Infosys Share Price: ಯುಕೆ ಪ್ರಧಾನಿ ಪತ್ನಿ ಅಕ್ಷತಾಗೆ ಒಂದೇ ದಿನದಲ್ಲಿ 500 ಕೋಟಿಗೂ ಹೆಚ್ಚು ನಷ್ಟ..!
ಇನ್ಫೋಸಿಸ್‌ನಲ್ಲಿ ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿಯವರ ಪಾಲು $450 ಮಿಲಿಯನ್‌ಗಿಂತಲೂ ಹೆಚ್ಚಿದೆ. ಇನ್ಫೋಸಿಸ್‌ನಲ್ಲಿ ಅಕ್ಷತಾ ಮೂರ್ತಿ ಶೇ.0.95ರಷ್ಟು ಷೇರು ಹೊಂದಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ದೆಹಲಿ ( ಏಪ್ರಿಲ್ 18, 2023): ಸೋಮವಾರ ಇನ್ಪೋಸಿಸ್ ಸಂಸ್ಥೆಯ ಷೇರುಗಳ ಮೌಲ್ಯ ಶೇ. 9. 4ರಷ್ಟು ಕುಸಿತ ಕಂಡಿದೆ. ಇದರ ಪರಿಣಾಮ ಯುಕೆಗೂ ತಟ್ಟಿದೆ ನೋಡಿ. ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರಮ ಆಸ್ತಿ ಒಂದೇ ದಿನದಲ್ಲಿ £ 49 ಮಿಲಿಯನ್ (500 ಕೋಟಿ ರೂ.) ಗೂ ಅಧಿಕ ನಷ್ಟ ಅನುಭವಿಸಿದ್ದಾರೆ.
ಅಕ್ಷತಾ ಮೂರ್ತಿ ಅವರು ತಮ್ಮ ತಂದೆ ನಾರಾಯಣ ಮೂರ್ತಿ ಸಹ-ಸ್ಥಾಪಿಸಿರುವ ಭಾರತೀಯ ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್ ಲಿಮಿಟೆಡ್‌ನಲ್ಲಿ ಷೇರುಗಳನ್ನು ಹೊಂದಿದ್ದು, ಈ ಹಿನ್ನೆಲೆ 500 ಕೋಟಿ ರೂ.ಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಅಕ್ಟೋಬರ್ 2019 ರಿಂದ ಇನ್ಫೋಸಿಸ್ ತನ್ನ ಅತಿದೊಡ್ಡ ಇಂಟ್ರಾಡೇ ಶೇಕಡಾವಾರು ಕುಸಿತವನ್ನು ಕಂಡಿದೆ. ಇದರ ಪರಿಣಾಮ ಇತರ ಕಂಪನಿಗಳ ಮೇಲೂ ಆಗಿದೆ. ಪ್ರಮುಖವಾಗಿ ಐಟಿ ಕಂಪನಿಗಳಿಗೆ ನಷ್ಟವಾಗಿದ್ದು, ನಿಫ್ಟಿ ಐಟಿ ಸೂಚ್ಯಂಕವು ಶೇಕಡಾ 7.6 ರಷ್ಟು ಕುಸಿತ ಕಂಡಿದೆ.
ಇದನ್ನು ಓದಿ: ಎರಡು ವರ್ಷಗಳಲ್ಲಿ ಇನ್ಫೋಸಿಸ್ ಷೇರುಗಳಿಂದ ಅಕ್ಷತಾ ಮೂರ್ತಿ ಗಳಿಸಿದ ಆದಾಯ ಎಷ್ಟು ಗೊತ್ತಾ?
ಇಂಟ್ರಾಡೇ ವಹಿವಾಟಿನಲ್ಲಿ ಇನ್ಫೋಸಿಸ್ ಷೇರುಗಳು ಶೇಕಡಾ 12 ರಷ್ಟು ಕುಸಿತ ಕಂಡಿದ್ದು, ಬಳಿಕ ಷೇರು ಮಾರುಕಟ್ಟೆ ಅಂತ್ಯದ ವೇಳೆಗೆ ಸ್ವಲ್ಪ ಚೇತರಿಸಿಕೊಂಡಿತು. ಆದರೂ, ಇನ್ಫೊಸಿಸ್‌ನ ಪ್ರತಿ ಷೇರುಗಳ ಮೌಲ್ಯ 1259 ರೂ. ಗೆ ಇಳಿಕೆಯಾಗಿದೆ. ಮಾರ್ಚ್ 23, 2020 ರ ಇನ್ಫೋಸಿಸ್ ಷೇರುಗಳು ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಮೌಲ್ಯಕ್ಕೆ ಇಳಿಕೆಯಾಗಿದೆ.
ಇನ್ಫೋಸಿಸ್‌ನಲ್ಲಿ ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿಯವರ ಪಾಲು $450 ಮಿಲಿಯನ್‌ಗಿಂತಲೂ ಹೆಚ್ಚಿದೆ. ಇನ್ಫೋಸಿಸ್‌ನಲ್ಲಿ ಅಕ್ಷತಾ ಮೂರ್ತಿ ಶೇ.0.95ರಷ್ಟು ಷೇರು ಹೊಂದಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ರಿಷಿ ಸುನಕ್ ಅವರು ಯುಕೆಯಲ್ಲಿ ಅವರ ಪತ್ನಿಯ 'ನಿವಾಸೇತರ' ಸ್ಥಾನಮಾನಕ್ಕಾಗಿ ಆಗಾಗ್ಗೆ ಟೀಕೆಗೊಳಗಾಗಿದ್ದಾರೆ ಮತ್ತು ಇನ್ಫೋಸಿಸ್ ಡಿವಿಡೆಂಡ್ ಗಳಿಕೆಯನ್ನು ಅವರು ಘೋಷಿಸಿಲ್ಲ, ತೆರಿಗೆ ಪಾವತಿಸುತ್ತಿಲ್ಲ ಎಂದು ಪ್ರತಿಪಕ್ಷಗಳು ಆಗಾಗ್ಗೆ ಅವರನ್ನು ಗುರಿಯಾಗಿಸಿಕೊಂಡಿವೆ.
ಇದನ್ನೂ ಓದಿ: ಪತಿ ನಾರಾಯಣ ಮೂರ್ತಿ, ಮಗಳು ಮತ್ತು ಅಳಿಯ ರಿಷಿ ಸುನಕ್‌ಗೆ 4 ಅಂಶಗಳ ಸಲಹೆ ನೀಡಿದ ಸುಧಾಮೂರ್ತಿ..
ಇನ್ನು, ಈ ಬೆಳವಣಿಗೆ ಬಗ್ಗೆ ರಿಷಿ ಸುನಕ್ ಅವರ ಕಚೇರಿ ಪ್ರತಿಕ್ರಿಯಿಸಲು ನಿರಾಕರಿಸಿದರೂ ನಾರಾಯಣ ಮೂರ್ತಿ ಪುತ್ರಿ ಹಾಗೂ ಅಕ್ಷತಾ ಮೂರ್ತಿ ಅವರ ಪತಿಯ ರಾಜಕೀಯ ಜೀವನದಲ್ಲಿ ಪದೇ ಪದೇ ಕೇಳಿಬರುವ ವಿಷಯವಾಗಿದೆ. 2022 ರಲ್ಲಿ, ಅಕ್ಷತಾ ಮೂರ್ತಿ ಇನ್ಫೋಸಿಸ್‌ನಲ್ಲಿನ ಷೇರುಗಳಿಂದ 126.61 ಕೋಟಿ ಲಾಭಾಂಶ ಆದಾಯವನ್ನು ಗಳಿಸಿದರು. ಕಳೆದ ವರ್ಷ ಅಕ್ಷತಾ ಮೂರ್ತಿಯವರು UKಯಲ್ಲಿ 'ನಿವಾಸೇತರ' ಸ್ಥಾನಮಾನವನ್ನು ಹೊಂದಿದ್ದಾರೆ ಮತ್ತು ಸಾಗರೋತ್ತರ ಗಳಿಕೆಯ ಮೇಲೆ ತೆರಿಗೆಯನ್ನು ಪಾವತಿಸಿಲ್ಲ ಎಂದು ಹೊರಹೊಮ್ಮಿದ ನಂತರ ದಂಪತಿ ಟೀಕೆ ಎದುರಿಸಿದ್ದರು.
ಭಾರತದ ಪ್ರಜೆಯಾಗಿ, ಅವರು ಬೇರೆ ದೇಶದ ಪೌರತ್ವವನ್ನು ಹೊಂದಲು ಸಾಧ್ಯವಾಗಲಿಲ್ಲ ಮತ್ತು "ಅವರು ಯಾವಾಗಲೂ ತಮ್ಮ ಎಲ್ಲಾ ಯುಕೆ ಆದಾಯದ ಮೇಲೆ ಯುಕೆ ತೆರಿಗೆಯನ್ನು ಪಾವತಿಸುತ್ತಾರೆ ಮತ್ತು ಮುಂದುವರಿಸುತ್ತಾರೆ" ಎಂದು ಅವರ ವಕ್ತಾರರು ಹೇಳಿದ್ದರು.
ಇದನ್ನೂ ಓದಿ: ಪಿಎಂ ಕೇರ್ಸ್ ಫಂಡ್ ಸಲಹಾ ಮಂಡಳಿಗೆ ಸುಧಾ ಮೂರ್ತಿ ನೇಮಕ; ಟ್ರಸ್ಟಿಯಾದ Ratan Tata
ಇನ್ಫೋಸಿಸ್ Q4 ಫಲಿತಾಂಶಗಳ ಹಿನ್ನೆಲೆಯಲ್ಲಿ ಇನ್ಫೋಸಿಸ್ ಷೇರಿನಲ್ಲಿ ಕುಸಿತ ಕಂಡಿದೆ. ಕಂಪನಿಯು ನಿರೀಕ್ಷಿತ ಫಲಿತಾಂಶಗಳಿಗಿಂತ ದುರ್ಬಲ ಫಲಿತಾಂಶಗಳನ್ನು ಪ್ರಕಟಿಸಿದ್ದು, ಇದರಲ್ಲಿ ಕಂಪನಿಯು 37,441 ಕೋಟಿ ಆದಾಯವನ್ನು ವರದಿ ಮಾಡಿದೆ.