Business Ideas : ಆಧಾರ್ ಕಾರ್ಡ್ ಕೇಂದ್ರ ತೆರೆದು ಗಳಿಕೆ ಶುರು ಮಾಡಿ
ಆಧಾರ್ ಕಾರ್ಡ್ ಈಗ ಅನಿವಾರ್ಯ ಎನ್ನುವಂತಾಗಿದೆ. ಹಾಗಾಗಿ ಚಿಕ್ಕ ಮಕ್ಕಳಿಗೆ ಕೂಡ ಆಧಾರ್ ಮಾಡಿಸಲಾಗುತ್ತದೆ. ಬರೀ ಕಾರ್ಡ್ ಮಾಡಿದ್ರೆ ಆಗ್ಲಿಲ್ಲ ವಿಳಾಸ, ಫೋನ್ ನಂಬರ್ ಬದಲಾವಣೆ ಸೇರಿದಂತೆ ಅನೇಕ ಕೆಲಸಗಳನ್ನು ಆಧಾರ್ ಕೇಂದ್ರದಲ್ಲಿ ಮಾಡಲಾಗುತ್ತದೆ. ಇದು ಕೆಲ ನಿರುದ್ಯೋಗಿಗಳಿಗೆ ಗಳಿಕೆಯ ಮೂಲವಾಗಿದೆ.
ಭಾರತದ ಪ್ರಮುಖ ಗುರುತಿನ ಚೀಟಿಯಲ್ಲಿ ಆಧಾರ್ ಕಾರ್ಡ್ ಕೂಡ ಒಂದು. ಜನವರಿ 2009 ರಲ್ಲಿ ಭಾರತ ಸರ್ಕಾರ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವನ್ನು ಸ್ಥಾಪಿಸಿತು. ಈ ಪ್ರಾಧಿಕಾರ ರಚನೆಯಾದ ನಂತರ 2010ರ ಸೆಪ್ಟೆಂಬರ್‌ನಿಂದ ಆಧಾರ್ ಕಾರ್ಡ್ ತಯಾರಿಕೆ ಆರಂಭವಾಯಿತು. ಈಗ ಆಧಾರ್ ಕಾರ್ಡನ್ನು ಭಾರತದಾದ್ಯಂತ ವಿಶಿಷ್ಟ ಗುರುತಿನ ಚೀಟಿ ಎಂದು ಕರೆಯಲಾಗುತ್ತದೆ.
ಆಧಾರ್ ಕಾರ್ಡ್ (Aadhaar Card) ಈಗ ಸರ್ಕಾರಿ ಸೇವೆಗಳಿಗೆ ಮಾತ್ರವಲ್ಲದೆ ಶಾಲೆಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಕೂಡ ಗುರುತಿ (Identity) ನ ಚೀಟಿಯಾಗಿ ಮಹತ್ವ ಪಡೆದಿದೆ. ಚಿಕ್ಕ ಮಕ್ಕಳಿಗೂ ಆಧಾರ್ ಕಾರ್ಡ್ ಈಗ ಅನಿವಾರ್ಯ ಎನ್ನುವಂತಾಗಿದೆ. ನೀವು ಕೆಲಸ ಹುಡುಕ್ತಿದ್ದರೆ ಆಧಾರ್ ಕಾರ್ಡ್ ತಯಾರಿಸುವ ಕೇಂದ್ರವನ್ನು ಶುರು ಮಾಡಬಹುದು. ನಾವಿಂದು ಆಧಾರ್ ಕಾರ್ಡ್ ಕೇಂದ್ರ ತೆರೆಯೋದು ಹೇಗೆ ಎನ್ನುವ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.
ಆಧಾರ್ ಕಾರ್ಡ್ ಕೇಂದ್ರ ತೆರೆಯೋದು ಹೇಗೆ? : ಆಧಾರ್ ಕಾರ್ಡ್ ಕೇಂದ್ರ ತೆರೆಯಲು ನೀವು ನೋಂದಣಿ (Registration) ಮಾಡಬೇಕು. ಸರ್ಕಾರದ ಪರೀಕ್ಷೆಯಲ್ಲಿ ಪಾಸ್ ಕೂಡ ಆಗ್ಬೇಕು. NSEIT ಪೋರ್ಟಲ್‌ಗೆ ಹೋಗಿ ಲಾಗಿನ್ ಆಗಿ ಆಧಾರ್ ಕಾರ್ಡ್‌ನ ಸಾಫ್ಟ್ ಕಾಪಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ನಿಮಗೆ ಒಂದು ಕೋಡ್ ಸಿಗುತ್ತದೆ. ಅದನ್ನು ಬಳಸಿಕೊಂಡು ನೀವು ಹೊಸ ಫಾರ್ಮ್ ತೆರೆದು, ಎಲ್ಲ ಮಾಹಿತಿ ಭರ್ತಿ ಮಾಡಿ ಸಹಿ ಹಾಗೂ ಫೋಟೋ ಸಮೇತ ಫಾರ್ಮ್ ಅಪ್ಲೋಡ್ ಮಾಡಬೇಕಾಗುತ್ತದೆ. ನೀವು ಫಾರ್ಮ್ ಭರ್ತಿ ಮಾಡಿದ ನಂತರ, ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಅದರ ಸಹಾಯದಿಂದ ನೀವು ಆಧಾರ್ ಕಾರ್ಡ್ ನೋಂದಣಿ ಸೈಟ್‌ಗೆ ಲಾಗ್ ಇನ್ ಮಾಡಬೇಕು.
ಎಲ್ಐಸಿ ಪಾಲಿಸಿ ಮೂಲದಾಖಲೆ ಕಳೆದು ಹೋಗಿದೆಯಾ? ಡೋಂಟ್ ವರಿ ಹೀಗೆ ಮಾಡಿ
ಪರವಾನಗಿಗಾಗಿ ಅರ್ಜಿ ಸಲ್ಲಿಸಿದ ನಂತರ, 36 ರಿಂದ 48 ಗಂಟೆಗಳವರೆಗೆ ಲಾಗಿನ್ ಮಾಡುವಂತಿಲ್ಲ. 48 ಗಂಟೆಗಳ ನಂತರ ಲಾಗಿನ್ ಮಾಡಿದಾಗ ನಿಮಗೆ ಪರೀಕ್ಷೆಗೆ ಸಂಬಂಧಿಸಿದ ಕೆಲವು ಮಾಹಿತಿ ಸಿಗುತ್ತದೆ. ಪರೀಕ್ಷೆಯ ದಿನಾಂಕ ಮತ್ತು ಸಮಯವನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು. ಎನ್‌ಐಐಟಿಯ ಪೋರ್ಟಲ್‌ನಲ್ಲಿಯೇ ನೀವು ಪ್ರವೇಶ ಕಾರ್ಡ್ ಪಡೆಯುತ್ತೀರಿ. ನೀವು ಆಯ್ಕೆ ಮಾಡಿದ ದಿನ ಪರೀಕ್ಷೆ ಬರೆಯಬೇಕು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಪರವಾನಗಿ ಸಿಗುತ್ತದೆ. ಆಗ ನೀವು ಆಧಾರ್ ಕಾರ್ಡ್ ಕೇಂದ್ರ ಪ್ರಾರಂಭಿಸಬಹುದು. ಈ ಹಿಂದೆ ಇದಕ್ಕೆ ಸ್ವಲ್ಪ ಶುಲ್ಕವನ್ನು ನೀಡಬೇಕಾಗಿತ್ತು. ಆದ್ರೆ ಸರ್ಕಾರ ಈಗ ಉಚಿತ ಫ್ರಾಂಚೈಸ್ ಅನ್ನು ನೀಡುತ್ತಿದೆ.
ಆಧಾರ್ ಕಾರ್ಡ್ ಕೇಂದ್ರಕ್ಕೆ ಏನೆಲ್ಲ ವಸ್ತು ಬೇಕು? : ಆಧಾರ್ ಕಾರ್ಡ್ ಕೇಂದ್ರ ತೆರೆಯಲು ನಿಮಗೆ ಪ್ರಿಂಟರ್, ಕನಿಷ್ಠ 2 ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್, ವೆಬ್ಕ್ಯಾಂಪ್, ಐರಿಸ್ ಸ್ಕ್ಯಾನರ್ ಯಂತ್ರ ಮತ್ತು ಇಂಟರ್ನೆಟ್ ಹಾಗೂ ಒಂದು ಕ್ಯಾಮೆರಾ ಅಗತ್ಯವಿರುತ್ತದೆ.
ಆಧಾರ್ ಕಾರ್ಡ್ ಫ್ರ್ಯಾಂಚೈಸ್ ಗೆ ವೆಚ್ಚವೆಷ್ಟು? : ಆಧಾರ್ ಕಾರ್ಡ್ ಫ್ರ್ಯಾಂಚೈಸಿ ತೆಗೆದುಕೊಳ್ಳಲು ಸರ್ಕಾರಕ್ಕೆ ನೀವು ಒಂದು ರೂಪಾಯಿ ಕೂಡ ಪಾವತಿಸಬೇಕಾಗಿಲ್ಲ. ಆದ್ರೆ ನೀವು ಬಳಸಿದ ವಸ್ತುಗಳ ಮೇಲೆ ಹೂಡಿಕೆ ಮಾಡಬೇಕಾಗುತ್ತದೆ. ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚವಾಗುತ್ತದೆ.
ಹೂಡಿಕೆ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ!
ಆಧಾರ್ ಕಾರ್ಡ್ ಕೇಂದ್ರದ ಫ್ರ್ಯಾಂಚೈಸಿಯಿಂದ ಆಗುವ ಲಾಭ : ಈಗ 5 ವರ್ಷದೊಳಗಿನ ಮಕ್ಕಳಿಗೂ ಆಧಾರ್ ಕಾರ್ಡ್ ಅವಶ್ಯವಿದೆ. ಹಾಗಾಗಿ ಈ ಕೆಲಸ ನಿಲ್ಲುವಂತಹದ್ದಲ್ಲ. ನೀವು ಆಧಾರ್ ಕೇಂದ್ರ ತೆರೆಯುವ ಮೂಲಕ ತಿಂಗಳಿಗೆ ಕನಿಷ್ಠ 30 ರಿಂದ 40 ಸಾವಿರ ಗಳಿಸಬಹುದು. ಹೆಚ್ಚಿನ ಜನರು ನಿಮ್ಮ ಕೇಂದ್ರದಲ್ಲಿ ಆಧಾರ್ ಕಾರ್ಡ್ ಮಾಡಿಸಿದ್ರೆ ಗಳಿಕೆ ಹೆಚ್ಚಾಗುತ್ತದೆ.