ಇಲ್ಲೋರ್ವ ಸ್ಟಾರ್‌ ಬಕ್ಸ್‌ನ ಮಾಜಿ ಉದ್ಯೋಗಿ ತನ್ನನ್ನು ಕೆಲಸದಿಂದ ತೆಗೆದ ಸಂಸ್ಥೆ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್‌ ಬಕ್ಸ್‌ನ ಉತ್ಪನ್ನಗಳ ಎಲ್ಲಾ ರೆಸಿಪಿಗಳನ್ನು (ಪಾಕ ವಿಧಾನ) ಪೋಸ್ಟ್ ಮಾಡಿದ್ದು ಈ ಪೋಸ್ಟ್‌ ಸ್ವಲ್ಪ ಹೊತ್ತಿನಲ್ಲೇ ಫುಲ್ ವೈರಲ್ ಆಗಿದೆ. 

ಕೆಲವೊಮ್ಮ ಸಂಸ್ಥೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದಾಗ ಕೆಲವರು ಬೇರೆ ಉದ್ಯೋಗ ಅರಸಲು ಶುರು ಮಾಡಿದರೆ ಮತ್ತೆ ಕೆಲವರು ಕೆಲಸದಿಂದ ತೆಗೆದು ಹಾಕಿದ ಕಂಪನಿಗೆ ಬುದ್ದಿ ಕಲಿಸಲು ಸೇಡಿನ ದಾರಿ ಹಿಡಿಯುತ್ತಾರೆ. ಅದೇ ರೀತಿ ಇಲ್ಲೋರ್ವ ಸ್ಟಾರ್‌ ಬಕ್ಸ್‌ನ ಮಾಜಿ ಉದ್ಯೋಗಿ ತನ್ನನ್ನು ಕೆಲಸದಿಂದ ತೆಗೆದ ಸಂಸ್ಥೆ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್‌ ಬಕ್ಸ್‌ನ ಉತ್ಪನ್ನಗಳ ಎಲ್ಲಾ ರೆಸಿಪಿಗಳನ್ನು (ಪಾಕ ವಿಧಾನ) ಪೋಸ್ಟ್ ಮಾಡಿದ್ದು ಈ ಪೋಸ್ಟ್‌ ಸ್ವಲ್ಪ ಹೊತ್ತಿನಲ್ಲೇ ಫುಲ್ ವೈರಲ್ ಆಗಿದೆ. 

ಸ್ಟಾರ್‌ಬಕ್ಸ್‌ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧಿ ಪಡೆದಿರುವ ರುಚಿಕರ ಪಾನೀಯಗಳಿಗೆ (delicious beverages) ಹೆಸರಾಗಿದೆ. ದುಬಾರಿ ಬೆಲೆಯ ಸ್ಟಾರ್‌ಬಕ್ಸ್‌ನ ಟೀ ಕಾಫಿಗಳನ್ನು ಜನ ಸಾಮಾನ್ಯರು ಕುಡಿಯುವಂತಿಲ್ಲ. ಅಷ್ಟೊಂದು ದುಬಾರಿ ಎನಿಸಿರುವ ಇಲ್ಲಿನ ಟೀ ಕಾಫಿಗಳ ರೆಸಿಪಿ ಈಗ ವೈರಲ್ ಆಗಿದೆ. ಅದೂ ಆ ಕಂಪನಿಯ ಮಾಜಿ ಉದ್ಯೋಗಿಯೋರ್ವನಿಂದ. ಸೋರಿಕೆ ಆಗಿರುವ ಪಾಕ ವಿಧಾನದ ಚಿತ್ರಗಳಲ್ಲಿ ಉತ್ಪನ್ನದ ತಯಾರಿಗೆ ಬೇಕಾಗಿರುವ ಸರಿಯಾದ ಕಚ್ಚಾ ಸಾಮಗ್ರಿಗಳ ಅಳತೆ, ಹಾಕಬೇಕಾಗಿರುವ ಐಸ್‌ಗಳ ಪ್ರಮಾಣವನ್ನು ಹಂತ ಹಂತವಾಗಿ ನೀಡಲಾಗಿದೆ. ಇದು ಈ ಉತ್ಪನ್ನಗಳ ತಯಾರಿಯ ಪ್ರತಿ ಹಂತದ ಮಾಹಿತಿಯನ್ನು ನೀಡುತ್ತಿದೆ. 

ವೈರಲ್ ವೀಡಿಯೋ : ಚಿಲ್ಲರೆ ನಾಣ್ಯಗಳನ್ನೇ ನೀಡಿ ಐಫೋನ್ 15 ಖರೀದಿಸಿದ ಭಿಕ್ಷುಕ...!

ಯು ಆರ್ ವೆಲ್‌ಕಮ್‌ ನಿಮಗೆ ಸ್ವಾಗತ ಎಂದು ಬರೆದು 4ಕ್ಕೂ ಹೆಚ್ಚು ಬಗೆಯ ರೆಸಿಪಿಗಳ ಫೋಟೋಗಳನ್ನು ಆತ ಶೇರ್ ಮಾಡಿದ್ದಾನೆ. ಈ ಪೋಸ್ಟ್‌ ಈಗ ಸಖತ್ ವೈರಲ್ ಆಗಿದ್ದು, ಜನರು ಕೂಡ ಸೋರಿಕೆ ಆದ ಸ್ಟಾರ್‌ಬಕ್ಸ್ ಪಾಕ ವಿಧಾನದಿಂದ ಪೂರ್ತಿ ಖುಷಿಗೊಂಡಿದ್ದಾರೆ. ಮತ್ತು ಅನೇಕ ಜನರು ಈಗ ತಮ್ಮ ನೆಚ್ಚಿನ ಸ್ಟಾರ್‌ಬಕ್ಸ್ ಪಾನೀಯಗಳನ್ನು ಮನೆಯಲ್ಲಿಯೇ ಮರುಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ಸಂತೋಷ ಪಟ್ಟಿದ್ದಾರೆ. ಹಲವಾರು ಜನರು ಈ ಟ್ವಿಟ್ಟರ್‌ ಥ್ರೆಡ್ ಅನ್ನು ಬುಕ್‌ಮಾರ್ಕ್‌ ಮಾಡಿದ್ದು ಭವಿಷ್ಯದಲ್ಲಿ ಬಳಸುವುದಕ್ಕಾಗಿ ಸೇವ್‌ ಮಾಡಿದ್ದಾರೆ.

ಸ್ಟಾರ್‌ಬಕ್ಸ್‌ ಉತ್ಪನ್ನಗಳನ್ನು ಇಷ್ಟಪಡುವವರಿಗೆ ಇದೊಂದು ದೊಡ್ಡ ಉಡುಗೊರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ನೀವು ನಿಮ್ಮ ಉದ್ಯೋಗಿಯನ್ನು ಕಸದಂತೆ ಭಾವಿಸಿದರೆ ಈ ರೀತಿ ಆಗುತ್ತದೆ. ಕಡಿಮೆ ಸಂಬಳ ನೀಡುವುದು, ಅವರಿಗೆ ಯಾವುದೇ ಸವಲತ್ತುಗಳನ್ನು ನೀಡದೇ ಇರುವುದು , ಅಲ್ಲದೇ ಸಂಘ ಕಟ್ಟಿರುವುದಕ್ಕೆ ದಂಡ ವಿಧಿಸುವುದು ಇತ್ಯಾದಿ ಮಾಡಿದರೆ ಈ ರೀತಿ ಆಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಾವು ಈಗ ನಮ್ಮಿಷ್ಟದ ಪಾನೀಯವನ್ನು ನಾವೇ ತಯಾರಿಸಬಹುದು ಹಾಗೂ ಮತ್ತು ನಮ್ಮದೇ ಹೆಸರು ಬರೆಯಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನು ಬೇಗ ಡೌನ್‌ಲೋಡ್ ಮಾಡಿ ಏಕೆಂದರೆ ಸ್ಟಾರ್ಬಕ್ಸ್ ಕೂಡಲೇ ಟ್ವಿಟ್ಟರ್‌ಗೆ ಈ ಪೋಸ್ಟನ್ನು ಡಿಲೀಟ್ ಮಾಡುವಂತೆ ಕೇಳಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದೆ. 

ಇಂತಹ ಸಿಲ್ಲಿ ಕಾರಣಕ್ಕೂ ವಿಚ್ಚೇದನ ಆಗುತ್ತೆ ನೋಡಿ: ಲಾಯರ್ ಕೊಟ್ಟ ಕಾರಣಗಳ ಲಿಸ್ಟ್ ನೋಡಿ ಬೆಚ್ಚಿದ ಅವಿವಾಹಿತರು

ನ್ನು ಮಹತ್ವದ ವಿಚಾರ ಎಂದರೆ ಸ್ಟಾರ್‌ಬಕ್ಸ್‌ (Starbucks) ಸಂಸ್ಥೆ ತನ್ನ ಉತ್ಪನ್ನಗಳ ರೆಸಿಪಿಗಳನ್ನು ತುಂಬಾ ವಿಶ್ವಾಸಾರ್ಹ ಎಂದು ಭಾವಿಸಿದ್ದು, ಕಂಪನಿಯ ಹೊರಗೆ ಯಾರೊಂದಿಗೂ ಇದನ್ನು ಹಂಚಿಕೊಳ್ಳುವಂತಿಲ್ಲ, ಹೀಗಾಗಿ ಮುಂದಿನ ಉದ್ಯೋಗಿಗಳ ಮೇಲೆ ಸಂಸ್ಥೆ ಏನು ಕ್ರಮ ಕೈಗೊಳ್ಳಬಹುದು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

Scroll to load tweet…