ಸ್ಥಾಪಿಸಿದರು. ಯಶಸ್ಸಿನ ಪಥದಲ್ಲಿ ಸಾಗಿದ ಅದಾನಿ ವ್ಯವಹಾರವನ್ನು ಬಂದರುಗಳಿಗೆ ವಿಸ್ತರಿಸಿದರು. ಬಳಿಕ ವಿಮಾನಿ ನಿಲ್ದಾಣ, ಇಂಧನ ಸಂಪನ್ಮೂಲ, ಲಾಜಿಸ್ಟಿಕ್, ಕೃಷಿ, ರಿಯಲ್ ಎಸ್ಟೇಟ್, ಹಣಕಾಸು ಸೇವೆ, ಅನಿಲ ವಿತರಣೆ, ರಕ್ಷಣಾ ಕ್ಷೇತ್ರ ಸೇರಿದಂತೆ ಬಹುತೇಕ ವಲಯದಲ್ಲಿ ಅದಾನಿ ಗ್ರೂಪ್ ಕಾಲಿಟ್ಟು ಯಶಸ್ವಿಯಾಯಿತು.
ಗುಜರಾತ್ ಮೋದಿ ತವರೂರು: ಇಲ್ಲಿದ್ದಾರೆ 58 ಕುಬೇರರು!.
1995 ರಲ್ಲಿ, ಅರೇಬಿಯನ್ ಸಮುದ್ರದ ತೀರದಲ್ಲಿರುವ ಮುಂಡ್ರಾ ಬಂದರು ನಿರ್ವಹಿಸುವ ಒಪ್ಪಂದ ಪಡೆಯುವಲ್ಲಿ ಯಶಸ್ವಿಯಾದರು. ಇದೀಗ ಅದಾನಿ ಗ್ರೂಪ್ ಭಾರತದ ಅತಿದೊಡ್ಡ ಖಾಸಗಿ ವಲಯದ ಬಂದರು ಮತ್ತು ವಿಮಾನ ನಿಲ್ದಾಣ ಆಪರೇಟರ್ ಆಗಿ ಹೊರಹೊಮ್ಮಿದೆ.
ಏಷ್ಯಾದ ಅತೀ ಶ್ರೀಮಂತ ವ್ಯಕ್ತಿಯಲ್ಲಿ ಪಟ್ಟಿಯಲ್ಲಿ ಅದಾನಿ 2ನೇ ಸ್ಥಾನದಲ್ಲಿದ್ದರೆ, ಮೊದಲ ಸ್ಥಾನವನ್ನು ಮುಖೇಶ್ ಅಂಬಾನಿ ಅಲಂಕರಿಸಿದ್ದಾರೆ. ಆದರೆ ಅದಾನಿ ಆದಾಯ ಗಳಿಕೆ ವೇಗ ನೋಡಿದರೆ, ಅಂಬಾನಿ ಮೀರಿಸುವದರಲ್ಲಿ ಯಾವುದೇ ಅನುಮಾನವಿಲ್ಲ.
