* ಭಾರೀ ನಷ್ಟ ಎದುರಿಸುತ್ತಿರುವ ಅನಿಲ್ ಅಂಬಾನಿ* ರಿಲಾಯನ್ಸ್ ಪವರ್, ಇನ್ಫ್ರಾಸ್ಟ್ರಕ್ಚರ್ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ* ಏಕಾಏಕಿ ಅನಿಲ್ ಅಂಬಾನಿ ರಾಜೀನಾಮೆ ನೀಡಿದ್ದೇಕೆ?

ಮುಂಬೈ(ಮಾ.26): ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್‌ನ (ADAG) ಅಧ್ಯಕ್ಷ ಅನಿಲ್ ಅಂಬಾನಿ ಶುಕ್ರವಾರ ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ, ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅನಿಲ್ ಅಂಬಾನಿ ಷೇರು ವಿನಿಮಯ ಕೇಂದ್ರಗಳಲ್ಲಿ ಯಾವುದೇ ಲಿಸ್ಟೆಡ್ ಕಂಪನಿಗೆ ಸೇರದಂತೆ ನಿರ್ಬಂಧಿಸಿತ್ತು.

ಸೆಬಿ ಆದೇಶದ ನಂತರ ನಿರ್ದೇಶಕ ಹುದ್ದೆಗೆ ರಾಜೀನಾಮೆ 

ಸೆಬಿಯ ಮಧ್ಯಂತರ ಆದೇಶದ ನಂತರ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅನಿಲ್ ಅಂಬಾನಿ ಕಂಪನಿಯ ನಿರ್ದೇಶಕ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ರಿಲಯನ್ಸ್ ಪವರ್ ಷೇರು ವಿನಿಮಯ ಕೇಂದ್ರಕ್ಕೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ. ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಸಹ ಷೇರು ವಿನಿಮಯ ಕೇಂದ್ರಕ್ಕೆ ಅನಿಲ್ ಅಂಬಾನಿ ಅವರು "ಸೆಬಿಯ ಮಧ್ಯಂತರ ಆದೇಶವನ್ನು ಅನುಸರಿಸಿ" ಕಂಪನಿಯ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದೆ. ಫೆಬ್ರವರಿಯಲ್ಲಿ, ಸೆಬಿ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್, ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮತ್ತು ಇತರ ಮೂವರನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಹಣ ಹಿಂಪಡೆದ ಆರೋಪದ ಮೇಲೆ ನಿಷೇಧಿಸಿತ್ತು.

ಸಾಲ ಮರುಪಾವತಿಗೆ ಬಿಡಿಗಾಸೂ ಇಲ್ಲ ಎಂದಿದ್ದ ಅಂಬಾನಿಗೆ ವಿದೇಶದಲ್ಲಿ 18 ಕಂಪನಿ!

ಕಾರಣವೇನು?

ವಾಸ್ತವವಾಗಿ, ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅನಿಲ್ ಅಂಬಾನಿ ಷೇರು ವಿನಿಮಯ ಕೇಂದ್ರಗಳಲ್ಲಿ ಯಾವುದೇ ಲಿಸ್ಟೆಡ್ ಕಂಪನಿಗೆ ಸೇರುವುದನ್ನು ನಿಷೇಧಿಸಿತ್ತು. ಅಂದಿನಿಂದಲೇ ಅನಿಲ್ ಅಂಬಾನಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಲಾಗಿತ್ತು. 

ಷೇರುಪೇಟೆ ಮಾಹಿತಿ?

ಸೆಬಿಯ ಮಧ್ಯಂತರ ಆದೇಶದ ನಂತರ ಅನಿಲ್ ಅಂಬಾನಿ ಕಂಪನಿಯ ನಿರ್ದೇಶಕ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ರಿಲಯನ್ಸ್ ಪವರ್ ಷೇರು ಮಾರುಕಟ್ಟೆಗೆ ತಿಳಿಸಿದೆ. ಅದೇ ರೀತಿ, ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಸಹ ಷೇರು ವಿನಿಮಯ ಕೇಂದ್ರಕ್ಕೆ ಅನಿಲ್ ಅಂಬಾನಿ ಅವರು ಸೆಬಿಯ ಮಧ್ಯಂತರ ಆದೇಶವನ್ನು ಅನುಸರಿಸಿ ಕಂಪನಿಯ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದೆ.

ಅಂಬಾನಿ, ತೆಂಡೂಲ್ಕರ್ ಸೇರಿ ದೇಶದ 300 ಗಣ್ಯರಿಗೆ ಕಂಟಕ: ಏನಿದು 'ಪಂಡೋರಾ ಪೇಪರ್ಸ್‌'?

ಐದು ವರ್ಷಗಳಲ್ಲಿ ಹೆಚ್ಚುವರಿ ನಿರ್ದೇಶಕರ ನೇಮಕ

ಆರ್-ಪವರ್ ಮತ್ತು ಆರ್-ಇನ್‌ಫ್ರಾ ನಿರ್ದೇಶಕರ ಮಂಡಳಿಯು ಶುಕ್ರವಾರ ರಾಹುಲ್ ಸರಿನ್ ಅವರನ್ನು ಐದು ವರ್ಷಗಳ ಅವಧಿಗೆ ಸ್ವತಂತ್ರ ನಿರ್ದೇಶಕರಾಗಿ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಿದೆ ಎಂದು ಎರಡೂ ADAG ಸಮೂಹ ಕಂಪನಿಗಳು ತಿಳಿಸಿವೆ. ಆದರೆ, ಪ್ರಸ್ತುತ ಈ ನೇಮಕಾತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅನುಮೋದನೆಗೆ ಒಳಪಟ್ಟಿರುತ್ತದೆ.

ಮಾರಾಟ ಪ್ರಕ್ರಿಯೆಯಲ್ಲಿ ಹಲವು ಕಂಪನಿಗಳು

ಅನಿಲ್ ಅಂಬಾನಿ ಅವರ ಹಲವು ಕಂಪನಿಗಳು ದಿವಾಳಿತನ ಪ್ರಕ್ರಿಯೆಗೆ ಒಳಗಾಗುತ್ತಿರುವ ಸಮಯದಲ್ಲಿ ಈ ಸುದ್ದಿ ಬಂದಿದೆ. ಇವುಗಳಲ್ಲಿ ರಿಲಯನ್ಸ್ ಇನ್ಫ್ರಾಟೆಲ್ (ರಿಲಯನ್ಸ್ ಕಮ್ಯುನಿಕೇಷನ್ಸ್ನ ಟವರ್ ಆರ್ಮ್), ರಿಲಯನ್ಸ್ ಟೆಲಿಕಾಂ, ರಿಲಯನ್ಸ್ ನೇವಲ್ ಮತ್ತು ರಿಲಯನ್ಸ್ ಕ್ಯಾಪಿಟಲ್ ಸೇರಿವೆ. ಇದಲ್ಲದೆ, ಪಿರಾಮಲ್ ಗ್ರೂಪ್‌ನ ಕಂಪನಿ ಪಿರಮಲ್ ಕ್ಯಾಪಿಟಲ್ ಮತ್ತು ಹೌಸಿಂಗ್ ಫೈನಾನ್ಸ್ (PCHFL) ಕೂಡ ರಿಲಯನ್ಸ್ ಪವರ್ ವಿರುದ್ಧ NCLT ಅನ್ನು ಸಂಪರ್ಕಿಸಿದೆ.