ಗೂಗಲ್ ಪೇ ತನ್ನ ಗ್ರಾಹಕರಿಗೆ ಹಬ್ಬದ ಗಿಫ್ಟ್ ನೀಡಿದೆ. ಹೆಚ್ಚುವರಿ ರಿವಾರ್ಡ್ ಜೊತೆ ಅನೇಕ ಸೌಲಭ್ಯಗಳನ್ನು ಕಂಪನಿ ನೀಡ್ತಿದೆ. ಇದ್ರ ಲಾಭ ಯಾವೆಲ್ಲ ಗ್ರಾಹಕರಿಗೆ ಸಿಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಹಬ್ಬದ ಸೀಸನ್ ಶುರುವಾಗಿದೆ. ಈ ಸಂದರ್ಭದಲ್ಲಿ ಬ್ಯಾಂಕ್ಗಳು ಮತ್ತು ಡಿಜಿಟಲ್ ಪೇಮೆಂಟ್ ಕಂಪನಿಗಳು ಗ್ರಾಹಕರಿಗೆ ಹೊಸ ಆಫರ್ಗಳನ್ನು ನೀಡ್ತಿವೆ. ಇದೀಗ ಗೂಗಲ್‌ ಪೇ (Google Pay) ತನ್ನ Flex ಕ್ರೆಡಿಟ್ ಕಾರ್ಡ್ ರಿವಾರ್ಡ್ ಪ್ರೋಗ್ರಾಂನಲ್ಲಿ ಮಹತ್ವದ ಬದಲಾವಣೆ ಘೋಷಿಸಿದೆ.

ಎಕ್ಸಿಸ್‌ ಬ್ಯಾಂಕ್ (Axis Bank) ಮತ್ತು ಎಸ್‌ ಬಿಐ ಕಾರ್ಡ್ (SBI Card) ಸಹಯೋಗದಲ್ಲಿ ಪರಿಚಯಿಸಿರುವ Flex ಕ್ರೆಡಿಟ್ ಕಾರ್ಡ್ನ ರಿವಾರ್ಡ್ ವ್ಯವಸ್ಥೆಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಪ್ರಯೋಜನಗಳು 2026ರ ಅಕ್ಟೋಬರ್ 16ರಿಂದ ಜಾರಿಗೆ ಬರಲಿವೆ. ಇದರಿಂದ UPI ಪೇಮೆಂಟ್ ಮಾಡುವವರು ಮತ್ತು ದಿನನಿತ್ಯದ ಖರ್ಚುಗಳಿಗೆ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಹೆಚ್ಚುವರಿ ರಿವಾರ್ಡ್ಗಳು ಸಿಗಲಿವೆ.

UPI ಪೇಮೆಂಟ್ಗಳಿಗೆ ಹೆಚ್ಚಿನ ರಿವಾರ್ಡ್

ಫ್ಲೆಕ್ಸ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗೂಗಲ್ ಒನ್ ಸದಸ್ಯರು ಒಂದು ರಿವಾರ್ಡ್ ಸೈಕಲ್ನಲ್ಲಿ 15000ಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು. ಗೂಗಲ್‌ ಒನ್ ಸದಸ್ಯರಾಗಿರುವ ಕಾರ್ಡ್ದಾರರು ಅರ್ಹ ಖರ್ಚುಗಳ ಮೇಲೆ ಶೇಕಡಾ 3.2 ವರೆಗೆ ರಿವಾರ್ಡ್ ಪಡೆಯಲಿದ್ದಾರೆ. ಗೂಗಲ್‌ ಒನ್ ಸದಸ್ಯರಲ್ಲದವರಿಗೆ ಇದೇ ಖರ್ಚಿನ ಮಿತಿಯನ್ನು ದಾಟಿದ ನಂತರ ಅರ್ಹ ವಹಿವಾಟುಗಳ ಮೇಲೆ ಶೇಕಡಾ 1.6 ರಷ್ಟು ರಿವಾರ್ಡ್ ಸಿಗಲಿದೆ. ಈ ರಿವಾರ್ಡ್ಗಳನ್ನುಸ್ಟಾರ್ ರೂಪದಲ್ಲಿ ನೀಡಲಾಗುತ್ತದೆ. ಒಂದು ಸ್ಟಾರ್ ಮೌಲ್ಯ 1 ರೂಪಾಯಿ.

ಆಹಾರ ಮತ್ತು ದಿನಸಿ ಖರೀದಿಗೆ ಹೆಚ್ಚುವರಿ ರಿವಾರ್ಡ್

ಗೂಗಲ್‌ ಒನ್ ಸದಸ್ಯರಿಗೆ ಆಹಾರ ಮತ್ತು ದಿನಸಿ ಖರೀದಿಯ ಮೇಲೂ ಹೆಚ್ಚುವರಿ ಪ್ರಯೋಜನಗಳಿವೆ. ಪ್ರತಿ ರಿವಾರ್ಡ್ ಸೈಕಲ್ನಲ್ಲಿ ಪ್ರಮುಖ ಫುಡ್ ಮತ್ತು ಗ್ರೋಸರಿ ಆ್ಯಪ್ಗಳಲ್ಲಿ 5000 ರವರೆಗಿನ ಅರ್ಹ ಖರ್ಚಿನ ಮೇಲೆ ಶೇಕಡಾ 5 ರಷ್ಟು ಹೆಚ್ಚುವರಿ ರಿವಾರ್ಡ್ ಸಿಗಲಿದೆ. ಇದಲ್ಲದೆ, ವಿದ್ಯುತ್ ಸೇರಿದಂತೆ ಯುಟಿಲಿಟಿ ಬಿಲ್ಗಳು, ಒಟಿಟಿ ಸಬ್ಸ್ಕ್ರಿಪ್ಷನ್ಗಳು ಮತ್ತು ಮೊಬೈಲ್ ರೀಚಾರ್ಜ್ಗಳಂತಹ ಸೇವೆಗಳಿಗೆ 3,000ವರೆಗಿನ ಅರ್ಹ ಖರ್ಚಿನ ಮೇಲೆ ಶೇಕಡಾ 15 ರಷ್ಟು ಹೆಚ್ಚುವರಿ ರಿವಾರ್ಡ್ ಸಿಗಲಿದೆ. ಆದರೆ ಈ ಪ್ರಯೋಜನಗಳಿಗೆ ಸಂಬಂಧಿಸಿದ ಅರ್ಹತೆ ಮತ್ತು ನಿಯಮಗಳನ್ನು ಕಾರ್ಡ್ದಾರರು ಪರಿಶೀಲಿಸುವುದು ಮುಖ್ಯ.

ರೆಫರ್ ಮಾಡಿದ್ರೆ ಸಿಗೋದೆಷ್ಟು?

Flex ಕಾರ್ಡ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ಇದೆ. ಸ್ನೇಹಿತರು ಅಥವಾ ಕುಟುಂಬದ ಸದಸ್ಯರನ್ನು ಈ ಪ್ರೋಗ್ರಾಂಗೆ ರೆಫರ್ ಮಾಡಿದರೆ 1000 ರೂಪಾಯಿ ರಿವಾರ್ಡ್ ಪಡೆಯಬಹುದು. ಯಶಸ್ವಿ ರೆಫರಲ್ಗಳ ಸಂಖ್ಯೆಗೆ ಮಿತಿ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಪ್ರಯೋಜನಕ್ಕೆ ಅನ್ವಯಿಸುವ ಷರತ್ತುಗಳನ್ನು ಪರಿಶೀಲಿಸಬೇಕು.

ಹೊಸದಾಗಿ Flex ಕಾರ್ಡ್ ಪಡೆಯುವ ಗ್ರಾಹಕರಿಗೂ ವೆಲ್ಕಮ್ ರಿವಾರ್ಡ್ ಹೆಚ್ಚಿಸಲಾಗಿದೆ. ಕಾರ್ಡ್ ಪಡೆದ ಮೊದಲ 60 ದಿನಗಳಲ್ಲಿ ಆಯ್ಕೆ ಮಾಡಿದ ಕಾರ್ಡ್ ವೇರಿಯಂಟ್ಗೆ ಅನುಗುಣವಾಗಿ 2,500 ರೂಪಾಯಿವರೆಗಿನ ವೆಲ್ಕಮ್ ಪ್ರಯೋಜನಗಳನ್ನು ಪಡೆಯಬಹುದು.