Asianet Suvarna News Asianet Suvarna News

ಬುಡಕಟ್ಟು ವ್ಯಾಪಾರಸ್ತರಿಗೆ ಶೀಘ್ರ ಆನ್‌ಲೈನ್‌ ವೇದಿಕೆ!

ಬುಡಕಟ್ಟು ವ್ಯಾಪಾರಸ್ತರಿಗೆ ಶೀಘ್ರ ಆನ್‌ಲೈನ್‌ ವೇದಿಕೆ| ಕೇಂದ್ರದ ಸ್ವಾವಲಂಬನೆ ಯೋಜನೆ ಸಾಕಾರಕ್ಕಾಗಿ ಈ ನಿರ್ಧಾರ| ಸ್ವಾತಂತ್ರ್ಯೋತ್ಸವದಂದು ಬುಡಕಟ್ಟು ಇ-ಮಾರ್ಟ್‌ ಅನಾವರಣ| ಪ್ರತಿ ಉತ್ಪನ್ನದಿಂದ ಮಾರಾಟಗಾರನಿಗೆ 70-100 ರು. ಪೂರೈಕೆ

an e marketplace only for tribal sellers coming soon
Author
Bangalore, First Published Jun 29, 2020, 2:35 PM IST

ನವದೆಹಲಿ(ಜೂ.29): ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ ಭಾರತ(ಸ್ವಾವಲಂಬನೆ) ಯೋಜನೆ ಸಾಕಾರಕ್ಕಾಗಿ ಬುಡಕಟ್ಟು ಕುಶಲಕರ್ಮಿಗಳು ಸಿದ್ಧಪಡಿಸುವ ವಸ್ತುಗಳಿಗೂ ಆನ್‌ಲೈನ್‌ ಮಾರುಕಟ್ಟೆಕಲ್ಪಿಸಲು ಭರ್ಜರಿ ಸಿದ್ಧತೆ ನಡೆದಿದೆ. ಇದರನ್ವಯ ಅಮೆಜಾನ್‌, ಫ್ಲಿಪ್‌ಕಾರ್ಟ್‌ ರೀತಿ ಬುಡಕಟ್ಟು ಜನರು ಉತ್ಪಾದಿಸುವ ವಸ್ತುಗಳ ಮಾರಾಟಕ್ಕೆ ದೇಶದ 73ನೇ ಸ್ವಾತಂತ್ರ್ಯೋತ್ಸವದ ದಿನದಂದು ವೆಬ್‌ಸೈಟ್‌ ಅನಾವರಣಗೊಳ್ಳಲಿದೆ.

ಚೀನಾಕ್ಕೆ ಭರ್ಜರಿ ತೆರಿಗೆ: ಸೋಲಾರ್‌ ಉಪಕರಣಗಳ ದರ ಭಾರಿ ಏರಿಕೆ?

ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಬುಡಕಟ್ಟು ಸಹಕಾರ ಮಾರುಕಟ್ಟೆಅಭಿವೃದ್ಧಿ ಫೆಡರೇಷನ್‌(ಟ್ರೈಫೆಡ್‌) ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ ಕೃಷ್ಣ, ‘ಸ್ವಾತಂತ್ರ್ಯ ದಿನಾಚರಣೆ ಆ.15ರಂದು ಭಾರತೀಯ ಬುಡಕಟ್ಟು ಇ-ಮಾರ್ಟ್‌ ಆರಂಭಿಸುತ್ತೇವೆ. ಈ ವೇದಿಕೆಯಲ್ಲಿ ಬುಡಕಟ್ಟು ವರ್ತಕರಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಜು.30ರಿಂದ ಆ.14ರವರೆಗೂ ಬುಡಕಟ್ಟು ಇ-ಮಾರ್ಟ್‌ನ ಪರೀಕ್ಷಾರ್ಥ ನಡೆಯಲಿದೆ’ ಎಂದು ಹೇಳಿದ್ದಾರೆ.

ಈ ವೆಬ್‌ಸೈಟ್‌ ಮೂಲಕ ತಾವು ತಯಾರಿಸಿದ ಉತ್ಪನ್ನಗಳನ್ನು ಹೇಗೆ ಮಾರಬೇಕು, ವೆಬ್‌ಸೈಟ್‌ಗೆ ನೋಂದಣಿ ಮಾಡಿಕೊಳ್ಳುವ ಕುರಿತಾಗಿ ಬುಡಕಟ್ಟು ಉದ್ಯಮಿಗಳಿಗೆ ತರಬೇತಿ ನೀಡಲಾಗುತ್ತದೆ. ಈ ಮೂಲಕ ದೇಶಾದ್ಯಂತ 5 ಲಕ್ಷ ಬುಡಕಟ್ಟು ಕುಶಲಕರ್ಮಿಗಳು, 20 ಸಾವಿರ ವಿಧದ 5 ಲಕ್ಷ ವಿಶಿಷ್ಟಬುಡಕಟ್ಟು ವಸ್ತುಗಳಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವೇದಿಕೆ ಕಲ್ಪಿಸುವುದು ಈ ಯೋಜನೆ ಉದ್ದೇಶವಾಗಿದೆ.

ಚೀನಾದಂತೆ ಭಾರತ ಜಾಗತಿಕ ಉತ್ಪಾದನಾ ಕೇಂದ್ರ ಆಗೋದು ಹೇಗೆ?

ಈ ಬುಡಕಟ್ಟು ಮಂದಿ ತಾವು ತಯಾರಿಸುವ ಅಂಗಿಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ 200 ರು.ಗೆ ಮಾರುತ್ತಾರೆ. ಆದರೆ, ಇದೇ ಅಂಗಿಯ ಬೆಲೆ ದೆಹಲಿಯಲ್ಲಿ 1000 ರು.ಗೆ ಮಾರಾಟ ಮಾಡಬಹುದು. ಇದೇ ಕಾರಣಕ್ಕೆ ಬುಡಕಟ್ಟು ಇ-ಮಾರ್ಟ್‌ ಆರಂಭಿಸಲು ನಿರ್ಧರಿಸಲಾಗಿದೆ. ಈ ಮೂಲಕ ಒಂದು ವಸ್ತುವಿನ ಮಾರಾಟದಿಂದ ಬುಡಕಟ್ಟು ಮಾರಾಟಗಾರನಿಗೆ 70 ರು.ನಿಂದ 100 ರು.ವರೆಗೆ ನೀಡಲಾಗುತ್ತದೆ ಎಂದು ಪ್ರವೀಣ್‌ ಕೃಷ್ಣ ಪ್ರತಿಪಾದಿಸಿದ್ದಾರೆ.

Follow Us:
Download App:
  • android
  • ios