ಅಂತಾರಾಷ್ಟ್ರೀಯ ಮಹಿಳಾ ದಿನ 2026ರ ಅಂಗವಾಗಿ ಅಮೆಜಾನ್ ಇಂಡಿಯಾ ಇಂದು ಆರ್ಮಿ ವಿಮೆನ್ಸ್ ವೆಲ್ಫೇರ್ ಅಸೋಸಿಯೇಷನ್ (ಎ.ಡಬ್ಲ್ಯೂ.ಡಬ್ಲ್ಯೂ.ಎ) ಜೊತೆಯಲ್ಲಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿದೆ.

ಬೆಂಗಳೂರು (ಮಾ.06): ಅಂತಾರಾಷ್ಟ್ರೀಯ ಮಹಿಳಾ ದಿನ 2026ರ ಅಂಗವಾಗಿ ಅಮೆಜಾನ್ ಇಂಡಿಯಾ ಇಂದು ಆರ್ಮಿ ವಿಮೆನ್ಸ್ ವೆಲ್ಫೇರ್ ಅಸೋಸಿಯೇಷನ್ (ಎ.ಡಬ್ಲ್ಯೂ.ಡಬ್ಲ್ಯೂ.ಎ) ಜೊತೆಯಲ್ಲಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿದ್ದು ಸೇನಾ ಕುಟುಂಬಗಳ ಮಹಿಳೆಯರಿಗೆ ಉದ್ಯಮಶೀಲತೆಯ ಅವಕಾಶಗಳನ್ನು ವಿಸ್ತರಿಸಲಿದೆ. ಈ ಒಡಂಬಡಿಕೆಯನ್ನು ಅಮೆಜಾನ್ ನ ವಾರ್ಷಿಕ ಎಲಿವೇಟ್ ಹರ್(ElevateHER) ಕಾರ್ಯಕ್ರಮದಲ್ಲಿ ಪ್ರಕಟಿಸಲಾಗಿದ್ದು ಇದು ಸೇನಾ ಸಿಬ್ಬಂದಿ, ಸೇನಾ ನಿವೃತ್ತರ ಪತ್ನಿಯರು, ವೀರ ನಾರಿಯರು ಮತ್ತು ವಿಧವೆಯರನ್ನು ಒಳಗೊಂಡು ನೂರಾರು ನೋಂದಾಯಿತ ಎ.ಡಬ್ಲ್ಯೂ.ಡಬ್ಲ್ಯೂ.ಎ ಮಹಿಳಾ ಉದ್ಯಮಿಗಳಿಗೆ 2029ರ ವೇಳೆಗೆ ಅವರದೇ ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ವಿಸ್ತರಿಸಲು ಅವಕಾಶ ಕಲ್ಪಿಸುತ್ತದೆ.

ಈ ಒಡಂಬಡಿಕೆಯ ಭಾಗವಾಗಿ ಅಮೆಜಾನ್ ಇ-ಕಾಮರ್ಸ್ ಮತ್ತು ಮಾರುಕಟ್ಟೆಯ ಅತ್ಯುತ್ತಮ ರೂಢಿಗಳಿಗೆ ರಚನಾತ್ಮಕ ಸೇರ್ಪಡೆ ಮತ್ತು ತರಬೇತಿಯ ಅವಕಾಶ ಕಲ್ಪಿಸುತ್ತದೆ. ಎ.ಡಬ್ಲ್ಯೂ.ಡಬ್ಲ್ಯೂ.ಎ ಉದ್ಯಮಿಗಳು ಅಮೆಜಾನ್ ಫುಲ್ಫಿಲ್ಮೆಂಟ್ ಮತ್ತು ಲಾಜಿಸ್ಟಿಕ್ಸ್ ಜಾಲಕ್ಕೂ ಪ್ರವೇಶ ಪಡೆಯಲಿದ್ದು ಅದರೊಂದಿಗೆ ಅಮೆಜಾನ್ ಸಹೇಲಿ ಸ್ಟೋರ್ ಫ್ರಂಟ್ ಮೂಲಕ ಅವರ ಉತ್ಪನ್ನಗಳು ಎದ್ದು ಕಾಣುವಂತೆ ಮಾಡುತ್ತದೆ. ಒಟ್ಟಿಗೆ ಈ ಬೆಂಬಲವು ಸೇನಾ ಕುಟುಂಬಗಳ ಮಹಿಳೆಯರಿಗೆ ಭಾರತದಾದ್ಯಂತ ಗ್ರಾಹಕರನ್ನು ತಲುಪುವ ಮೂಲಕ ಸುಸ್ಥಿರ ಆದಾಯದ ಅವಕಾಶಗಳನ್ನು ರೂಪಿಸಿಕೊಳ್ಳುವ ಅವಕಾಶ ನೀಡುತ್ತದೆ.

ಅಮೆಜಾನ್ ಸಹೇಲಿ ಕಾರ್ಯಕ್ರಮಕ್ಕೆ ಸೇರ್ಪಡೆಯಾಗುವ ಪ್ರತಿ ಉದ್ಯಮಿಯೂ ಅವರ ಉದ್ಯಮವು ಅಮೆಜಾನ್.ಇನ್ ನಲ್ಲಿ ಸೇರ್ಪಡೆಯಾಗಲು ರಚನಾತ್ಮಕ ಆನ್ ಬೋರ್ಡಿಂಗ್ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಬೆಂಬಲ ಪಡೆಯುತ್ತಾರೆ. ತರಬೇತಿ ಕಾರ್ಯಕ್ರಮಗಳಲ್ಲಿ ಆನ್ಲೈನ್ ಮಾರಾಟದ ಪ್ರಮಖ ಆಯಾಮಗಳು ಒಳಗೊಂಡಿರುತ್ತವೆ, ಅದರಲ್ಲಿಇನ್ವೆಂಟರಿ ಮ್ಯಾನೇಜ್ಮೆಂಟ್ ಮತ್ತು ಸದೃಢವಾದ ಗ್ರಾಹಕ ಅನುಭವ ನೀಡುವುದು ಒಳಗೊಂಡಿರುತ್ತದೆ. ಇದರೊಂದಿಗೆ ಈ ಕಾರ್ಯಕ್ರಮವು ಉತ್ಪನ್ನದ ಛಾಯಾಗ್ರಹಣ ಮತ್ತು ಕೆಟಲಾಗಿಂಗ್ ಮಾಡಲೂ ನೆರವು ನೀಡುತ್ತದೆ, ಇದರೊಂದಿಗೆ ಅನಲಿಟಿಕ್ಸ್ ಸಾಧನಗಳು ಮತ್ತು ಮಾಹಿತಿಪೂರ್ಣ ನಿರ್ಧಾರ ಕೈಗೊಳ್ಳಲು ಬಿಸಿನೆಸ್ ರಿಪೋರ್ಟ್ ಗಳನ್ನು ಪೂರೈಸುತ್ತದೆ. ಒಟ್ಟಿಗೆ ಈ ಸಾಮರ್ಥ್ಯಗಳು ಮಹಿಳಾ ಉದ್ಯಮಿಗಳಿಗೆ ಉತ್ಪನ್ನದ ಆವಿಷ್ಕಾರಕ್ಕೆ ಗಮನ ನೀಡು ಮತ್ತು ಅವರ ಬ್ರಾಂಡ್ ಗಳನ್ನು ಸದೃಢಗೊಳಿಸಲು ನೆರವಾಗುತ್ತವೆ.

ಎ.ಡಬ್ಲ್ಯೂ.ಡಬ್ಲ್ಯೂ.ಎ ಅಧ್ಯಕ್ಷೆ ಶ್ರೀಮತಿ ಸುನಿತಾ ದ್ವಿವೇದಿ ಅವರ ಪ್ರಕಾರ, “ನಾವು ಅಮೆಜಾನ್ ನೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಮತ್ತು ನಮ್ಮ ಸದಸ್ಯರಿಗೆ ಅವರ ಉದ್ಯಮಶೀಲತೆಯ ಆಕಾಂಕ್ಷೆಗಳನ್ನು ಸುಸ್ಥಿರ, ವಿಸ್ತರಿಸಬಲ್ಲ ಉದ್ಯಮಗಳಾಗಿ ಪರಿವರ್ತಿಸಲು ನೆರವಾಗುತ್ತಿದ್ದೇವೆ. ಈ ಒಡಂಬಡಿಕೆಯ ಮೂಲಕ ನಾವು ಸೇನಾ ಕುಟುಂಬಗಳ ಮಹಿಳೆಯರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ. ಈ ಸಹಯೋಗವು ಅವರಿಗೆ ಅವರ ಉದ್ಯಮಶೀಲತೆಯ ಪ್ರಯಾಣವನ್ನು ಹೆಚ್ಚಿನ ವಿಶ್ವಾಸದಿಂದ ನಡೆಸಲು ಮತ್ತು ದೇಶಾದ್ಯಂತ ಗ್ರಾಹಕರೊಂದಿಗೆ ಸಂಪರ್ಕದಲ್ಲಿರಲು ನೆರವಾಗುತ್ತದೆ” ಎಂದರು.

ಅಮೆಜಾನ್ ಸ್ಟೋರ್ಸ್ ಇಂಡಿಯಾ, ಜಪಾನ್ ಅಂಡ್ ಎಮರ್ಜಿಂಗ್ ಮಾರ್ಕೆಟ್ಸ್ ಪಿ.ಎಕ್ಸ್.ಟಿ. ಉಪಾಧ್ಯಕ್ಷೆ ದೀಪ್ತಿ ವರ್ಮಾ, “ಸೇನಾ ಕುಟುಂಬಗಳ ಮಹಿಳೆಯರು ಉದ್ಯಮಶೀತೆಯ ಅವಕಾಶಗಳನ್ನು ಹುಡುಕಿಕೊಳ್ಳಲು ಎ.ಡಬ್ಲ್ಯೂ.ಡಬ್ಲ್ಯೂ.ಎ. ಜೊತೆಯಲ್ಲಿ ಸಹಯೋಗಕ್ಕೆ ನಾವು ಬಹಳ ಸಂತೋಷ ಹೊಂದಿದ್ದೇವೆ. ಅಮೆಜಾನ್ ನಲ್ಲಿ ನಾವು ಮಾರುಕಟ್ಟೆಗಳಿಗೆ ಪ್ರವೇಶ ನೀಡುತ್ತೇವೆ ಮತ್ತು ಆನ್ಲೈನ್ ನಲ್ಲಿ ಸುಸ್ಥಿರ ಉದ್ಯಮಗಳನ್ನು ನಿರ್ಮಿಸಲು ಬೆಂಬಲಿಸುತ್ತೇವೆ. ಈ ಸಹಯೋಗದ ಮೂಲಕ ಮಹಿಳಾ ಉದ್ಯಮಿಗಳು ರಚನಾತ್ಮಕ ಆನ್ ಬೋರ್ಡಿಂಗ್ ಮೂಲಕ ಅಮೆಜಾನ್.ಇನ್ ಪ್ರವೇಶ ಪಡೆಯಲು ಶಕ್ತರಾಗುತ್ತಾರೆ ಮತ್ತು ಅವರಿಗೆ ಅಮೆಜಾನ್.ಇನ್ ನಲ್ಲಿ ಅವರ ಉದ್ಯಮ ರೂಪಿಸಲು ಮತ್ತು ಬೆಳೆಸಲು ಮಾರ್ಗದರ್ಶನ ಪಡೆಯುತ್ತಾರೆ” ಎಂದರು.

ಎಲಿವೇಟ್ ಹರ್ 2026 ಕುರಿತು

ಎಲಿವೇಟ್ ಹರ್ 2026 ಮಹಿಳಾ ವೃತ್ತಿಪರರು ಮತ್ತು ನಾಯಕರನ್ನು ವೃತ್ತಿಯ ಪ್ರಗತಿಯ ಕುರಿತು ಕೇಂದ್ರೀಕೃತ ಸಂವಹನಗಳಿಗೆ ಒಟ್ಟಿಗೆ ತರುತ್ತದೆ. ಅಮೆಜಾನ್ ನಾಯಕರು ಎಐ, ಫಿನ್ಟೆಕ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಸಣ್ಣ ಗುಂಪುಗಳ ಮಾರ್ಗದರ್ಶನವನ್ನು 150ಕ್ಕೂ ಹೆಚ್ಚು ಮಂದಿ ನೀಡಿದ್ದು ಹೆಚ್ಚಿನ ಪ್ರಗತಿಯ ವಲಯಗಳಿಗೆ ಅಗತ್ಯವಿರುವ ಕೌಶಲ್ಯಗಳ ಕುರಿತು ಪ್ರಾಯೋಗಿಕ ಒಳನೋಟ ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ “ನ್ಯಾವಿಗೇಟಿಂಗ್ ಕೆರೀರ್ ರಿಸೈಲೆನ್ಸ್(ವೃತ್ತಿ ಸದೃಢತೆಯ ಪ್ರಯಾಣ)” ಎಂಬ ಫೈರ್ ಸೈಡ್ ಚಾಟ್ ಒಳಗೊಂಡಿದ್ದು ಖ್ಯಾತ ನಟಿ ಮತ್ತು ಲೇಖಕಿ ಕಲ್ಕಿ ಕೊಚ್ಲಿನ್ ಮತ್ತು ದೀಪ್ತಿ ವರ್ಮಾ ಅವರೊಂದಿಗೆ ಹಣಕಾಸು ಸ್ವಾತಂತ್ರ್ಯ ಕುರಿತು ಫಿನ್ಟೆಕ್ ಉದ್ಯಮಿ ಅಲಿ ಹಜಿಯಾನಿ(ದಟ್ ಕ್ರೆಡಿಟ್ ಕಾರ್ಡ್ ಗೈ) ಅವರ ಕಾರ್ಯಾಗಾರವೂ ಒಳಗೊಂಡಿತ್ತು.