ನವದೆಹಲಿ(ಡಿ.07):  ರೈತರ ಪ್ರತಿಭಟನೆ ಕಿಚ್ಚು ದೇಶವ್ಯಾಪಿ ಹಬ್ಬಿದೆ. ಡಿ.08ರಂದು ಭಾರತ್ ಬಂದ್ ಮೂಲಕ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲು ರೈತ ಸಂಘಟನೆಗಳು ಮುಂದಾಗಿದೆ. ರೈತರ ಪ್ರತಿಭಟನೆ ಹಿಂಪಡೆಯಲು ಕೇಂದ್ರ ಸರ್ಕಾರ ಹಲವು ಸುತ್ತಿನ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದೆ. ಆದರೆ ರೈತರ ತಮ್ಮ ಪಟ್ಟು ಬಿಟ್ಟಿಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ಸೂಚನೆ ನೀಡಿದ್ದಾರೆ. 

ಭಾರತ್ ಬಂದ್: ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ ಜಾರಿ!

ಆಗ್ರಾ ಮೆಟ್ರೋ ರೈಲು ಉದ್ಘಾಟನೆಯಲ್ಲಿ ಪ್ರಧಾನಿ ಮೋದಿ ಪರೋಕ್ಷವಾಗಿ ರೈತ ಸಂಘಟನೆಗಳ ಪ್ರತಿಭಟನೆ ಹಾಗೂ ಭಾರತ್ ಬಂದ್‌ ಕುರಿತು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ. ಹಳೇ ನಿಯಮ, ನೀತಿಗಳಿಂದ ಹೊಸ ಶತಮಾನ ನಿರ್ಮಾಣ ಸಾಧ್ಯವಿಲ್ಲ. ಹಳೇ ನಿಯಮಳು ಆಧುನಿಕ ಕಾಲಕ್ಕೆ ಸರಿಹೊಂದದೇ ಹೋಗಬಹುದು ಎಂದು ಕೃಷಿ ಮಸೂದೆಗಳನ್ನು ಮೋದಿ ಪರೋಕ್ಷವಾಗಿ ಸಮರ್ಥಿಸಿದ್ದಾರೆ.

ಭಾರತದ ಅಭಿವೃದ್ಧಿ, ಸುಧಾರಣೆಗಾಗಿ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು, ಮಸೂದೆಗಳನ್ನು ತರುತ್ತಿದೆ. ಪ್ರಯತ್ನದಲ್ಲಿ ಹಲವು ತಜ್ಞರಿಂದ ಮಾಹಿತಿ ಪಡೆದು ಹೊಸ ನೀತಿಗಳನ್ನು ತರಲಾಗುತ್ತಿದೆ. ಜಾರಿಯಾಗುವ ಹೊಸ ನಿಯಮಗಳ ಸರಿಯಾದ ಮಾಹಿತಿ ಪಡೆದು ಮುಂದೆ ಚಲಿಸಿದರೆ ಸಮಸ್ಯೆ ಎದುರಾಗುವುದಿಲ್ಲ ಎಂದಿದ್ದಾರೆ.