ಏರ್ ಇಂಡಿಯಾದ ಮೀಸೆ ಮಹಾರಾಜರಿಗೆ ಬರಲಿದ್ದಾಳೆ ಜೋಡಿ: ಲೋಗೋದಲ್ಲಿ ಶೀಘ್ರ ಮಹಿಳೆ ಚಿತ್ರ..!
ಈ ಮೂಲಕ ನೂತನ ವಿನ್ಯಾಸದಲ್ಲಿ ಒಂದು ಪಾರಂಪರಿಕ ಜೋಡಿಯ ಚಿತ್ರವನ್ನು ಲೋಗೊದಲ್ಲಿ ಬಳಸಲಾಗುವುದು ಎಂಬ ಸೂಚನೆ ಸಿಕ್ಕಿದೆ.
ನವದೆಹಲಿ (ಫೆಬ್ರವರಿ 28, 2023): ಏರ್ ಇಂಡಿಯಾ ವಿಮಾನದ ಅಧಿಕೃತ ಲಾಂಛನ ಅಥವಾ ಲೋಗೊದಲ್ಲಿ ಕಂಡುಬರುವ ಸಾಂಪ್ರದಾಯಿಕ ಉಡುಗೆಯ ಮೀಸೆ ಹಾಗೂ ಪೇಟಾಧಾರಿ ಮಹಾರಾಜ ಚಿತ್ರದೊಂದಿಗೆ ಮಹಿಳೆಯ ಚಿತ್ರವನ್ನೂ ಸೇರಿಸಲಾಗುವುದು ಎಂಬ ಸೂಚನೆಯನ್ನು ಸಂಸ್ಥೆಯ ಸಿಇಒ ಕ್ಯಾಂಪಬೆಲ್ ವಿಲ್ಸನ್ ನೀಡಿದ್ದಾರೆ. ಈ ಮೂಲಕ ನೂತನ ವಿನ್ಯಾಸದಲ್ಲಿ ಒಂದು ಪಾರಂಪರಿಕ ಜೋಡಿಯ ಚಿತ್ರವನ್ನು ಲೋಗೋದಲ್ಲಿ ಬಳಸಲಾಗುವುದು ಎಂಬ ಸೂಚನೆ ಸಿಕ್ಕಿದೆ.
ಸಂದರ್ಶನವೊಂದರಲ್ಲಿ (Interview) ಮಾತನಾಡಿದ ಅವರು, ಏರ್ ಇಂಡಿಯಾ (Air India) ವಿಮಾನಯಾನ ಸಂಸ್ಥೆಗೆ (Airlines Company) ಹೊಸ ವಿನ್ಯಾಸ ನೀಡುವ ಕುರಿತು ಮಾತನಾಡಿದ್ದಾರೆ. ಈ ವೇಳೆ ಮಹಾರಾಜ (Maharaja) ವಿನ್ಯಾಸ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನೂತನ ಯೋಜನೆಯ ಭಾಗವಾಗಿ ಮಹಾರಾಜ ನಮ್ಮೊಂದಿಗಿರುತ್ತಾರೆ. ಅವರು ಮತ್ತು ಅವಳು ಜೊತೆಯಾಗಬಹುದು’ ಎಂದಿದ್ದಾರೆ.
ಇದನ್ನು ಓದಿ: ವಿಶ್ವದರ್ಜೆಯ ವೈಮಾನಿಕ ಸಂಸ್ಥೆಯಾಗುವತ್ತ ಏರ್ ಇಂಡಿಯಾ ಚಿತ್ತ: 470 ವಿಮಾನ ಖರೀದಿ ಒಪ್ಪಂದದಿಂದ ಭಾರತಕ್ಕೂ ಲಾಭ..!
ಅಲ್ಲದೇ ‘90 ವರ್ಷಗಳ ಏರ್ ಇಂಡಿಯಾ ಪರಂಪರೆಯನ್ನು ಮುಂದಕ್ಕೂ ಕೊಂಡೊಯ್ಯುತ್ತೇವೆ. ಹಾಗಂತ ಕೇವಲ ಅದನ್ನೇ ಹಿಡಿದಿಟ್ಟುಕೊಂಡಿಲ್ಲ. ಭವಿಷ್ಯದ ಬಗ್ಗೆಯೂ ಯೋಚಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Air India ಮೆಗಾ ಡೀಲ್: ಏರ್‌ಬಸ್‌ನಿಂದ 250 ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡ ಟಾಟಾ ಗ್ರೂಪ್