ಸಕ್ಕರೆ ರಫ್ತಿನ ಮೇಲಿನ ನಿರ್ಬಂಧ ಮತ್ತೆ 1 ವರ್ಷ ಮುಂದುವರಿಕೆ

ಸರ್ಕಾರವು ಸಕ್ಕರೆ ರಫ್ತು ಮೇಲಿನ ನಿರ್ಬಂಧವನ್ನು 2023ರ ಅ. 31ರವರೆಗೆ ಮುಂದುವರೆಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಕೊರತೆಗೆ ತಡೆ ಹಾಕುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

aim of preventing shortage in domestic market, government extended impose of restrictions on sugar exports till 2023 Akb

ನವದೆಹಲಿ: ಸರ್ಕಾರವು ಸಕ್ಕರೆ ರಫ್ತು ಮೇಲಿನ ನಿರ್ಬಂಧವನ್ನು 2023ರ ಅ. 31ರವರೆಗೆ ಮುಂದುವರೆಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಕೊರತೆಗೆ ತಡೆ ಹಾಕುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮೊದಲು ಈ ವರ್ಷ ಅ.31ರವರೆಗೆ ಮಾತ್ರ ನಿರ್ಬಂಧ ಹೇರಲಾಗಿತ್ತು. ಆದರೆ ಇದೀಗ ಹಚ್ಚಿಸಿದ್ದು, 2023ರ ಅ.31 ಅಥವಾ ಮುಂದಿನ ಆದೇಶದವರೆಗೆ ಈ ನಿಯಮ ಮುಂದುವರೆಯಲಿದೆ ಹಾಗೂ ಉಳಿದ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಜೊತೆಗೆ ಸುಂಕ ದರದ ಕೋಟಾದಲ್ಲಿ ಯುರೋಪ್‌ (Europe), ಅಮೇರಿಕಾ (America) ಒಕ್ಕೂಟಗಳಿಗೆ ರಫ್ತಾಗುವ ಸಕ್ಕರೆಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (foreign trade directorate)ತಿಳಿಸಿದೆ.

ಪ್ರಸಕ್ತ ವರ್ಷದಲ್ಲಿ ಭಾರತವು ಅತಿಹೆಚ್ಚು ಸಕ್ಕರೆ ಉತ್ಪಾದಕ (largest Sugar producer)ಹಾಗೂ 2ನೇ ರಫ್ತುದಾರ ರಾಷ್ಟ್ರವಾಗಿದೆ. ಭಾರತ ಈ ಬಾರಿ 36.5 ಮಿಲಿಯನ್‌ ಟನ್‌ ಸಕ್ಕರೆ ಉತ್ಪಾದಿಸುವ ಗುರಿ ಹೊಂದಿದೆ.

Vijayapura: ಬಾಲಾಜಿ ಸಕ್ಕರೆ ಕಾರ್ಖಾನೆ ವಿರುದ್ಧ ರೊಚ್ಚಿಗೆದ್ದ ರೈತರು: ಕಲ್ಲೆಸೆತ

ಗೋಧಿ ರಪ್ತು ನಿಷೇಧಿಸಿದ ಭಾರತ: ನಿರ್ಧಾರ ಮರುಪರಿಶೀಲಿಸುವಂತೆ ಬೇಡುವೆ: IMF ಮುಖ್ಯಸ್ಥೆ

 

Latest Videos
Follow Us:
Download App:
  • android
  • ios