ಗೂಗಲ್ ಉದ್ಯೋಗ ಕಡಿತ ಮಾಡಿದ್ರೂ ಸಿಇಒ ಗಳಿಕೆಗೇನೂ ಧಕ್ಕೆಯಾಗಿಲ್ಲ; 2022ರಲ್ಲಿ ಪಿಚೈ ಪಡೆದ ಹಣವೆಷ್ಟು ಗೊತ್ತಾ?

ಗೂಗಲ್ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಭಾರೀ ಉದ್ಯೋಗ ಕಡಿತ ಮಾಡಿದೆ. ಆದರೆ, ಗೂಗಲ್ ಸಿಇಒ ಸುಂದರ್ ಪಿಚೈ ಗಳಿಕೆಯಲ್ಲಿ ಮಾತ್ರ ಯಾವುದೇ ಇಳಿಕೆಯಾಗಿಲ್ಲ.  2022ನೇ ಸಾಲಿನಲ್ಲಿ ಗೂಗಲ್ ಪಿಚೈ ಅವರಿಗೆ ಪಾವತಿಸಿದ ಮೊತ್ತ ಕೇಳಿದ್ರೆ ಶಾಕ್ ಆಗುತ್ತದೆ. ಗೂಗಲ್ ಪಿಚೈ ಅವರಿಗೆ 2022ನೇ ಸಾಲಿನಲ್ಲಿ 1,854 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ಹಣವನ್ನು ಪರಿಹಾರ ರೂಪದಲ್ಲಿ ಪಾವತಿಸಿದೆ. 

Amid Google layoffs CEO Sundar Pichai took home this whopping amount in 2022 anu

Business Desk:ಇತ್ತೀಚಿನ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಕಡಿತ ಜೋರಾಗಿಯೇ ನಡೆಯುತ್ತಿದೆ.  ಇನ್ನು ಕೆಲವು ಕಂಪನಿಗಳಲ್ಲಿ ಉದ್ಯೋಗಿಗಳ ವೇತನದಲ್ಲಿ ಕಳೆದ ಒಂದೆರಡು ವರ್ಷಗಳಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಗೂಗಲ್  ಕೂಡ ಇದರಿಂದ ಹೊರತಾಗಿಲ್ಲ.ಆದರೂ ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಮಾತ್ರ ದೊಡ್ಡ ಮೊತ್ತದ ಆದಾಯವನ್ನೇ ಪಡೆದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸುಂದರ್ ಪಿಚೈ ವೇತನ ಸ್ಥಿರವಾಗಿಯೇ ಇದೆ. ಅಂದರೆ ಅದರಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಅವರ ವೇತನ ಕಳೆದ ಮೂರು ವರ್ಷಗಳಿಂದ  2 ಮಿಲಿಯನ್ ಡಾಲರ್ ಇದೆ. ಆದರೆ, 2022ರಲ್ಲಿ ಅವರು 226 ಮಿಲಿಯನ್ ಡಾಲರ್ ಅಂದರೆ 1,854 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ಹಣವನ್ನು ಪರಿಹಾರ ರೂಪದಲ್ಲಿ ಪಡೆದಿದ್ದಾರೆ. ಅಮೆರಿಕದ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಕಮೀಷನ್ ಗೆ (ಎಸ್ ಇಸಿ) ಸಲ್ಲಿಸಿರುವ ಮಾಹಿತಿ ಅನ್ವಯ ಪಿಚೈ ಅವರ ಪರಿಹಾರ ಹಣದಲ್ಲಿ 218 ಮಿಲಿಯನ್ ಡಾಲರ್ ಮೊತ್ತದ ಷೇರುಗಳು ಕೂಡ ಸೇರಿವೆ. 

ಆಲ್ಭಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ ಜನವರಿ 20ರಂದು ಜಾಗತಿಕ ಮಟ್ಟದಲ್ಲಿ ಸಂಸ್ಥೆಯ ಒಟ್ಟು 12 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಅಂದರೆ ಸಂಸ್ಥೆಯ ಒಟ್ಟು ಉದ್ಯೋಗಿಗಳ ಶೇ.6ರಷ್ಟು ಜನರನ್ನು ಕೆಲಸದಿಂದ ತೆಗೆಯುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಕಂಪನಿಯ ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಇಂಥದೊಂದು ನಿರ್ಧಾರವನ್ನು ಗೂಗಲ್ ಕೈಗೊಂಡಿತ್ತು. ತನ್ನ ಉದ್ಯೋಗಿಗಳಿಗೆ ಉಚಿತ ಸ್ನ್ಯಾಕ್ಸ್ ಹಾಗೂ ವರ್ಕ್ ಔಟ್ ಕ್ಲಾಸ್ ಗಳನ್ನು ಕಡಿತಗೊಳಿಸೋದು ಸೇರಿದಂತೆ ಗೂಗಲ್ ಅನೇಕ ವೆಚ್ಚ ಕಡಿತದ ಕ್ರಮಗಳನ್ನು ಕೈಗೊಂಡಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇನ್ನು ಲ್ಯಾಪ್ ಟಾಪ್ ಸೇರಿದಂತೆ ಉದ್ಯೋಗಿಗಳ ವೈಯಕ್ತಿಕ ಸಾಧನಗಳ ಮೇಲಿನ ವೆಚ್ಚವನ್ನು ಕೂಡ ಗೂಗಲ್ ಕಡಿತಗೊಳಿಸಿತ್ತು. ಭಾರತದಲ್ಲಿ ಕೂಡ ಗೂಗಲ್ 400 ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಕೆಲವು ಉದ್ಯೋಗಿಗಳು ಈ ಕುರಿತು ಲಿಂಕ್ಡ್ ಇನ್ ನಲ್ಲಿ ಅಭಿಪ್ರಾಯ ಕೂಡ ಹಂಚಿಕೊಂಡಿದ್ದರು. 

ಟಿಡಿಎಸ್ ವಿನಾಯ್ತಿಗೆ WhatsAppನಲ್ಲಿ ಫಾರ್ಮ್ 15G/H ಸಲ್ಲಿಕೆಗೆ ಅವಕಾಶ; ಆದರೆ,ಈ ಬ್ಯಾಂಕ್ ಗ್ರಾಹಕರಿಗೆ ಮಾತ್ರ!

ಪಿಚೈ ಬಳಿ ಎಷ್ಟು ಸಂಪತ್ತಿದೆ?
ವರದಿಗಳ ಪ್ರಕಾರ ಸುಂದರ್ ಪಿಚೈ ಅವರ ನಿವ್ವಳ ಸಂಪತ್ತು ಅಂದಾಜು 1.31 ಬಿಲಿಯನ್ ಅಥವಾ  10,810 ಕೋಟಿ ರೂ.

ಐಷಾರಾಮಿ ಬಂಗಲೆ
ಸುಂದರ್ ಪಿಚೈ ಕ್ಯಾಲಿಫೋರ್ನಿಯಾದಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಈ ಬಂಗಲೆಯನ್ನು ಪಿಚೈ 40 ಮಿಲಿಯನ್ ಡಾಲರ್ ಗೆ ಖರೀದಿಸಿದ್ದರು. ಆದರೆ, ಕೆಲವೇ ವರ್ಷಗಳಲ್ಲಿ ಈ ಬಂಗಲೆಯ ಮೌಲ್ಯದಲ್ಲಿ ಭಾರೀ ಏರಿಕೆಯಾಗಿದೆ. ಪಿಚೈ ಈ ಮನೆಯ ಒಳಾಂಗಣ ವಿನ್ಯಾಸಕ್ಕೆ 49 ಕೋಟಿ ರೂ. ವ್ಯಯಿಸಿದ್ದಾರೆ. ಈ ಮನೆಯಲ್ಲಿ ಇನ್ ಫಿನಿಟಿ ಫೂಲ್ ಸೇರಿದಂತೆ ಅನೇಕ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. 

ವೃತ್ತಿ ಜೀವನ
2015ರಲ್ಲಿ ಸುಂದರ್ ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕ ಮಾಡಲಾಗಿತ್ತು. 2019 ರಲ್ಲಿ ಅವರು ಅಲ್ಫಾಬೆಟ್ ಇಂಕ್ ಸಿಇಒ ಆಗಿ ನೇಮಕಗೊಂಡರು. ಅವರ ನಾಯಕತ್ವದಲ್ಲಿ ಗೂಗಲ್ ತನ್ನ ಉತ್ಪನ್ನಗಳು ಹಾಗೂ ಸೇವೆಗಳನ್ನು ಗಣನೀಯ ಪ್ರಮಾಣದಲ್ಲಿ ವಿಸ್ತರಿಸಿಕೊಂಡಿದೆ. 

SBI ಡೆಬಿಟ್ ಕಾರ್ಡ್ ಕಳೆದು ಹೋಗಿದೆಯಾ? ನೆಟ್ ಬ್ಯಾಂಕಿಂಗ್‌ ಬಳಸಿ ಬ್ಲಾಕ್ ಮಾಡೋದು ಹೇಗೆ?

ಸಾಮಾನ್ಯ ಕುಟುಂಬದ ಹಿನ್ನೆಲೆ
1972ರ ಜೂನ್ 10ರಂದು ತಮಿಳುನಾಡಿನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸುಂದರ್ ಪಿಚೈ ತಮ್ಮ ಸ್ವಂತ ಪರಿಶ್ರಮದಿಂದ ಇಂದು ಓರ್ವ ಅಂತಾರಾಷ್ಟ್ರೀಯ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದ್ದಾರೆ. ಸುಂದರ್ ಪಿಚೈ ತಂದೆ ಬ್ರಿಟಿಷ್ ಕಂಪನಿ ಜಿಇಸಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹತ್ತನೇ ತರಗತಿವರೆಗೆ ಚೆನ್ನೈನಲ್ಲೇ ಕಲಿತ ಸುಂದರ್ ಪಿಚೈ ಬಳಿಕ ಐಐಟಿ ಖಡಗ್ಪುರದಲ್ಲಿ ಮೆಟಲರ್ಜಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿದರು. ಅತ್ಯಂತ ಮೇಧಾವಿಯಾಗಿರುವ ಪಿಚೈ ಯಾವತ್ತೂ ತನ್ನ ಬ್ಯಾಚ್‌ನ ಟಾಪರ್ ಆಗಿರುತ್ತಿದ್ದರು. ಐಐಟಿಯಲ್ಲಿ ಶಿಕ್ಷಣ ಪೂರೈಸಿದ ಪಿಚೈ, ಮುಂದಿನ ಶಿಕ್ಷಣಕ್ಕಾಗಿ ಅಮೆರಿಕದ ಸ್ಯಾನ್‌ಪೋರ್ಡ್‌ ವಿಶ್ವವಿದ್ಯಾಲಯಕ್ಕೆ ಸೇರಿದರು. 

Latest Videos
Follow Us:
Download App:
  • android
  • ios