ಶ್ರಮಪಟ್ಟಲ್ಲಿ ಅಕ್ಕೆ ತಕ್ಕ ಫಲ ಸಿಗೋದು ಗ್ಯಾರಂಟಿ. ಬಡ ಕುಟುಂಬದಲ್ಲಿ ಹುಟ್ಟಿ, ಹತ್ತ – ಹದಿನೈದು ರೂಪಾಯಿಗೆ ಕಷ್ಟಪಡ್ತಿದ್ದ ವ್ಯಕ್ತಿ ಈಗ ಕೋಟ್ಯಾಧಿಪತಿ. ಅಂಬಾನಿ ಫ್ಯಾಮಿಲಿ ಫಿಟ್ನೆಸ್ ಟ್ರೈನರ್ ಕಥೆ ಇಲ್ಲಿದೆ.
ಪ್ರಾಮಾಣಿಕವಾಗಿ ಕೆಲ್ಸ ಮಾಡಿದ್ರೆ ಒಂದಲ್ಲ ಒಂದು ದಿನ ಪ್ರತಿಫಲ ಸಿಕ್ಕೇ ಸಿಗುತ್ತೆ. ಎಲ್ಲೋ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಕೋಟ್ಯಾಧಿಪತಿಯಾದ ಸಾಕಷ್ಟು ಉದಾಹರಣೆ ಇದೆ. ಈ ವ್ಯಕ್ತಿ ಕೂಡ ಸೆಕ್ಯೂರಿಟಿ ಗಾರ್ಡ್ (Security Guard) ಆಗಿ ಕೆಲ್ಸ ಮಾಡ್ತಿದ್ದರು. ಆಗ ಒಂದು ಚಪ್ಪಲಿ ಖರೀದಿ ಮಾಡುವಷ್ಟು ಹಣ ಇರ್ಲಿಲ್ಲ. ಈಗ ಕೋಟಿ ಕೋಟಿ ಸಂಪಾದನೆ. ಸೆಲೆಬ್ರಿಟಿಗಳು, ಸಿನಿಮಾ ಕಲಾವಿದರ ಜೊತೆ ಭಾರತದ ಶ್ರೀಮಂತ ಉದ್ಯಮಿ ಅಂಬಾನಿಯವರ ಫ್ಯಾಮಿಟಿ ಫಿಟ್ನೆಸ್ ಟ್ರೈನರ್ ಆಗಿ ಕೆಲ್ಸ ಮಾಡ್ತಿದ್ದಾರೆ. ಅವರ್ಯಾರು, ಅವರ ಸಾಧನೆ ಏನು ಗೊತ್ತಾ?
ಜೀವನದಲ್ಲಿ ಸಕ್ಸಸ್ ಕಂಡ ವಿನೋದ್ ಚನ್ನ
ವಿನೋದ್ ಚನ್ನ (Vinod Channa), ಬಾಲಿವುಟ್ ನಟ ಜಾನ್ ಅಬ್ರಹಾಂ (John Abraham) ಅವರ ಫಿಟ್ನೆಸ್ ಟ್ರೈನರ್. ಅಂಬಾನಿ (Ambani) ಕುಟುಂಬಕ್ಕೂ ಅವರೇ ಫಿಟ್ನೆಸ್ ಟ್ರೈನರ್ ಆಗಿದ್ದಾರೆ. ದಿನಕ್ಕೆ ಅವರ ಸಂಪಾದನೆ ಈಗ 3 ರಿಂದ 5 ಲಕ್ಷ ರೂಪಾಯಿ. ತುಂಬಾ ಬಡತನದಲ್ಲಿದ್ದ ವಿನೋದ್ ಚನ್ನ ಈಗ ಮುಂಬೈನಲ್ಲಿ 15 ಕೋಟಿ ರೂಪಾಯಿ ಮೌಲ್ಯದ ಜಿಮ್ ಮತ್ತು ಸುಮಾರು 5-6 ಮನೆಗಳನ್ನು ಹೊಂದಿದ್ದಾರೆ.
ಪ್ರಸ್ತುತ ಅಂಬಾನಿ ಕುಟುಂಬಕ್ಕೆ ತರಬೇತಿ ನೀಡುತ್ತಿರುವ ಪ್ರಸಿದ್ಧ ಫಿಟ್ನೆಸ್ ತರಬೇತುದಾರ ವಿನೋದ್ ಚನ್ನ ಇತ್ತೀಚೆಗೆ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು. ವಿನೋದ್, ಜಾನ್ ಅಬ್ರಹಾಂ, ಅಭಿಷೇಕ್ ಬಚ್ಚನ್, ಅಮಿತಾಬ್ ಬಚ್ಚನ್ ಮತ್ತು ಇತರ ಅನೇಕ ದೊಡ್ಡ ಸ್ಟಾರ್ ಕಲಾವಿದರಿಗೆ ತರಬೇತಿ ನೀಡಿದ್ದಾರೆ. ವಿನೋದ್ ಕಾರ್ಮಿಕ ವರ್ಗದ ಕುಟುಂಬದಿಂದ ಬಂದವರು. ಸೆಕ್ಯೂರಿಟಿ ಗಾರ್ಡ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ದೇಹದಾರ್ಢ್ಯದಲ್ಲಿ ಅವರಿಗಿದ್ದ ಆಸಕ್ತಿ ಅವರನ್ನು ಫಿಟ್ನೆಸ್ ತರಬೇತಿಯತ್ತ ಕೊಂಡೊಯ್ದಿತು. ಕೆಲ ವರ್ಷಗಳ ಕಠಿಣ ಪರಿಶ್ರಮದ ನಂತ್ರ ಅವರು ಅಂಬಾನಿ, ಬಿರ್ಲಾ ಸೇರಿದಂತೆ ಅನೇಕ ಸೆಲೆಬ್ರಿಟಿ ಕುಟುಂಬಗಳಿಗೆ ಫಿಟ್ನೆಸ್ ತರಬೇತಿ ನೀಡಲು ಶುರು ಮಾಡಿದ್ದರು.
ಮಗಳ ಮದುವೆಗೆ 25 ಲಕ್ಷ ಮೌಲ್ಯದ ಬೆಳ್ಳಿಯ ಆಮಂತ್ರಣ ಸಿದ್ಧಪಡಿಸಿದ ಉದ್ಯಮಿ: ಏನಿದ
ವಿನೋದ್, ಮುಂಬೈ ಜಿಮ್ ಒಂದರಲ್ಲಿ ಫಿಟ್ನೆಸ್ ಟ್ರೈನರ್ ಆಗಿ ಕೆಲಸ ಮಾಡಿದ್ದರು. 10 -15 ವರ್ಷಗಳ ಕಾಲ ಅವರು ದೇಹದಾರ್ಢ್ಯವನ್ನು ಅಭ್ಯಾಸ ಮಾಡಿದ್ದರು. ಅದಾದ್ಮೇಲೆ ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಮುಂಬೈ ಬಿಟ್ಟು ಬಾಂದ್ರಾಕ್ಕೆ ತೆರಳಿದ್ದರು. ಆರಂಭದಲ್ಲಿ ಜಿಮ್ ಗೆ ಬಂದವರಿಗೆ ತರಬೇತಿ ನೀಡೋದು ಬಿಟ್ಟು ವಿಶೇಷ ಕೆಲ್ಸ ಇರಲಿಲ್ಲ. ರಿತೇಶ್ ದೇಶಮುಖ್ ಅವರ ಸಂಬಂಧಿಯೊಬ್ಬರು ನನ್ನನ್ನು ನೋಡಿ ಶಿಫಾರಸು ಮಾಡಿದ್ದರು. ಆನಂತರ ವಿನೋದ್ ಲಕ್ ಬದಲಾಯ್ತು. ವಿನೋದ್ ಅನೇಕ ಸೆಲೆಬ್ರಿಟಿಗಳಿಗೆ ಟ್ರೈನರ್ ಆದ್ರು. ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ಅವರು ಒಂದು ಗಂಟೆಗೆ 25 ಸಾವಿರ ಚಾರ್ಜ್ ಮಾಡ್ತಿದ್ದರು. ಅನನ್ಯ ಬಿರ್ಲಾ ಕೂಡ ಅವರನ್ನು ಸಂಪರ್ಕಿಸಿ, ದುಬಾರಿ ಹಣ ನೀಡಲು ಸಿದ್ಧರಾಗಿದ್ದರು.
ಮುಂದಿನ 4 ದಿನ ಬ್ಯಾಂಕ್ ಬಂದ್! ಸಿಬ್ಬಂದಿಗಳ ಮುಷ್ಕರ ಹಣಕಾಸು ವ್ಯವಹಾರ ಸ್ಥಗಿತ!
ವಿನೋದ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ದಿನಕ್ಕೆ 16 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಸಂದರ್ಶನದಲ್ಲಿ ಮಾತನಾಡಿದ ವಿನೋದ್, ನಾನು 5-6 ಮನೆಗಳನ್ನು ಖರೀದಿಸಿದ್ದೇನೆ. ನಾನು 15 ಕೋಟಿ ರೂಪಾಯಿಗಳಿಗೆ ಜಿಮ್ ಖರೀದಿಸಿದೆ ಎಂದಿದ್ದಾರೆ. ವಿನೋದ್ ಇಶಾ ಅಂಬಾನಿ, ಅನಂತ್ ಅಂಬಾನಿ ಮತ್ತು ಆಕಾಶ್ ಅಂಬಾನಿ ಅವರಿಗೂ ತರಬೇತಿ ನೀಡಿದ್ದಾರೆ. ಅನಂತ್ ಅಂಬಾನಿ 18 ತಿಂಗಳಲ್ಲಿ108 ಕೆಜಿ ತೂಕ ಇಳಿಸಿಕೊಂಡ ಸಂದರ್ಭದಲ್ಲಿ ವಿನೋದ್ ಕೂಡ ಟೀಂನಲ್ಲಿದ್ದರು.


