ಅನಿಲ್ ಅಂಬಾನಿ ಕುಟುಂಬ ಹೊಸ ಉದ್ಯಮಕ್ಕೆ ಕಾಲಿರಿಸಿದೆ. ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಈ ಉದ್ಯಮದಲ್ಲಿ ಹಣದ ಸುರಿಮಳೆಯಾಗಲಿದೆ.

ನವದೆಹಲಿ: ಅನಿಲ್ ಅಂಬಾನಿ ಅವರ ವ್ಯವಹಾರ ನಿಧಾನವಾಗಿ ಮರಳಿ ಲಯಕ್ಕೆ ಬರುತ್ತಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ರಿಲಯನ್ಸ್ ಕ್ಯಾಪಿಟಲ್ ಡೀಲ್ ಒಪ್ಪಂದ ಪ್ರಕಾರ ಹಿಂದೂಜಾ ಗ್ರೂಪ್ 2,750 ಕೋಟಿ ರೂಪಾಯಿ ಹಣವನ್ನು ಎಸ್ಕ್ರೋ ಖಾತೆಗೆ ಜಮೆ ಮಾಡಿದೆ. ಇದರ ಬೆನ್ನಲ್ಲೇ ಅನಿಲ್ ಅಂಬಾನಿಯವರ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ (Reliance Infrastructure) ಹೊಸ ಸಬ್ಸಿಡಿಯ ರಿಲಯನ್ಸ್ ಜೈ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ (RJPPL) ಸಂಬಂಧ ಹೊಸ ಘೋಷಣೆಯೊಂದನ್ನು ಮಾಡಿದೆ. ಶೇರು ಮಾರುಕಟ್ಟೆಗೆ ನೀಡಿರುವ ಮಾಹಿತಿ ಪ್ರಕಾರ, ರಿಯಲ್ ಎಸ್ಟೇಟ್ ಉದ್ಯಮವನ್ನು ವಿಸ್ತರಣೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಘೋಷಣೆ ಬಳಕ ರಿಲಯನ್ಸ್ ಜೈ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಶೇರುಗಳ ಬೆಲೆ ಇಳಿಮುಖವಾಗಿತ್ತಿದೆ. ಆಗಸ್ಟ್ 13ರಂದು ಕಂಪನಿಯ ಮಾರ್ಕೆಟ್ ಕ್ಯಾಪ್ 8,811 ಕೋಟಿ ರೂಪಾಯಿ ಆಗಿದೆ. 

ರಿಲಯನ್ಸ್ ಜೈ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ (RJPPL) ಅನ್ನು ರಿಲಯನ್ಸ್ ಎನರ್ಜಿ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಇದು ಸಹ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ನ ಅಂಗಸಂಸ್ಥೆಯಾಗಿದೆ. ಆಗಸ್ಟ್ 12, 2024ರಂದು ರಿಲಯನ್ಸ್ ಜೈ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಅಧಿಕೃತವಾಗಿ 10 ರೂಪಾಯಿ ಮುಖಬೆಲೆಯ 10 ಸಾವಿರ ಈಕ್ವಿಟಿ ಶೇರುಗಳನ್ನ ಪರಿಚಯಿಸಿದ್ದು, ಒಟ್ಟು ಮೌಲ್ಯ 1,00,000 ರೂಪಾಯಿ ಆಗಿದೆ. ಹೊಸದಾಗಿ ಆರಂಭವಾಗಿರುವ ಕಂಪನಿ ರಿಯಲ್ ಎಸ್ಟೇಟ್‌ ಕ್ಷೇತ್ರದಲ್ಲಿ ಕೆಲಸ ಮಾಡಲಿದೆ. ವಿವಿಧ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದು, ಮಾರಾಟ ಮಾಡುವುದು, ಗುತ್ತಿಗೆ ನೀಡುವುದು ಮತ್ತು ಅಭಿವೃದ್ಧಿಪಡಿಸುವುದು ಕಂಪನಿಯ ಗುರಿಯಾಗಿದೆ.

ಸದ್ಯ ದೇಶದಲ್ಲಿ ರಿಯಲ್ ಎಸ್ಟೇಟ್ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ. ಇಂತಹ ಸಂದರ್ಭದಲ್ಲಿ ರಿಲಯನ್ಸ್ ಇನ್ಫ್ರಾ ಇಲ್ಲಿಯ ಲಾಭಗಳಿಸುವ ಉದ್ದೇಶವನ್ನು ಹೊಂದಿದೆ. ಈ ಮೂಲಕ ಕಂಪನಿಯ ನಿವ್ವಳ ಲಾಭವನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಕೇಂದ್ರ ಸರ್ಕಾರ ಸಹ ಬಡವರಿಗೆ ಸೂರು ಕಲ್ಪಿಸುವ ಗುರಿಯನ್ನು ಹೊಂದಿದೆ. ರಿಯಲ್ ಎಸ್ಟೇಟ್ ಉದ್ಯಮ ನಗರೀಕರಣ, ರಸ್ತೆ ನಿರ್ಮಾಣ, ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ನಿರ್ಮಾಣವನ್ನು ಹೊಂದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ 2022ರ ವೇಳೆಗೆ 2 ಕೋಟಿ ಕೈಗೆಟುಕುವ ಮನೆಗಳನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿತ್ತು. 2023ರ ವೇಳೆಗೆ ಸುಮಾರು 1 ಕೋಟಿ 14 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಈ ಪೈಕಿ 97 ಲಕ್ಷದ 10 ಸಾವಿರ ಮನೆಗಳನ್ನು ನಿರ್ಮಿಸಿ ಜನರಿಗೆ ಹಸ್ತಾಂತರಿಸಲಾಗಿದೆ. 

100 ರೂಪಾಯಿ ಇಟ್ಕೊಂಡು ಮುಂಬೈಗೆ ಬಂದಿದ್ದ ವ್ಯಕ್ತಿ ಈಗ ₹11,560 ಕೋಟಿ ಒಡೆಯ!

100 ಸ್ಮಾರ್ಟ್ ಸಿಟಿಗಳಿಗೆ 48,000 ಕೋಟಿ 

ದೇಶದಲ್ಲಿ 100 ಸ್ಮಾರ್ಟ್‌ ಸಿಟಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 48 ಸಾವಿರ ಕೋಟಿ ರೂ. ($ 6.5 ಬಿಲಿಯನ್) ಹಣವನ್ನು ಮೀಸಲಿರಿಸಿದೆ. 2023ರಲ್ಲಿ 1 ಲಕ್ಷದ 93 ಸಾವಿರ ಕೋಟಿ ($ 26 ಬಿಲಿಯನ್) ವೆಚ್ಚದ 7900 ಕ್ಕೂ ಹೆಚ್ಚು ಯೋಜನೆಗಳಿಗೆ ಒಪ್ಪಂದಗಳನ್ನು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರಲ್ಲಿ 93,500 ಕೋಟಿ ರೂಪಾಯಿ ($12.6 ಬಿಲಿಯನ್) ವೆಚ್ಚದ 4700ಕ್ಕೂ ಹೆಚ್ಚು ಯೋಜನೆಗಳು ಪೂರ್ಣಗೊಂಡಿವೆ. ಮೂಲಭೂತ ಸೌಕರ್ಯಗಳ ಹೆಚ್ಚಿನ ಅನುದಾನವನ್ನು ರಸ್ತೆಗಳು ಮತ್ತು ಹೆದ್ದಾರಿಗಳ ನಿರ್ಮಾಣಕ್ಕಿ ವಿನಿಯೋಗಿಸಲಾಗುತ್ತದೆ. ನಗರಗಳಲ್ಲಿ ರೈಲ್ವೆ ಮತ್ತು ಸಾರ್ವಜನಿಕ ಸಾರಿಗೆಗೆ ಖರ್ಚು ಮಾಡಲಾಗುತ್ತಿದೆ.

2025ರ ವೇಳೆಗೆ ರಾಷ್ಟ್ರೀಯ ಹೆದ್ದಾರಿಯನ್ನು 2 ಲಕ್ಷ ಕಿ.ಮೀ.ವರೆಗೆ ವಿಸ್ತರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 220ಕ್ಕೆ ಹೆಚ್ಚಿಸಲಾಗುತ್ತದೆ. ಸಾರಿಗೆ ವಲಯದಲ್ಲಿ ಸರ್ಕಾರವು ದೊಡ್ಡ ಗುರಿಗಳನ್ನು ಸರ್ಕಾರ ಹೊಂದಿದೆ. 23 ಜಲಮಾರ್ಗಗಳನ್ನು ಕಾರ್ಯಗತಗೊಳಿಸಲು ಮತ್ತು 35 ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳನ್ನು (MMLP) ನಿರ್ಮಿಸಲು ಯೋಜಿಸಲಾಗಿದೆ. ಮೂಲಭೂತ ಸೌಕರ್ಯಕ್ಕಾಗಿ 2023ರ ಬಜೆಟ್‌ನಲ್ಲಿ 3.7 ಲಕ್ಷ ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು. 2024ರಲ್ಲಿ ಈ ಅನುದಾನ 5 ಲಕ್ಷ ಕೋಟಿಗೆ ಏರಿಕೆಯಾಗಿದೆ. ಹಾಗಾಗಿ ಭವಿಷ್ಯದಲ್ಲಿ ರಿಯಲ್‌ ಎಸ್ಟೇಟ್ ಉದ್ಯಮ ವೇಗವಾಗಿ ಬೆಳವಣಿಗೆಯಾಗಲಿದೆ. 

ಐಟಿ ಸೆಕ್ಟರ್‌ನಲ್ಲಿ 14 ಗಂಟೆ ಶಿಫ್ಟ್ ಕೆಲಸದ ಬಗ್ಗೆ ರಾಜ್ಯ ಸರ್ಕಾರದ ನಿಲುವೇನು?