ಅಧಿಕೃತವಾಗಿ ತಿರುವನಂತಪುರಂ ಏರ್‌ಪೋರ್ಟ್ ಅದಾನಿಗೆ ತೆಕ್ಕೆಗೆ ಅದಾನಿ ಗ್ರೂಪ್‌ಗೆ ವಿಮಾನ ನಿಲ್ದಾಣ ಹಸ್ತಾಂತರ ಖಾಸಗೀಕರಣ ಸ್ಕೀಮ್ ಅಡಿಯಲ್ಲಿ ಏರ್‌ಪೋರ್ಟ್ ಪಡೆದ ಅದಾನಿ ಗ್ರೂಪ್  

ತಿರುವನಂತಪುರಂ(ಅ.14): ಕೇಂದ್ರ ಸರ್ಕಾರದ ಖಾಸಗೀಕರಣ ಸ್ಕೀಮ್ ಅಡಿಯಲ್ಲಿ ಹಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ವಹಣೆ ಖಾಸಗಿ ಮಾಲೀಕತ್ವಕ್ಕೆ ನೀಡಲಾಗಿದೆ. ಇದೀಗ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣ ಈಗಾಗಲೇ ಅದಾನಿ ಗ್ರೂಪ್ ಖರೀದಿಸಿತ್ತು. ಇದೀಗ ಅಧಿಕೃತವಾಗಿ ತಿರುವನಂತಪುರಂ ಏರ್‌ಪೋರ್ಟ್ ಅದಾನಿ ಗ್ರೂಪ್‌ಗೆ ಹಸ್ತಾಂತರಿಸಲಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡಲು ಮನವಿ

ಕೇರಳ ಆಡಳಿತಾರೂಢ ಎಲ್‌ಡಿಎಫ್ ಹಾಗೂ ವಿರೋಧ ಪಕ್ಷವಾದ ಯುಡಿಎಫ್ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆ ಮುಗಿಸಿ ವಿಮಾನ ನಿಲ್ದಾವನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸಿದೆ. ಏರ್‌ಪೋರ್ಟ್ ಸ್ವಾಧೀನಪಡಿಸಿಕೊಂಡ ಅದಾನಿ ಗ್ರೂಪ್ ಸಂತಸವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದೆ.

ದೇವರ ನಾಡಿನ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಹಾಗೂ ಅರನ್ನು ಸ್ವಾಗತಿಸಲು ನಾವು ಹೆಮ್ಮೆ ಪಡುತ್ತೇವೆ. ಹಚ್ಚ ಹಸಿನಿಂದ ಕೂಡಿದ, ಕಡಲ ತೀರದ ಸುಂದರ, ಸೊಗಸಾದ ತಿನಿಸುಗಳ ನಾಡಿನ ಜನರ ಸೇವೆಗೆ ಅವಕಾಶ ಪಡೆದಿದ್ದೇವೆ. ತಿರುವನಂತಪುರಂ ವಿಮಾನ ನಿಲ್ದಾಣದ ಮೂಲಕ ಅತ್ಯುನ್ನತ್ತ ಸೇವೆ ನೀಡಲು ಬದ್ಧರಾಗಿದ್ದೇವೆ ಎಂದು ಅದಾನಿ ಗ್ರೂಪ್ ಹೇಳಿದೆ.

ಪೈಲಟ್‌ಗಳಿಗೆ ತೊಂದರೆ 'ಬುರ್ಜ್ ಖಲೀಫಾ' ಲೇಸರ್ ಶೋ ರದ್ದು!

ತಿರುವುಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 50 ವರ್ಷಗಳ ಕಾಲಕ್ಕೆ ನಿರ್ವಹಣೆ ಹಾಗೂ ಅಭಿವೃದ್ಧಿ ಮಾಡಲು ಅದಾನಿ ಗ್ರೂಪ್ ಪಡೆದುಕೊಂಡಿದೆ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ವಿಮಾನ ನಿಲ್ದಾಣದ ನಿರ್ವಹಣೆ ಮಾಡಲಿದೆ.

Scroll to load tweet…

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕೇರಳ ತೀವ್ರವಾಗಿ ವಿರೋಧಿಸಿತ್ತು. ಕೇರಳ ಅಸೆಂಬ್ಲಿಯಲ್ಲಿ ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳು ವಿಮಾನ ನಿಲ್ದಾಣ ಖಾಸಗೀಕರಣವನ್ನು ಕಟುವಾಗಿ ವಿರೋಧಿಸಿತ್ತು. ಖಾಸಗೀಕರಣವನ್ನು ವಿರೋಧಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು. ಆದರೆ ತೀವ್ರ ವಿರೋಧದ ನಡುವೆಯೂ ತಿರುವನಂತಪುರಂ ವಿಮಾನ ನಿಲ್ದಾಣ ಅದಾನಿ ಗ್ರೂಪ್‌ಗೆ ಹಸ್ತಾಂತರಿಸಲಾಗಿದೆ.

1932ರಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣ ಕಾರ್ಯಾರಂಭಿಸಿತು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಿರುವನಂತಪುರಂ ವಿಮಾನ ನಿಲ್ದಾಣ ಇದೀಗ ಉದ್ಯಮಿ ಅದಾನಿ ಒಡೆತನದ ಅದಾನಿ ನಿರ್ವಹಣೆ ಮಾಡಲಿದೆ.

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ: ದೇಶಕ್ಕೆ ಮಾದರಿ

2019ರಲ್ಲಿ ಅದಾನಿ ಗ್ರೂಪ್ ತಿರುವನಂತಪುರಂ ವಿಮಾನ ನಿಲ್ದಾಣ ಬಿಡ್ಡಿಂಗ್ ಪ್ರಕ್ರಿಯೆ ಗೆದ್ದುಕೊಂಡಿತು. ಬಳಿಕ ತಿರುವನಂತಪುರಂನಲ್ಲಿ 7,525 ಕೋಟಿ ರೂಪಾಯಿ ವೆಚ್ಚದ ಅಂತಾರಾಷ್ಟ್ರೀಯ ಸೀಪೋರ್ಟ್ ನಿರ್ಮಿಸುವುದಾಗಿ ಘೋಷಿಸಿದೆ.

ಪ್ರಯಾಣಿಕರು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಪ್ರತಿ ಪ್ರಯಾಣಿಕ ಕೇವಲ 168 ರೂಪಾಯಿ ಪಾವತಿಸಬೇಕು ಎಂದು ಅದಾನಿ ಗ್ರೂಪ್ ಘೋಷಿಸಿದೆ.