Asianet Suvarna News Asianet Suvarna News

ಕೆಲಸ ತೊರೆದು ನಾಟಿ ಕೋಳಿ ಸಾಕಾಣೆ ಆರಂಭಿಸಿದ ಹೈದರಾಬಾದ್‌ನ ಐಐಟಿ ಪದವೀಧರ

ಈಗ ಐಟಿ ಬಿಟಿ ಸೇರಿದಂತೆ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಕಡಿತದ್ದೇ ಮಾತು.  ಹೀಗಿರುವಾಗ ತೆಲಂಗಾಣದ ಐಐಟಿ ಪದವೀಧರನೋರ್ವ ಈ ಉದ್ಯೋಗ ವಜಾಕ್ಕೂ ಮೊದಲೇ ತನ್ನ ವಾರ್ಷಿಕ 28 ಲಕ್ಷ ಸಂಬಳ ಕೆಲಸ ತೊರೆದು  ನಾಟಿ ಕೋಳಿ ಸಾಕಾಣೆಯ ಉದ್ಯಮ ಆರಂಭಿಸಿದ್ದು, ಇದು ಅವರ ಕೈ ಹಿಡಿದಿದೆ.

An IITian from Hyderabad who quit his high paid job and started a country chicken business akb
Author
First Published Jan 31, 2023, 1:38 PM IST

ಹೈದರಾಬಾದ್‌: ಈಗ ಐಟಿ ಬಿಟಿ ಸೇರಿದಂತೆ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಕಡಿತದ್ದೇ ಮಾತು.  ಹೀಗಿರುವಾಗ ತೆಲಂಗಾಣದ ಐಐಟಿ ಪದವೀಧರನೋರ್ವ ಈ ಉದ್ಯೋಗ ವಜಾಕ್ಕೂ ಮೊದಲೇ ತನ್ನ ವಾರ್ಷಿಕ 28 ಲಕ್ಷ ಸಂಬಳ ಕೆಲಸ ತೊರೆದು  ನಾಟಿ ಕೋಳಿ ಸಾಕಾಣೆಯ ಉದ್ಯಮ ಆರಂಭಿಸಿದ್ದು, ಇದು ಅವರ ಕೈ ಹಿಡಿದಿದೆ. ಅವರೀಗ ಭಾರತ ಮೊದಲ ನಾಟಿ ಕೋಳಿ ಬ್ರಾಂಡ್ ಸ್ಥಾಪಿಸಿ ಯಶಸ್ವಿ ಎನಿಸಿದ್ದು, ಅವರ ಸ್ಟೋರಿ ಇಲ್ಲಿದೆ. 

ಇದೊಂದು ತೆಲಂಗಾಣದ ಐಐಟಿ ಪದವೀಧರನ ಯಶೋಗಾಥೆ, ವಾರ್ಷಿಕ 28 ಲಕ್ಷ ಸಂಬಳದ ಕೆಲಸ ತೊರೆದ ಐಐಟಿ ಪದವೀಧರ ಸಾಯಿಕೇಶ್ ಗೌಡ್, ದೇಶೀಯ ನಾಟಿ ಕೋಳಿ ಸಾಕಾಣೆ ಉದ್ಯಮವನ್ನು ಆರಂಭಿಸಿದರು. ಪ್ರಸ್ತುತ ಅವರು ತೆಲಂಗಾಣದ ಪ್ರತಿಷ್ಠಿತ ನಾಟಿಕೋಳಿ ಸಾಕಾಣೆ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಆಗಿದ್ದಾರೆ.  ಇಂದು ಇವರ ಸಂಸ್ಥೆ ಐದು ವಿಭಿನ್ನ ತಳಿಯ ನಾಟಿ ಕೋಳಿಗಳ ಮಾಂಸಕ್ಕೆ ಪ್ರಸಿದ್ಧವಾದ ಬ್ರಾಂಡ್ ಆಗಿದ್ದಲ್ಲದೇ ಭಾರತದ ಮೊದಲ ನಾಟಿ ಕೋಳಿ ಬ್ರಾಂಡ್ ಎನಿಸಿದೆ.

ಈ ಸಂಸ್ಥೆಯನ್ನು ಸ್ಥಾಪಿಸಿದ ಸಾಯಿಕೇಶ್ ಅವರ ಬಗ್ಗೆ ತಿಳಿಯುವುದಾದರೆ, ಐಐಟಿ ವಾರಣಾಸಿಯಿಂದ  ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮುಗಿಸಿದ್ದಾರೆ.  ಸಾಯಿಕೇಶ್ ಆತ್ಮೀಯರಲ್ಲಿ ಒಬ್ಬರಾದ ಹೇಮಾಂಬರ್ ರೆಡ್ಡಿ (Hemambar Reddy) ಅವರಿಗೆ ನಾಟಿ ಕೋಳಿ ಸಾಕಾಣಿಕೆ ಹಾಗೂ ಮಾಂಸ ಉದ್ಯಮದ  ಬಗ್ಗೆ ತೀವ್ರ ಆಸಕ್ತಿ ಇತ್ತು.  ಹೇಮಾಂಬರ್ ರೆಡ್ಡಿ ಅವರು  ಸಾಯಿಕೇಶ್ ಮತ್ತು ಮೊಹಮ್ಮದ್ ಸಾಮಿ ಉದ್ದೀನ್ (Mohd Sami Uddin) ಜೊತೆ ಈ ವಿಚಾರ ಹಂಚಿಕೊಂಡಾಗ ಅವರೂ ಇದಕ್ಕೆ ಕೈ ಜೋಡಿಸಿದರು. 2009ರಲ್ಲಿ ನಾಟಿ ಕೋಳಿ ಉದ್ಯಮವನ್ನು ಸ್ಥಾಪಿಸಿದರು.

ಪ್ರಾರಂಭದಲ್ಲಿ ಈ ಮೂವರ ಬಗ್ಗೆ ನಕ್ಕವರೇ ಹೆಚ್ಚು.  ಆದರೆ ಜನರ ಮಾತಿಗೆ ಕಿವಿಗೊಡದ ಸಾಯಿಕೇಶ್ ಹಾಗೂ ಸ್ನೇಹಿತರು ಹೈದರಾಬಾದ್‌ನ ಪ್ರಗತಿ ನಗರ (Pragathi Nagar)ಮತ್ತು ಕುಕಟ್‌ಪಲ್ಲಿ (Kukatpally) ಪ್ರದೇಶಗಳಲ್ಲಿ ಭಾರತದ ಮೊದಲ ನಾಟಿ ಕೋಳಿ ಶಾಪ್‌ಗಳನ್ನು ತೆರೆದರು. ಮೊದಲಿಗೆ ತಮ್ಮ ಈ ನಾಟಿ ಕೋಳಿ ಸಾಕಾಣೆ ಕೇಂದ್ರದಲ್ಲಿ 70 ಜನರಿಗೆ ಉದ್ಯೋಗ ನೀಡಿದರು. ನಂತರ ಇವರ ತಂಡವು ದಕ್ಷಿಣದ ರಾಜ್ಯಗಳಾದ್ಯಂತ ಸುಮಾರು 15,000 ಕೋಳಿ ಸಾಕಣೆದಾರರೊಂದಿಗೆ ಸಂಪರ್ಕ ಜಾಲವನ್ನು ನಿರ್ಮಿಸಿದ್ದು,  ಅವರಿಂದ ಉತ್ತಮ ಬೆಲೆಯನ್ನು ನೀಡಿ  ಹಳ್ಳಿಗಾಡಿನ ರೈತರಿಂದ ನಾಟಿ ಕೋಳಿಗಳನ್ನು ಖರೀದಿಸುತ್ತಿದ್ದಾರೆ.

ಅಲ್ಲದೇ ಈ ಸಂಸ್ಥೆ ಕೋಳಿಗಳಿಗೆ ಪೌಷ್ಟಿಕ ಆಹಾರವನ್ನು ನೀಡಲು ರೈತರಿಗೆ ತರಬೇತಿ ನೀಡಲು ಕೂಡ ಶುರು ಮಾಡಿತ್ತು. ಆ ಮೂಲಕ ಮಾಂಸದ ಗುಣಮಟ್ಟದ ಅಭಿವೃದ್ಧಿಗೂ ಸಂಸ್ಥೆ ಶ್ರಮಿಸುತ್ತಿದೆ. ಇತ್ತೀಚೆಗೆ ಈ ತಂಡ ಅತ್ಯುತ್ತಮ ಉದಯೋನ್ಮುಖ ಮಾಂಸ ಬ್ರಾಂಡ್ (meat brand) ಎಂಬ ಹೆಗ್ಗಳಿಕೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.  ಪ್ರಸ್ತುತ ಈ ತಂಡ  ದಕ್ಷಿಣ ಭಾರತದಲ್ಲಿ ಐದು ವಿವಿಧ ತಳಿಯ ನಾಟಿ ಕೋಳಿಗಳ ಮರಾಟವನ್ನು ಮಾಡುತ್ತಿದ್ದಾರೆ. ಟೆಂಡರ್ ತೆಲಂಗಾಣ (Tender Telangana), ಕ್ಲಾಸಿಕ್ ಆಂಧ್ರ(Classic Andhra), ಮೈಸೂರು ಕ್ವೀನ್, ಕಡಕ್ನಾಥ್ (Kadaknath) ಮತ್ತು ವಾರಿಯರ್(Warrior),  ಪಂಡೆಮ್ ಕೋಡಿ (Pandhem Kodi) ಇವಿಷ್ಟು ಇವರು ಮಾರಾಟ ಮಾಡುತ್ತಿರುವ ನಾಟಿ ಕೋಳಿಗಳ ಹೆಸರುಗಳು. 

ಈ ಬಗ್ಗೆ ಮಾಧ್ಯಮಗಳು ಸಾಯಿಕೇಶ್ ಅವರನ್ನು ಮಾತನಾಡಿಸಿದ್ದಾಗ ಅವರು ಹೇಳಿದ್ದಿಷ್ಟು,  ಮರಿಯೊಂದು ದೊಡ್ಡ ಕೋಳಿಯಾಗಿ ಅಭಿವೃದ್ಧಿ ಹೊಂದಲು ಕನಿಷ್ಠ ಆರು ತಿಂಗಳು ತೆಗೆದುಕೊಳ್ಳುತ್ತದೆ ಎಂದರು. ಇವುಗಳನ್ನು ಕಡಿಮೆ ಬಂಡವಾಳದಲ್ಲಿ ಸಾವಯವ ವಿಧಾನದಲ್ಲಿ ಬೆಳೆಯಲಾಗುತ್ತದೆ.  ಇವರ ಬ್ರಾಂಡ್ ಮುಖ್ಯವಾಗಿ ವಾರಿಯರ್, ಕಡಕ್ನಾಥ್ ಮತ್ತು ಆಸಿಲ್ ಎಂಬ ತೆಲಂಗಾಣದಲ್ಲಿರುವ ನಾಟಿ ಕೋಳಿಗಳ  ಮೇಲೆ ಗಮನ ಕೇಂದ್ರೀಕರಿಸಿದ್ದು, ಇದರಿಂದ ಗ್ರಾಹಕರ ಸಂಖ್ಯೆಯಲ್ಲಿ ಬಾರಿ ಹೆಚ್ಚಳವಾಗಿದೆ. ಅಲ್ಲದೇ ತಮ್ಮ ಈ ಬ್ರಾಂಡ್‌ನಡಿ ಹಂತ ಹಂತವಾಗಿ ಕಡಿಮೆ ಅವಧಿಯಲ್ಲಿ 100 ಮಳಿಗೆ ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ  ಎಂದು ಹೇಳುತ್ತಾರೆ ಸಾಯಿಕೇಶ್. 

Follow Us:
Download App:
  • android
  • ios