ನವದೆಹಲಿ(ಫೆ.19): ರೈತ ಪ್ರತಿಭಟನೆ, ಕರ್ನಾಟಕದಲ್ಲಿ ಮೀಸರಾತಿ ಹೋರಾಟ ಸೇರಿದಂತೆ ದೇಶದ ಉದ್ದಗಲಕ್ಕೂ ಒಂದಲ್ಲೂ ಒಂದು ಪ್ರತಿಭಟನೆಗಳು ನಡೆಯುತ್ತಿದೆ. ಇದರ ನಡುವೆ ಭಾರತ್ ಬಂದ್, ರಸ್ತೆ ತಡೆ, ರೈಲು ತಡೆ ಕೂಡ ನಡೆಯುತ್ತಿದೆ. ಇದರ ನಡುವೆ ಇದೀಗ ವರ್ತಕರ ಸಂಘಘಟನೆ ಫೆಬ್ರವರಿ 26ಕ್ಕೆ ದೇಶಾದ್ಯಂತ ವಾಣಿಜ್ಯ ಮಾರುಕಟ್ಟೆ ಬಂದ್ ಮಾಡಲು ಕರೆ ನೀಡಿದೆ.

ಹಳೇ ನಿಯಮದಿಂದ ಭವ್ಯ ಭಾರತ ನಿರ್ಮಾಣ ಸಾಧ್ಯವಿಲ್ಲ; ಪರೋಕ್ಷ ಸೂಚನೆ ನೀಡಿದ ಮೋದಿ!.

ಜಿಎಸ್‌ಟಿ(ತೆರಿಗೆ)ಯಲ್ಲಿ ಕೆಲ ತಿದ್ದುಪಡಿಗೆ ಆಗ್ರಹಿಸಿ ವರ್ತಕರ ಸಂಘಟನೆ ದೇಶಾದ್ಯಂತ ವಾಣಿಜ್ಯ ಮಾರುಕಟ್ಟೆ ಬಂದ್ ಮಾಡಲು ಕರೆ ನೀಡಿದೆ. ಜಿಎಸ್‌ಟಿ ಅಭಿವೃದ್ಧಿಗೆ ಪೂರಕವಾಗಿರಬೇಕು. ಆದರೆ ಸದ್ಯ ಜಿಎಸ್‌ಟಿಯಲ್ಲಿನ ಕೆಲ ನಿಯಮಗಳಿಗೆ ತಿದ್ದುಪಡಿ ಅವಶ್ಯಕತೆ ಇದೆ. ಕೆಲ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ವರ್ತಕರ ಸಂಘಟನೆ ಆಗ್ರಹಿಸಿದೆ.

ಜಿಎಸ್‌ಟಿ ಪುನರ್ ಪರಿಶೀಲನೆಗಾಗಿ ವರ್ತಕರ ಸಂಘಟನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಫೆಬ್ರವರಿ 26 ರಂದು ಬಂದ್ ಮೂಲಕ ಬಿಸಿ ಮುಟ್ಟಿಸಲಿದೆ.  ಅಖಿಲ ಭಾರತ ಸರಕು ಸಾಗಾಣೆ ಸೇರಿದಂತೆ ಕಲ ವರ್ತಕರ ಸಂಘಟನೆಗಳು ಈ ಬಂದ್‌ಗೆ ಬೆಂಬಲ ನೀಡಿದೆ. ಹೀಗಾಗಿ ರಾಜ್ಯ ಹಾಗೂ ದೇಶಾದ್ಯಂತ ವಾಣಿಜ್ಯ ಮಾರುಕಟ್ಟೆ ಸಂಪೂರ್ಣ ಬಂದ್ ಆಗಲಿದೆ.

ರೈತ ಕ್ರಾಂತಿ ಹೆಸರಲ್ಲಿ ಭಾರತ್ ಬಂದ್.... Left, Right and Centre

ನಗರ, ರಾಜ್ಯ ಹಾಗೂ ದೇಶ್ಯಾದ್ಯಂತ ವಾಣಿಜ್ಯ ಮಾರುಕಟ್ಟೆಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ ಎಂದು ವರ್ತಕರ ಸಂಘಟನೆ ಹೇಳಿದೆ.