7th Pay Commission:ಈ ವರ್ಷ ಕೇಂದ್ರ ಸರ್ಕಾರಿ ನೌಕರರ ಡಿಎ ಶೇ.46ಕ್ಕೆ ಹೆಚ್ಚಳ!

ಏಳನೇ ವೇತನ ಆಯೋಗದಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) ಈ ವರ್ಷದ ಮಾರ್ಚ್ ತಿಂಗಳಲ್ಲಿ ಶೇ.42ಕ್ಕೆ ಏರಿಕೆಯಾಗಿದೆ. ಇದು ಜುಲೈನಲ್ಲಿ ಮತ್ತೆ ಏರಿಕೆ ಕಾಣಲಿದ್ದು, ಶೇ.46ಕ್ಕೆ ಹೆಚ್ಚಳವಾಗುವ ನಿರೀಕ್ಷೆಯಿದೆ.
 

7th pay commission central employees may get 46 percent da for july to december period anu

ನವದೆಹಲಿ (ಏ.17): ಕೇಂದ್ರ ಸರ್ಕಾರಿ ನೌಕರರಿಗೆ ಈ ವರ್ಷ ಸರ್ಕಾರ ಒಂದರ ಮೇಲೊಂದರಂತೆ ಶುಭಸುದ್ದಿಗಳನ್ನು ನೀಡುತ್ತಲೇ ಇದೆ. ಕೇಂದ್ರ ಸರ್ಕಾರಿ ನೌಕರರಿಗೆ ಈ ವರ್ಷದ ಮೊದಲ ತುಟ್ಟಿ ಭತ್ಯೆ (ಡಿಎ) ಹೆಚ್ಚಳವನ್ನು ಮಾರ್ಚ್ ನಲ್ಲಿ ಮಾಡಿತ್ತು. ಈ ಹೆಚ್ಚಳ 2023ರ ಜನವರಿಯಿಂದ ಜೂನ್ ತನಕ ಮೊದಲ ಆರು ತಿಂಗಳಿಗೆ ಅನ್ವಯವಾಗುತ್ತದೆ. ಮಾರ್ಚ್ ನಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಶೇ.4ರಷ್ಟು ಏರಿಕೆ ಮಾಡಲಾಗಿದ್ದು, ಶೇ.42ಕ್ಕೆ ತಲುಪಿತ್ತು. ಈ ಪರಿಷ್ಕೃತ ಏರಿಕೆ 2023ರ ಜನವರಿ 1ರಿಂದಲೇ ಅನ್ವಯವಾಗಲಿದೆ. ಈಗ ಎರಡನೇ ಬಾರಿ ಕೂಡ ತುಟ್ಟಿ ಭತ್ಯೆಯಲ್ಲಿ ಶೇ.4ರಷ್ಟು ಏರಿಕೆ ಮಾಡುವ ಸಾಧ್ಯತೆಯಿದೆ.ಇದರಿಂದ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.46ಕ್ಕೆ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ತುಟ್ಟಿ ಭತ್ಯೆಯನ್ನು ಎರಡನೇ ಬಾರಿ ಜುಲೈನಲ್ಲಿ ಏರಿಕೆ ಮಾಡಲಾಗುವುದು. ಇದರಿಂದ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ. ಈ ಏರಿಕೆಯಿಂದ ಸುಮಾರು 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.

ಹಣದುಬ್ಬರ ಹೆಚ್ಚಳ ಹಾಗೂ ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಗಣಿಸಿ ಡಿಎ ಹಾಗೂ ಡಿಆರ್ ಹೆಚ್ಚಳ ಮಾಡಲಾಗುತ್ತದೆ. ಡಿಎ ಪರಿಷ್ಕರಣೆಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಮಾನದಂಡವಾಗಿದ್ದು,ಅದರ ಆಧಾರದಲ್ಲೇ ಪರಿಷ್ಕರಿಸಲಾಗುತ್ತದೆ. ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು (ಡಿಆರ್)  ವರ್ಷದಲ್ಲಿ ಎರಡು ಬಾರಿ ಅಂದರೆ ಜನವರಿ 1 ಮತ್ತು ಜುಲೈ 1 ರಂದು ಪರಿಷ್ಕರಿಸುತ್ತದೆ. ಆದರೆ, ಈ ನಿರ್ಧಾರವನ್ನು ಮಾತ್ರ ಸರ್ಕಾರ ಮಾರ್ಚ್ ಮತ್ತು ಸೆಪ್ಟೆಂಬರ್ ನಲ್ಲಿ ಪ್ರಕಟಿಸುತ್ತದೆ. 

Aadhaar PVC Card: ಕೇವಲ 50ರೂ.ಗೆ ಆನ್ ಲೈನ್ ನಲ್ಲೇ ಆಧಾರ್ ಪಿವಿಸಿ ಕಾರ್ಡ್ ಪಡೆಯಬಹುದು, ಹೇಗೆ?

ಈ ಬಾರಿ ಡಿಎ ಬೇಗ ಸಿಗಲಿದೆ
ಸಾಮಾನ್ಯವಾಗಿ ವರ್ಷದ ಎರಡನೇ ಡಿಎ ಹೆಚ್ಚಳ ಜುಲೈಯಿಂದ ಡಿಸೆಂಬರ್ ತನಕ ಅನ್ವಯಿಸುತ್ತದೆ. ಈ ಕುರಿತ ನಿರ್ಣಯವನ್ನು ಜುಲೈನಲ್ಲಿ ತೆಗೆದುಕೊಂಡರೂ ಹಣ ಬಿಡುಗಡೆ ಮಾಡೋದು ಸಾಮಾನ್ಯವಾಗಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ.ಆದರೆ, ಈ ಬಾರಿ ಆಗಸ್ಟ್ ನಲ್ಲೇ ಡಿಎ ಹಣ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಡಿಎ ವೇತನದ ಭಾಗ
ಡಿಎ ಸರ್ಕಾರಿ ನೌಕರರ ವೇತನದ ಭಾಗವೇ ಆಗಿದೆ. ಹೀಗಾಗಿ ಡಿಎಯಲ್ಲಿ ಬದಲಾವಣೆಯಾದ್ರೆ ಅದು ವೇತನದ ಮೇಲೆ ಕೂಡ ಪ್ರಭಾವ ಬೀರುತ್ತದೆ. ಹಣದುಬ್ಬರ ಹೆಚ್ಚಳವಾದ್ರೆ ಡಿಎಯಲ್ಲಿ ಕೂಡ ಏರಿಕೆ ಮಾಡಲಾಗುತ್ತದೆ. ಗ್ರಾಹಕರ ಬೆಲೆ ಸೂಚ್ಯಂಕದ ಆಧಾರದಲ್ಲಿ ಡಿಎ ಲೆಕ್ಕಾಚಾರ ಮಾಡಲಾಗುತ್ತದೆ.

ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ?
ಒಂದು ವೇಳೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಶೇ.46ರಷ್ಟು ಹೆಚ್ಚಳವಾದ್ರೆ, ಅವರ ವೇತನದಲ್ಲಿ ಕೂಡ ಏರಿಕೆಯಾಗುತ್ತದೆ. ಉದಾಹರಣೆಗೆ ಕೇಂದ್ರ ಸರ್ಕಾರಿ ನೌಕರನೊಬ್ಬನ ವೇತನ 18 ಸಾವಿರ ರೂ.ಇದೆ ಎಂದು ಭಾವಿಸಿ, ಶೇ.42ರಷ್ಟು ಡಿಎ ಹೆಚ್ಚಳವಾದ್ರೆ, ಆತನ ವೇತನದಲ್ಲಿ 7,560ರೂ. ಹೆಚ್ಚಳವಾಗುತ್ತದೆ. ಇನ್ನು ಶೇ.46ರಷ್ಟು ಡಿಎ ಹೆಚ್ಚಳವಾದ್ರೆ 8,280ರೂ. ಏರಿಕೆಯಾಗುತ್ತದೆ. ಅಂದರೆ ಪ್ರತಿ ತಿಂಗಳು ವೇತನದಲ್ಲಿ 720ರೂ.ಹೆಚ್ಚಳವಾಗುತ್ತದೆ.

Generic Aadhaar: ಒಂದು ಲಕ್ಷ ಹೂಡಿಕೆ ಮಾಡಿ ತಿಂಗಳಿಗೆ ಲಕ್ಷಾಂತರ ಗಳಿಸಿ

ಶೇ.17ರಿಂದ ಶೇ.42ಕ್ಕೆ ಡಿಎ ಏರಿಕೆ
ಕೇಂದ್ರ ಸರ್ಕಾರ ದೀರ್ಘ ಕಾಲದ ಬಳಿಕ 2021ರ ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರ ಡಿಎ ಅನ್ನು ಶೇ.17ರಿಂದ ಶೇ.28ಕ್ಕೆ ಏರಿಕೆ ಮಾಡಿತ್ತು.ಇನ್ನು 2021ರ ಅಕ್ಟೋಬರ್ ನಲ್ಲಿ ಮತ್ತೆ ಶೇ.3ರಷ್ಟು ಏರಿಕೆ ಮಾಡಿ ಶೇ.31ಕ್ಕೆ ಹೆಚ್ಚಿಸಿತ್ತು. 2022ರ ಮಾರ್ಚ್ ನಲ್ಲಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ಡಿಎಯಲ್ಲಿ ಶೇ.3ರಷ್ಟು ಹೆಚ್ಚಳ ಮಾಡಿತ್ತು. ಇದರಿಂದ ಡಿಎ ಶೇ.31ರಿಂದ ಶೇ.34ಕ್ಕೆ ಏರಿಕೆಯಾಗಿತ್ತು. ಇದಾದ ಬಳಿಕ ಎರಡು ಬಾರಿ ಡಿಎಯಲ್ಲಿ ತಲಾ ಶೇ.4ರಷ್ಟು ಹೆಚ್ಚಳ ಕಂಡುಬಂದಿದೆ.

Latest Videos
Follow Us:
Download App:
  • android
  • ios