ಕೋಟಿ ಗಳಿಸಿದ್ರೂ ಈತ ಜಿಪುಣ, ದುಡ್ಡಿಲ್ಲ ಎನ್ನೋರು ಈ ಸೇವಿಂಗ್ಸ್ ಟಿಪ್ಸ್ ಫಾಲೋ ಮಾಡ್ಬಹುದು!
ಅಮೆರಿಕ ಮೂಲದ 29 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ವಾರ್ಷಿಕ 1.25 ಕೋಟಿ ರೂಪಾಯಿ ಸಂಪಾದನೆ ಮಾಡ್ತಿದ್ದಾನೆ. ಇಷ್ಟರಲ್ಲೇ 3 ಕೋಟಿಗೂ ಹೆಚ್ಚು ಉಳಿತಾಯ ಮಾಡಿರುವ ಈತನಿಂದ ಶ್ರೀಮಂತರಾಗೋದು ಹೇಗೆ ಅನ್ನೋದನ್ನು ಕಲಿರಿ.
ಕೋಟಿ ಕೋಟಿ ಸಂಬಳ ಬರುತ್ತೆ ಅಂದಾಗ ಕೈ ನಿಲ್ಲೋದಿಲ್ಲ. ಒಂದಾದ್ಮೇಲೆ ಒಂದು ದುಬಾರಿ ವಸ್ತುಗಳನ್ನು ಖರೀದಿಸಿ, ಹಣ ಹಾಳು ಮಾಡುವ ಯುವಕರ ಸಂಖ್ಯೆ ಹೆಚ್ಚಿದೆ. ಆದ್ರೆ ಈ ಸಾಫ್ಟ್ವೇರ್ ಇಂಜಿನಿಯರ್ ಉಳಿತಾಯ ಮಾಡೋದ್ರಲ್ಲಿ ಮುಂದಿದ್ದಾನೆ. ವರ್ಷಕ್ಕೆ ಒಂದೂವರೆ ಕೋಟಿ ಸಂಪಾದಿಸಿದ್ದರೂ ಹಣ ಖರ್ಚು ಮಾಡೋದ್ರಲ್ಲಿ ಬಹಳ ಜಿಪುಣ. ಹಾಗಾಗಿಯೇ ಆತ 35ನೇ ವರ್ಷಕ್ಕೆ ನಿವೃತ್ತಿ ಪಡೆಯುವ ಪ್ಲಾನ್‌ನಲ್ಲಿದ್ದು, ಅಳೆದು ತೂಗಿ ಹಣ ಖರ್ಚು ಮಾಡ್ತಾನೆ. ಆತನ ರೂಲ್ಸ್ ನೀವೂ ಫಾಲೋ ಮಾಡಿದ್ರೆ ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಗಳಾಗ್ತೀರಿ.
ಈತನ ಹೆಸರು ಟ್ಯಾನರ್ ಫಾರ್ಲ್. ಅಮೆರಿಕ (America) ನಿವಾಸಿ. ತನ್ನ 29ನೇ ವಯಸ್ಸಿನಲ್ಲೇ 135,000 ಅಂದರೆ ಸುಮಾರು 1.25 ಕೋಟಿ ರೂಪಾಯಿ ಸಂಪಾದನೆ ಮಾಡ್ತಾನೆ. ಟ್ಯಾನರ್ ಫಾರ್ಲ್ ಮತ್ತು ಪತ್ನಿ ಇಸಾಬೆಲ್ ಈಗಾಗಲೇ 380,000 ಡಾಲರ್ (Dollar) ಅಂದರೆ 3 ಕೋಟಿ ರೂಪಾಯಿ ಉಳಿತಾಯ ಮಾಡಿದ್ದಾರೆ. ಟ್ಯಾನರ್ ಫಾರ್ಲ್ ಆರು ವರ್ಷದಲ್ಲಿ 625,000 ಡಾಲರ್ ಅಂದ್ರೆ 5.23 ಕೋಟಿ ಉಳಿತಾಯ (Savings) ಮಾಡುವ ಪ್ಲಾನ್ ಇದೆ.
300 ಕೋಟಿ ರೂ ಜೆಟ್, 40 ಕೋಟಿ ಮನೆ; ದಿಗ್ಗಜರಿಂದ ಅನಂತ್ ರಾಧಿಕಾಗೆ ಸಿಕ್ಕಿದೆ ಭರ್ಜರಿ ಗಿಫ್ಟ್!
ಉಳಿತಾಯಕ್ಕೆ ಈ ಪ್ಲಾನ್ : ಸಣ್ಣ ವಯಸ್ಸಿನಲ್ಲೇ ಉಳಿತಾಯಕ್ಕೆ ಮುಂದಾಗಿರುವ ದಂಪತಿ ಉಳಿತಾಯಕ್ಕೆ ವಿಚಿತ್ರ ವಿಧಾನ ಅಳವಡಿಸಿಕೊಂಡಿದ್ದಾರೆ. ಅವರು ಅನವಶ್ಯಕವಾಗಿ ಖರ್ಚು ಮಾಡೋದಿಲ್ಲ. ಜನರು ತಮ್ಮ ಬಳಿ ಹಣವಿದ್ದಾಗ ಅದನ್ನು ಖರ್ಚು ಮಾಡಲು ಚಿಂತಿಸುವುದಿಲ್ಲ. ಆದ್ರೆ ನನಗೆ ಉಲ್ಟಾ. ನನ್ನ ಬಳಿ ಹಣವಿದ್ರೂ ನನಗೆ ಖರ್ಚು ಮಾಡಲು ಇಷ್ಟವಿಲ್ಲ ಎಂದು ಟ್ಯಾನರ್ ಹೇಳಿದ್ದಾನೆ.
ಸೆಕೆಂಡ್ ಹ್ಯಾಂಡ್ ಸ್ನೀಕರ್ಸ್ – ಉಚಿತ ಸೋಫಾ : ಟ್ಯಾನರ್ ಕೋಟಿಯಲ್ಲಿ ಸಂಪಾದನೆ ಮಾಡ್ತಾ ಇದ್ರೂ ಮನೆಗೆ ಅಗತ್ಯವಿರುವ ಸೋಫಾ, ಪೀಠೋಪಕರಣಗಳನ್ನು ಹಣಕೊಟ್ಟು ಖರೀದಿ ಮಾಡಿಲ್ಲ. ಕ್ರೇಗ್ಸ್ ಲಿಸ್ಟ್ ಹೆಸರಿನ ವೆಬ್ ಸೈಟ್ ನಲ್ಲಿ ಉಚಿತವಾಗಿ ಖರೀದಿ ಮಾಡಿದ್ದಾನೆ. ಇನ್ನು ಟ್ಯಾನರ್ ಫಾರ್ಲ್, ಸ್ನೀಕರ್ಸ್ ಗೆ ಕೂಡ ಹೆಚ್ಚು ಹಣ ನೀಡೋದಿಲ್ಲ. ಪ್ರತಿ ವರ್ಷ ಟ್ಯಾನರ್ ಫಾರ್ಲ್, ಸೆಕೆಂಡ್ ಹ್ಯಾಂಡ್ ಸ್ನೀಕರ್ಸ್ ಖರೀದಿ ಮಾಡುತ್ತಾನೆ. ಅರ್ಧ ಸಂಬಳವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಟ್ಯಾನರ್, ಉಳಿತಾಯ ಖಾತೆಯಲ್ಲಿ ಸ್ವಲ್ಪ ಹಣವಿಟ್ಟಿದ್ದಾನೆ. ಕೇವಲ 26,000 ಡಾಲರ್ ಹಣವನ್ನು ಉಳಿತಾಯ ಖಾತೆಯಲ್ಲಿ ಇಟ್ಟಿರುವ ಅವನು, ಅದನ್ನು ಅತ್ಯಗತ್ಯ ಬಿದ್ದಾಗ ಮಾತ್ರ ಬಳಸಿಕೊಳ್ತಾನೆ. ಇದೇ ಕಾರಣಕ್ಕೆ ಅವನು 75,000 ಡಾಲರ್ ಗಿಂತ ಹೆಚ್ಚು ಹಣವನ್ನು ಉಳಿಸಿದ್ದಾನೆ.
ಉಳಿತಾಯದ ಬಗ್ಗೆ ಟಿಪ್ಸ್ : ಟ್ಯಾನರ್ ಫಾರ್ಲ್, ಬಾಲ್ಯದಿಂದಲೂ ತಾನು ಹೀಗೆಯೇ ಎಂದು ಹೇಳಿದ್ದಾನೆ. ಎಲ್ಲವೂ ನನಗೆ ಉಡುಗೊರೆ ರೂಪದಲ್ಲಿ ಕಾಣುತ್ತದೆ ಎಂದು ಟ್ಯಾನರ್ ಫಾರ್ಲ್ ಹೇಳಿದ್ದಾನೆ. ಯಾವುದೇ ದೊಡ್ಡ ಉಡುಗೊರೆ ಹಿಂದೆ ಓಡಬೇಡಿ ಎಂದು ಟ್ಯಾನರ್ ಫಾರ್ಲ್ ಸಲಹೆ ನೀಡಿದ್ದಾನೆ. ನಾವು ಏನನ್ನಾದರೂ ಬಯಸಿದಾಗ, ನಾವು ಅದನ್ನು ಖರೀದಿಸಲು ನಮ್ಮ ಸ್ವಂತ ಹಣವನ್ನು ಖರ್ಚು ಮಾಡಬೇಕು. ನಮ್ಮ ಜನ್ಮದಿನ ಅಥವಾ ಕ್ರಿಸ್ಮಸ್ ವರೆಗೆ ಕಾಯಬೇಕು ಎಂದು ಟ್ಯಾನರ್ ಫಾರ್ಲ್ ಹೇಳಿದ್ದಾನೆ. ಇವರು 2017ರಲ್ಲಿ ಮನೆಯೊಂದನ್ನು ಖರೀದಿ ಮಾಡಿದ್ದರು. ಹಣದ ಸಮಸ್ಯೆ ಆಗಿದ್ದರಿಂದ ಕೆಳ ಮನೆಯನ್ನು ಬಾಡಿಗೆ ನೀಡಿದ್ವಿ. ನಂತ್ರ ಮತ್ತೊಂದು ಮನೆಯನ್ನು ಖರೀದಿ ಮಾಡಿ ಅದನ್ನು ಬಾಡಿಗೆಗೆ ನೀಡಿದ್ದಾರೆ.
ಅಂಬಾನಿ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿದ ಛಾಯಾಗ್ರಾಹಕ ಇವರೇ, ಸಂಭಾವನೆ ಪಡೆದಿದ್ದೆಷ್ಟು?
ಟ್ಯಾನರ್ ಫಾರ್ಲ್ ಪ್ರಕಾರ, ಜನರು ತಮ್ಮ ಬಳಿ ಹಣವಿಲ್ಲ ಎಂದು ಭಾವಿಸ್ತಾರೆ. ಇದೇ ಅವರ ಆಲೋಚನೆ ವಿನಾಶಕ್ಕೆ ಕಾರಣವಾಗುತ್ತದೆ. ಹಣ ಸ್ವಲ್ಪ ಕಡಿಮೆ ಇದ್ರೂ ಜಾಸ್ತಿ ಇದ್ರೂ ಉಳಿತಾಯ ಮುಖ್ಯ. ಹಣ ಸ್ವಲ್ಪವೇ ಇದ್ರೂ ಅದನ್ನು ಸರಿಯಾಗಿ ಬಳಸಬೇಕು. ಇಂದಿನಿಂದಲೇ ಉಳಿತಾಯ ಮಾಡಬೇಕು.