ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಪೂರ್ಣಾವಧಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಮೇ ೧, ೨೦೨೫ ರಿಂದ ಐದು ವರ್ಷಗಳ ಅವಧಿಗೆ ಈ ನೇಮಕಾತಿ ಷೇರುದಾರರ ಅನುಮೋದನೆಗೆ ಒಳಪಟ್ಟಿರುತ್ತದೆ. ಈ ಹಿಂದೆ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದ ಅನಂತ್, ಜಿಯೋ, ರಿಟೇಲ್, ಇಂಧನ ವಿಭಾಗಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಶುಕ್ರವಾರ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಎಂ. ಅಂಬಾನಿ ಅವರನ್ನು ಕಂಪನಿಯ ಪೂರ್ಣಾವಧಿ ನಿರ್ದೇಶಕರನ್ನಾಗಿ ನೇಮಕ ಮಾಡಿರುವ ಬಗ್ಗೆ ಪ್ರಕಟಣೆ ಹೊರಡಿಸಿದೆ. ಅವರು ಈ ಹಿಂದೆ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಬ್ರೌನ್ ವಿಶ್ವವಿದ್ಯಾಲಯದಿಂದ ಪದವಿ ಮಾಡಿರುವ ಅನಂತ್ ಎಂ. ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಪೂರ್ಣಾವಧಿ ನಿರ್ದೇಶಕರಾಗಿ ನೇಮಕಗೊಂಡ ಅತ್ಯಂತ ಕಿರಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದಾರೆ. ಮಾನವ ಸಂಪನ್ಮೂಲ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸಿನ ಮೇರೆಗೆ ಮೇ 1, 2025 ರಿಂದ ಪ್ರಾರಂಭವಾಗುವ ಐದು ವರ್ಷಗಳ ಅವಧಿಗೆ ಅನಂತ್ ಅಂಬಾನಿ ಅವರ ನೇಮಕಾತಿಯನ್ನು ಅನುಮೋದಿಸಿದೆ, ಇದು ಷೇರುದಾರರ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಕಂಪನಿಯು ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್‌ನಲ್ಲಿ ತಿಳಿಸಿದೆ.

ರಿಲಯನ್ಸ್ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಅನಂತ್ ಅಂಬಾನಿ, ಈಗ ಭಾರತದ ಅತ್ಯಂತ ಮೌಲ್ಯಯುತ ಕಂಪನಿಯಲ್ಲಿ ಹೆಚ್ಚು ಸಕ್ರಿಯ ಕಾರ್ಯನಿರ್ವಾಹಕ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಮಾರ್ಚ್ 2020 ರಿಂದ ಜಿಯೋ ಪ್ಲಾಟ್‌ಫಾರ್ಮ್ಸ್, ಮೇ 2022 ರಿಂದ ರಿಲಯನ್ಸ್ ರಿಟೇಲ್ ವೆಂಚರ್ಸ್ ಮತ್ತು ಜೂನ್ 2021 ರಿಂದ ರಿಲಯನ್ಸ್ ನ್ಯೂ ಸೋಲಾರ್ ಎನರ್ಜಿ ಮತ್ತು ರಿಲಯನ್ಸ್ ನ್ಯೂ ಎನರ್ಜಿ ಸೇರಿದಂತೆ ರಿಲಯನ್ಸ್ ಗ್ರೂಪ್ ಕಂಪನಿಗಳ ಮಂಡಳಿಗಳ ಹಲವಾರು ವಿಭಾಗದಲ್ಲಿ ಅನಂತ್ ಅಂಬಾನಿ ಕೆಲಸ ಮಾಡುತ್ತಿದ್ದಾರೆ. ಸೆಪ್ಟೆಂಬರ್ 2022 ರಿಂದ ರಿಲಯನ್ಸ್ ಫೌಂಡೇಶನ್‌ನ ಮಂಡಳಿಯ ಸದಸ್ಯರು ಕೂಡ ಆಗಿದ್ದಾರೆ.

ವಿಶ್ವದ ಅತ್ಯಂತ ದುಬಾರಿ ವಾಚ್‌ ಬೆಲೆ 478 ಕೋಟಿ ರೂ, ದೇಶದಲ್ಲಿ ದುಬಾರಿ ವಾಚ್‌ ಹೊಂದಿರೋದು ಮುಕೇಶ್‌ ಅಂಬಾನಿ ಅಲ್ಲ!

ಆಕಾಶ್ ಅವರು ಸಮೂಹದ ಟೆಲಿಕಾಂ ಮತ್ತು ಡಿಜಿಟಲ್ ಸೇವೆಗಳ ವಿಭಾಗವಾದ ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಅಧ್ಯಕ್ಷರೂ ಆಗಿದ್ದಾರೆ ಮತ್ತು ಇಶಾ ಸಮೂಹದ ಚಿಲ್ಲರೆ ವಿಭಾಗವಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ.

ಅನಂತ್ ಅಂಬಾನಿ ಆರ್‌ಐಎಲ್‌ನಲ್ಲಿ 80,52,021 ಷೇರುಗಳನ್ನು ಹೊಂದಿದ್ದು, ಇದು ಕಂಪನಿಯ ಮಾಲೀಕತ್ವದ ಸುಮಾರು 0.12% ಗೆ ಸಮಾನವಾಗಿದೆ. ಅವರ ಸಹೋದರ ಮತ್ತು ಸಹೋದರಿ ಇಶಾ ಮತ್ತು ಆಕಾಶ್ ಅಂಬಾನಿ ಕೂಡ ಅಷ್ಟೇ ಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ, ಇದು ಕುಟುಂಬದ ಮಾಲೀಕತ್ವದ ಸಮಾನ ಪಾಲನ್ನು ಸೂಚಿಸುತ್ತದೆ. ಅನಂತ್ ಅವರ ಹಿರಿಯ ಸಹೋದರ ಆಕಾಶ್ ಮತ್ತು ಸಹೋದರಿ ಇಶಾ ಅಂಬಾನಿ ಕೂಡ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2025 ರ ಹೊತ್ತಿಗೆ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ನಿವ್ವಳ ಮೌಲ್ಯ 10 ಬಿಲಿಯನ್ ನಿಂದ 12 ಬಿಲಿಯನ್ ವರೆಗೆ ಇದೆ ಎಂದು ಅಂದಾಜಿಸಲಾಗಿದೆ.

ಪಾದಯಾತ್ರೆ ನಡುವೆ ಮಹಿಳೆ ಕೊಟ್ಟ 101 ರೂ ಕಾಣಿಕೆ ಸ್ವೀಕರಿಸಿದ ಅನಂತ್ ಅಂಬಾನಿ

1995 ರಲ್ಲಿ ಜನಿಸಿದ ಅನಂತ್ ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ, ಪ್ರಾಣಿ ಕಲ್ಯಾಣ ಮತ್ತು ರಕ್ಷಣೆ ಬಗ್ಗೆಯೂ ತುಂಬಾ ಕಾಳಜಿ ವಹಿಸುತ್ತಾರೆ. ಅಪಾಯದಲ್ಲಿರುವ ಪ್ರಾಣಿಗಳಿಗೆ ಪುನರ್ವಸತಿ ಕಲ್ಪಿಸುವುದು ಮತ್ತು ಅವುಗಳ ನಂತರದ ವರ್ಷಗಳಲ್ಲಿ ಆರೈಕೆ ಬಗ್ಗೆ ಗಮನಹರಿಸುವುದಂತೆ ಸೇರಿ ಹಲವಾರು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ವಂತರಾ ವನ್ಯಜೀವಿ ಅಭಯಾರಣ್ಯ ತೆರೆದಿದ್ದಾರೆ. ಇದು ಗುಜರಾತ್‌ನ ಜಾಮ್‌ನಗರದಲ್ಲಿ 3,000 ಎಕರೆ ವಿಸ್ತೀರ್ಣದಲ್ಲಿದೆ. ಇದನ್ನು ಮಾರ್ಚ್ 2025 ರಲ್ಲಿ ಉದ್ಘಾಟಿಸಲಾಯ್ತು. ರಿಲಯನ್ಸ್ ಫೌಂಡೇಶನ್ ಅನುದಾನಿತ ಈ ಅಭಯಾರಣ್ಯವು 43 ಜಾತಿಗಳನ್ನು ಪ್ರತಿನಿಧಿಸುವ 2,000 ಕ್ಕೂ ಹೆಚ್ಚು ಪ್ರಾಣಿಗಳಿಗೆ ನೆಲೆಯಾಗಿದೆ. 

ಇನ್ನು ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅನಂತ್ ಅಂಬಾನಿ, ನೂತನ ಇಂಧನ, ಚಿಲ್ಲರೆ ವ್ಯಾಪಾರ ಮತ್ತು ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ₹3.05 ಲಕ್ಷ ಕೋಟಿ ಹೂಡಿಕೆ ಮಾಡಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಮಾಡಿದರು. ಈ ಕ್ರಮವು ಸುಮಾರು 300,000 ಉದ್ಯೋಗಗಳನ್ನು ಸೃಷ್ಟಿಸಲಿದ್ದು, ರಾಜ್ಯದ ಆರ್ಥಿಕ ಬೆಳವಣಿಗೆಗೆ ಗಣನೀಯವಾಗಿ ಸೇರಿಸುತ್ತದೆ.