ನ್ಯೂಯಾರ್ಕ್(ಅ. 14)  ಜಗತ್ತಿನಲ್ಲಿಯೇ ಹೆಸರು  ಮಾಡಿರುವ ಎಎಂಸಿ ಎಂಟರ್ ಟೈನ್ ಮೆಂಟ್ ಎಚ್ಚರಿಕೆಯೊಂದನ್ನು  ನೀಡಿದೆ.  ಜನರ ಬಳಿ ಹಣದ ವಹಿವಾಟು ಕಡಿಮೆಯಾಗಿದ್ದು ಮನರಂಜನಾ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆ ನೀಡಿದೆ.

ಕೊರೋನಾ ಪರಿಣಾಮ ಎಎಂಸಿಯ ಷೇರುಗಳು ಕುಸಿದಿವೆ.   ಮನರಂಜನಾ ಕ್ಷೇತ್ರದ ಮೇಲೆ ಮುಂದಿನ ವರ್ಷವೂ ಜನರ ನಿರಾಸಕ್ತಿ ಮುಂದುವರಿಯಲಿದ್ದು ಪರಿಣಾಮ ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದಿದೆ.

ಚೀನಾ ಆರ್ಥಿಕತೆ ಹಿಂದಿಕ್ಕಲಿದೆ ಭಾರತ

ದಿವಾಳಿತನನವೇ ಪರಿಹಾರ ಎಂಬ ಸ್ಥಿತಿಗೆ ಬಂದು ನಿಂತಿದ್ದೇವೆ ಎಂದು ಸಂದರ್ಶನವೊಂದರಲ್ಲಿ  ಕ್ರೆಡಿಟ್ ಸೈಟ್ ಅನಾಲಿಸ್ಟ್ ಮಾಟ್ ಜ್ಲೋಟೋ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇದು  ಗೋಡೆ ಮೇಲಿನ ಬರಹದಂತೆ ಮುಂದಿನ ದಿನಗಳಲ್ಲಿ ಗೊತ್ತಾಗುವುದು ಎಂದಿದ್ದರು.

ವಾಣಿಜ್ಯ ವ್ಯವಹಾರದಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಒಂದು ವರ್ಷದ ಅವಧಿಯಲ್ಲಿ ಶೇ.  85 ರಷ್ಟು ಕುಸಿದಿದೆ. ಕರೋನಾ ವೈರಸ್ ಎಎಮ್‌ಸಿಯ ಮೇಲೆ ಪರಿಣಾಮ ಬೀರಿದೆ.  ಜನ ಸಿನಿಮಾ ವೀಕ್ಷಣೆಯನ್ನು ನಿಲ್ಲಿಸಿದ್ದಾರೆ.  ಚಲನಚಿತ್ರ ಪ್ರೇಕ್ಷಕರ ಸಂಖ್ಯೆ ಶೇ.  81 ಕುಸಿತ ಕಂಡಿದೆ ಎಂದು ಅಂಕಿ ಅಂಶವನ್ನು ಕಂಪನಿ ನೀಡಿದೆ. 

ಮುಗ್ಗರಿಸಿದ ಚಿನ್ನ; ಹೊಸ ದರ ಕಣ್ಣು ತುಂಬಿಕೊಳ್ಳಿ

ಕಂಪನಿ ಸಹ ದಿವಾಳಿಯ ಹಾದಿಗೆ ತೆರಳುತ್ತಿದ್ದು ಪರ್ಯಾಯ ಕ್ರಮಗಳ ಆಲೋಚನೆ ಮಾಡಿದೆ. ಜಾಯಿಂಟ್ ವೆಂಚರ್ಸ್ ಗಳ ಮಾರಾಟಕ್ಕೂ ಮುಂದಾಗಿದೆ. ಆದರೆ ಇದು ಸುಲಭದಲ್ಲಿ ಸಾಧ್ಯವಿಲ್ಲ. ಅನೇಕ ಅಡ್ಡಿಗಳು ಎದುರಾಗುತ್ತವೆ. ಸಾಲ ಮರುಪಾವತಿ ಮತ್ತು ಥಿಯೇಟರ್  ಬಾಡಿಗೆ ನೀಡಿರುವವರ ಜತೆಯೂ ಮಾತುಕತೆ ನಡೆಸಿದೆ.

ಒಂದು ಕಡೆ ತನ್ನ ಷೇರಿನ ಮುಖಬೆಲೆ ಕುಸಿತ, ಇನ್ನೊಂದು ಕಡೆ ಥಿಯೇಟರ್ ಬಾಡಿಗೆ, ಸಾಲ, ಪ್ರೇಕ್ಷಕರು ಸಿನಿಮಾ ಮಂದಿರಕ್ಕೆ ಬಾರದಿರುವುದು ಹೀಗೆ ಹತ್ತು ಹಲವು ಅಂಶಗಳು ಕಂಪನಿಯನ್ನು ದಿವಾಳಿ ಹಂತಕ್ಕೆ ತಂದಿದ್ದು ಹಣದ ವಹಿವಾಟಿಗೆ ಪರ್ಯಾಯ ಮಾರ್ಗ ಹುಡುಕಲಾಗುತ್ತಿದೆ.