ಸ್ವಂತ ಉದ್ಯಮ ಮಾಡೋರು ಇಲ್ನೋಡಿ: 9 ವಿಫಲ ಉದ್ಯಮ, ಖಿನ್ನತೆ ಬಳಿಕ ಈಗ ಇವರು 1,48,729 ಕೋಟಿ ಮೌಲ್ಯದ ಕಂಪನಿ ಒಡೆಯ
ಅನಿಲ್ ಅಗರ್ವಾಲ್ ವೇದಾಂತ ರೀಸೋಸರ್ಸ್ ಲಿಮಿಟೆಡ್‌ನ ಸಂಸ್ಥಾಪಕರು ಮತ್ತು ಅಧ್ಯಕ್ಷರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಇವರನ್ನು ಆಹ್ವಾನಿಸಲಾಗಿದ್ದು, ಅಲ್ಲಿ ಅವರು ಕನಸುಗಳನ್ನು ಬೆನ್ನಟ್ಟುವ ಬಗ್ಗೆ ಮಾತನಾಡಿದ್ದಾರೆ.
ನವದೆಹಲಿ (ಆಗಸ್ಟ್ 7, 2023): ನಾವೂ ಏನಾದ್ರೂ ಸ್ವಂತ ಉದ್ಯಮ, ಬ್ಯುಸಿನೆಸ್ ಮಾಡ್ಬೇಕು ಅಂತ ಹಲವರು ಹಗಲು ಕನಸು ಕಾಣ್ತಾನೇ ಇರ್ತಾರೆ. ಆದರೆ, ಬಂಡವಾಳ ಸಿಗದೆ ಅಥವಾ ಧೈರ್ಯ ಸಾಲದೆ, ಹೆಚ್ಚು ನಷ್ಟ ಆದ್ರೆ ಹೇಗಪ್ಪಾ ಮುಂದಿನ ಜೀವನ ಅಥವಾ ಇತರೆ ಕಾರಣಗಳಿಂದ ಸ್ವಂತ ಉದ್ಯಮ ಅಥವಾ ಕಂಪನಿ ಆರಂಭಿಸೋಕೆ ಹಿಂದೆ ಮುಂದೆ ನೋಡ್ತಿರ್ತಾರೆ. ಅಥವಾ ಅನೇಕರು ಸ್ವಂತ ಉದ್ಯಮ ಆರಂಭಿಸೋದೇ ಇಲ್ಲ. ಆದರೆ, ಇಂತಹವರಿಗೆ ಸಾಮಾಜಿಕ ಜಾಲತಾಣಗಳಲ್ಲಿ, ವೆಬ್‌ಸೈಟ್‌ಗಳಲ್ಲಿ ಅನೇಕ ಸ್ಪೂರ್ತಿದಾಯಕ ಲೇಖನಗಳು, ಸಲಹೆಗಳು ಸಿಗುತ್ತವೆ. ಇದೇ ರೀತಿ, ನೀವೂ ಉದ್ಯಮ ಸ್ಟಾರ್ಟ್ ಮಾಡ್ಬೇಕು ಅಂತ ಅನ್ಕೋತಿದ್ರೆ ನಿಮಗಿಲ್ಲಿದೆ ಸ್ಪೂರ್ತಿ.
ಭಾರತೀಯ ಬಿಲಿಯನೇರ್ ಉದ್ಯಮಿ ಅನಿಲ್ ಅಗರ್ವಾಲ್ ಬಗ್ಗೆ ಬಹುತೇಕರಿಗೆ ಗೊತ್ತಿರ್ಬೇಕು. ಇಲ್ಲ ಅಂದ್ರೆ ತಿಳ್ಕೊಳ್ಳಿ. ಇವರೇ ವೇದಾಂತ ರೀಸೋಸರ್ಸ್ ಲಿಮಿಟೆಡ್‌ನ ಸಂಸ್ಥಾಪಕರು ಮತ್ತು ಅಧ್ಯಕ್ಷರು. ಅನಿಲ್ ಅಗರ್ವಾಲ್ ಅವರನ್ನು ಇತ್ತೀಚೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸಲಾಗಿತ್ತು. ಅಲ್ಲಿ ಅವರು ಕನಸುಗಳನ್ನು ಬೆನ್ನಟ್ಟುವ ಬಗ್ಗೆ ಮಾತನಾಡಿದ್ದರು.
ಇದನ್ನು ಓದಿ: BENGALURU TRAFFIC ಅವ್ಯವಸ್ಥೆಗೆ ವರ್ಷಕ್ಕೆ 20,000 ಕೋಟಿ ನಷ್ಟ: ಬಯಲಾಯ್ತು ಶಾಕಿಂಗ್ ಅಧ್ಯಯನ
ಸಣ್ಣ ವ್ಯಾಪಾರಿಗೆ ಜನಿಸಿದ ಅನಿಲ್ ಅಗರ್ವಾಲ್ ಪಾಟ್ನಾದ ಮಾರ್ವಾಡಿ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಚಿಕ್ಕ ವಯಸ್ಸಿನಲ್ಲಿ, ಅವರು ತಮ್ಮ ತಂದೆಯ ವ್ಯವಹಾರವನ್ನು ವಿಸ್ತರಿಸಲು ನಿರ್ಧರಿಸಿದರು ಮತ್ತು ವೃತ್ತಿ ಅವಕಾಶಗಳನ್ನು ಅನ್ವೇಷಿಸಲು 19ನೇ ವಯಸ್ಸಿನಲ್ಲಿ ಮುಂಬೈಗೆ ತೆರಳಿದರು.
ಗಣಿ ಉದ್ಯಮಿಯಾಗಿರೋ ಅನಿಲ್ ಅಗರ್ವಾಲ್, 1970 ರಲ್ಲಿ ತನ್ನ ಹದಿಹರೆಯದ ವಯಸ್ಸಲ್ಲೇ ಸ್ಕ್ರ್ಯಾಪ್ ಡೀಲರ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಈ ಬಗ್ಗೆ ಕೇಂಬ್ರಿಡ್ಜ್ ವಿವಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾನು ನನ್ನ 20 ಮತ್ತು 30 ರ ದಶಕಗಳನ್ನು ಇತರರನ್ನು ನೋಡುತ್ತಾ ಮತ್ತು ಒಂದು ದಿನ ನಾನು ಅಲ್ಲಿಗೆ (ಆ ಹಂತಕ್ಕೆ) ಯಾವಾಗ ಬರುತ್ತೇನೆ ಎಂದು ಯೋಚಿಸುತ್ತಿದ್ದೆ. ಮುಖ್ಯವಾಗಿ 9 ವಿಫಲ ವ್ಯವಹಾರಗಳು ಮತ್ತು ವರ್ಷಗಳ ಖಿನ್ನತೆಯ ನಂತರ ನಾನು ನನ್ನ ಮೊದಲ ಯಶಸ್ವಿ ಪ್ರಾರಂಭವನ್ನು ಹೊಂದಿದ್ದೇನೆ’’ ಎಂದೂ ಅನಿಲ್ ಅಗರ್ವಾಲ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಆದಾಯ ತೆರಿಗೆ ರೀಫಂಡ್‌ಗೆ ಕಾಯ್ತಿದ್ದೀರಾ..? ನಿಮಗೂ ಈ ರೀತಿ ಸಂದೇಶ ಬರ್ಬೋದು ಎಚ್ಚರ!
ಎಂದಿಗೂ ಕಾಲೇಜಿಗೆ ಹೋಗದ ವ್ಯಕ್ತಿಯಾಗಿ, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಆಹ್ವಾನಿಸಲ್ಪಟ್ಟ ಮತ್ತು ವಿದ್ಯಾರ್ಥಿಗಳೊಂದಿಗೆ ಮಾತನಾಡುವ ಕನಸು ಉದ್ಯಮಿ ಅನಿಲ್ ಅಗರ್ವಾಲ್ ಅವರಿಗೆ ಕಡಿಮೆಯೇನಲ್ಲ.. ಈ ಬಗ್ಗೆ ಅನಿಲ್ ಅಗರ್ವಾಲ್ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಅನುಭವವನ್ನು ಹಂಚಿಕೊಳ್ಂಡಿದ್ದು, "ಕಾಲೇಜಿಗೆ ಹೋಗದ ವ್ಯಕ್ತಿಯಾಗಿ, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಆಹ್ವಾನಿಸಿರುವುದು ಮತ್ತು ವಿದ್ಯಾರ್ಥಿಗಳೊಂದಿಗೆ ಮಾತನಾಡುವುದು ಕನಸಿಗೆ ಕಡಿಮೆ ಏನಲ್ಲ.." ಎಂದು ಅವರೇ ಬರೆದುಕೊಂಡಿದ್ದಾರೆ.
ಅನಿಲ್ ಅಗರ್ವಾಲ್ ನಿವ್ವಳ ಅಸ್ತಿ ಮೌಲ್ಯ
ಖ್ಯಾತ ಉದ್ಯಮಿ ಅನಿಲ್ ಅಗರ್ವಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಅವರ ಪ್ರೇರಕ ಪೋಸ್ಟ್‌ಗಳಿಗಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದಾರೆ. ಟ್ವಿಟರ್‌ನಲ್ಲಿ ಇವರು 1,78,000 ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ. ಫೋರ್ಬ್ಸ್ ಪ್ರಕಾರ, ಅವರ ನಿವ್ವಳ ಅಸ್ತಿ ಮೌಲ್ಯ ಸುಮಾರು 16,000 ಕೋಟಿ ರೂ. ಅಗಿದ್ದು, ಹಾಗೂ ಅವರ ಕುಟುಂಬದ ನಿವ್ವಳ ಆಸ್ತಿ ಮೌಲ್ಯ 32000 ಕೋಟಿ ರೂ. ಆಗಿದೆ. ಹಾಗೂ, ಇವರ ಕಂಪನಿಯ ಮೌಲ್ಯ 1,48,729 ಕೋಟಿ ರೂ.. ಆಗಿದೆ.
ಇದನ್ನೂ ಓದಿ: ಭೂಮಿ ತಾಯಿಗಿಲ್ಲಿ ಬಂಗಾರಕ್ಕೂ ಅಧಿಕ ಬೆಲೆ: ಎಕರೆಗೆ 100 ಕೋಟಿ ರೂ. ಗೆ ಮಾರಾಟ!