ಅನಿಲ್ ಅಂಬಾನಿಗೆ ಹೊಡೀತು ಜಾಕ್‌ಪಾಟ್, ತೆರೆಯಿತು ಭಾಗ್ಯದ ಬಾಗಿಲು;  ₹1 ಲಕ್ಷ ಈಗ 27 ಲಕ್ಷ ಆಯ್ತು!

ಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಅಂಬಾನಿ ರಿಲಯನ್ಸ್ ಪವರ್‌ಗೆ ಬೃಹತ್ ಮೊತ್ತದ ಆರ್ಡರ್ ಬಂದಿದ್ದು, ಕಂಪನಿಯ ಷೇರುಗಳು ಗಗನಕ್ಕೇರಿವೆ. ಈ ಒಂದು ಆರ್ಡರ್‌ನಿಂದ ಅನಿಲ್ ಅಂಬಾನಿ ಆರ್ಥಿಕ ಸ್ಥಿತಿಯೇ ಬದಲಾಗುವ ಸಾಧ್ಯತೆಗಳಿವೆ.

Anil Ambani s Reliance Power bags 500 MW battery energy storage contract through e auction mrq

ಮುಂಬೈ: ಉದ್ಯಮಿ ಅನಿಲ್ ಅಂಬಾನಿಗೆ ಜಾಕ್‌ಪಾಟ್ ಹೊಡೆದಿದ್ದು, ಸಾಲದ ಸುಳಿಯಲ್ಲಿ  ಸಿಲುಕಿದ್ದವರಿಗೆ ದೀಪಾವಳಿ ಬೋನಸ್ ಸಿಕ್ಕಂತಾಗಿದೆ. ಈ ಜಾಕ್‌ಪಾಟ್ ಬೆನ್ನಲ್ಲೇ ಅನಿಲ್ ಅಂಬಾನಿ ಆರ್ಥಿಕ ಹಣೆಬರಹ ಸಂಪೂರ್ಣವಾಗಿ ಬದಲಾಗಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. ಇತ್ತೀಚೆಗೆ  ಹೊಸ ವಲಯಕ್ಕೆ ಎಂಟ್ರಿ ಕೊಟ್ಟಿದ್ದ ಅನಿಲ್ ಅಂಬಾನಿ, ಹೆವಿ ಸೆಕ್ಟೇರ್ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದಾರೆ. ಇದೀಗ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಪವರ್‌ಗೆ (Electric power generation transmission and distribution company) ಬಹುದೊಡ್ಡ ಜಾಕ್‌ಪಾಟ್ ಅಂದ್ರೆ ದೊಡ್ಡಮೊತ್ತದ ಆರ್ಡರ್ ಸಿಕ್ಕಿದೆ. ಈ ಒಂದು ಆರ್ಡರ್‌ನಿಂದ ಉದ್ಯಮಿ ಅನಿಲ್ ಅಂಬಾನಿಯ ಭಾಗ್ಯದ ಬಾಗಿಲು ತೆರೆಯುವ ಎಲ್ಲಾ ಸಾಧ್ಯತೆಗಳಿವೆ.

ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಇ-ರಿವರ್ಸ್ ಹರಾಜು ಮೂಲಕ 500 ಮೆಗಾವ್ಯಾಟ್ ಬ್ಯಾಟರಿ ಶೇಖರಣಾ ಯೋಜನೆಗೆ ಆರ್ಡರ್ ತಮಗೆ ಸಿಕ್ಕಿದೆ ಎಂದು ರಿಲಯನ್ಸ್ ಪವರ್ ಅಧಿಕೃತವಾಗಿ ಹೇಳಿಕೊಂಡಿದೆ. ರಿಲಯನ್ಸ್ ಪವರ್ ಹೇಳಿಕೆಯ ಪ್ರಕಾರ, 11ನೇ ಸೆಪ್ಟೆಂಬರ್ 2024ರಂದು ಇ-ಹರಾಜು ಪ್ರಕ್ರಿಯೆ ನಡೆದಿತ್ತು. ಈ ಹರಾಜಿನಲ್ಲಿ 500 ಮೆಗಾವ್ಯಾಟ್ ಬ್ಯಾಟರಿ ಶೇಖರಣಾ ಯೋಜನೆಯನ್ನು ತನ್ನದಾಗಿಸಿಕೊಳ್ಳಲು ಯಶಸ್ವಿಯಾಗಿದೆ ಎಂದಿದೆ. ಈ ಆದೇಶದ ಪ್ರಕಾರ, 1,0000 MW ಸಿಂಗರ್ ಬ್ಯಾಟರಿಯು ರಿಲಯನ್ಸ್ ಪವರ್‌ನ ಶಕ್ತಿಯ ಸಂಗ್ರಹವನ್ನು ಹೆಚ್ಚಿಸಿಕೊಳ್ಳುವುದು ಈ ಯೋಜನೆಯ ಮೊದಲ ಭಾಗವಾಗಿದೆ. Renewable Energy Project ಡೆಲಿವರಿ ಪಾಯಿಂಟ್ 400 KV ಫತೇಗಢ್, PS, ರಾಜಸ್ಥಾನ ಇರಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ದಿಢೀರ್ ಬದಲಾಯ್ತು ಅನಿಲ್ ಅಂಬಾನಿ ಅದೃಷ್ಟ, ಮಗನಿಗೆ ಸಿಕ್ತು ಸಕ್ಸಸ್‌ ಕೀ, ಹಣದ ಸುರಿಮಳೆ ಫಿಕ್ಸ್!

ರಿಲಯನ್ಸ್ ಪವರ್‌ಗೆ ಈ ಆರ್ಡರ್ ಸಿಕ್ಕಿರುವ ವಿಷಯ ತಿಳಿಯುತ್ತಿದ್ದಂತೆ ಶೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಪವರ್ ಕಂಪನಿಯ ಶೇರುಗಳ ಬೆಲೆ ಏರಿಕೆಯಾಗಲಾರಂಭಿಸಿದೆ. ಸೋಮವಾರ 30.30 ಆರಂಭವಾಗಿ 31.32 ರೂ.ಗೆ ಅಂತ್ಯವಾಗಿವೆ. ಮಂಗಳವಾರ ಮಾರಕಟ್ಟೆ ಆರಂಭ ಆದಾಗಿನಿಂದಲೂ ರಿಲಯನ್ಸ್ ಪವರ್ ಶೇರುಗಳ ಬೆಲೆ ಏರಿಕೆಯಾಗುತ್ತಲೇ ಇವೆ. ಸಂಕಷ್ಟದಲ್ಲಿದ್ದ ಅನಿಲ್ ಅಂಬಾನಿ ಸಂಸ್ಥೆಗೆ ಸಿಕ್ಕಿರುವ ಆರ್ಡರ್ ಭಾಗ್ಯದ ಬಾಗಿಲು ಎಂದು ಪರಿಗಣಿಸಲಾಗುತ್ತಿದೆ. 

ಈ ಒಂದು ಆರ್ಡರ್ ರಿಲಯನ್ಸ್ ಪವರ್ ಶೇರುದಾರರಿಗೆ ಒಳ್ಳೆಯ ರಿಟರ್ನ್ ನೀಡುವ ಮೂಲಕ ಶ್ರೀಮಂತರನ್ನಾಗಿಸಿದೆ. ಸಾಲದ ಹೊರೆ ಹೊತ್ತಿರುವ ಕಂಪನಿಯ ಷೇರುಗಳು ನಾಲ್ಕೂವರೆ ವರ್ಷಗಳಲ್ಲಿ ಹೂಡಿಕೆದಾರರಿಗೆ  ಶೇ.2671ರಷ್ಟು ಲಾಭ ನೀಡಿವೆ. ಮಾರ್ಚ್ 27, 2020 ರಂದು, ರಿಲಯನ್ಸ್ ಪವರ್‌ನ ಷೇರುಗಳು ರೂ 1.13 ತಲುಪಿತ್ತು.ನಾಲ್ಕೂವರೆ ವರ್ಷಗಳ ನಂತರ 31.32 ರೂ.ಗೆ ತಲುಪಿದೆ. ಅಂದರೆ ಅಂದು ಈ ಷೇರಿನಲ್ಲಿ ಯಾರಾದರೂ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇಂದು 27.71 ರೂಪಾಯಿ ಆಗಿರುತ್ತದೆ. ಶೇರುಗಳ ಬೆಲೆ ಮಾರುಕಟ್ಟೆಯಲ್ಲಿ ಚೇತರಿಕೆ ಕಾಣಿಸುತ್ತಿರೋದು ಅನಿಲ್ ಅಂಬಾನಿ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಬಹುದು.

ಮತ್ತೆ ತಪ್ಪು ದಾರಿ ಹಿಡಿದ ಅನಿಲ್ ಅಂಬಾನಿ, ಷೇರು ಮಾರುಕಟ್ಟೆಯಿಂದ 5 ವರ್ಷ ಬ್ಯಾನ್ ಮಾಡಿದ ಸೆಬಿ!

Latest Videos
Follow Us:
Download App:
  • android
  • ios