Generic Aadhaar: ಒಂದು ಲಕ್ಷ ಹೂಡಿಕೆ ಮಾಡಿ ತಿಂಗಳಿಗೆ ಲಕ್ಷಾಂತರ ಗಳಿಸಿ
ಹೊಸದಾಗಿ ವ್ಯವಹಾರ ಶುರು ಮಾಡ್ಬೇಕು ಎನ್ನುವವರು ರತನ್ ಟಾಟಾ ಹೂಡಿಕೆ ಮಾಡಿರುವ ಕಂಪನಿಯ ಫ್ರಾಂಚೈಸಿ ತೆಗೆದುಕೊಳ್ಳಬಹುದು. ಕಡಿಮೆ ಹೂಡಿಕೆ ಮಾಡಿ, ತಿಂಗಳಿಗೆ ಕೈತುಂಬ ಹಣ ಸಂಪಾದಿಸುವ ಅವಕಾಶ ಇದ್ರಲ್ಲಿದೆ.
ನೀವು ಒಳ್ಳೆ ಬ್ಯುಸಿನೆಸ್ ಮಾಡಲು ಬಯಸಿದ್ರೆ ನಿಮಗೊಂದು ಸುವರ್ಣಾವಕಾಶವಿದೆ. ಕಡಿಮೆ ಹೂಡಿಕೆ ಮಾಡಿ ನೀವು ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ. ಕೆಲವೊಂದು ವಸ್ತುಗಳಿಗೆ ಸದಾ ಬೇಡಿಕೆಯಿರುತ್ತದೆ. ಅದ್ರಲ್ಲಿ ಔಷಧಿ – ಮಾತ್ರೆ ಮುಖ್ಯವಾಗಿ ಸೇರಿದೆ. ಔಷಧಿ ಮಾರಾಟ ಶುರು ಮಾಡಿದ್ರೆ ನಿಮಗೆ ನಷ್ಟ ಸಾಧ್ಯವಿಲ್ಲ. ಔಷಧಿ ಮಳಿಗೆ ಶುರು ಮಾಡಬೇಕು ಎನ್ನುವವರು ಜನರಿಕ್ ಔಷಧ ಕಂಪನಿ ಜನರಿಕ್ ಆಧಾರ್ ನಲ್ಲಿ ಹೂಡಿಕೆ ಮಾಡಿ ನೀವು ಲಕ್ಷಾಂತರ ರೂಪಾಯಿ ಗಳಿಸಿ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಜನರಿಕ್ ಆಧಾರ್ ಒಂದು ಫಾರ್ಮಸಿ ಬ್ಯುಸಿನೆಸ್ ಆಗಿದೆ. ಇದು ರತನ್ ಟಾಟಾ ಹೂಡಿಕೆ ಮಾಡಿರುವ ಕಂಪನಿಯಾಗಿದೆ. ಆನ್ಲೈನ್ ಹಾಗೂ ಆಫ್ಲೈನ್ ಎರಡರಲ್ಲೂ ನೀವು ಹಣ ಗಳಿಸಬಹುದು. ಇದ್ರ ಫ್ರಾಂಚೈಸಿ ತೆಗೆದುಕೊಳ್ಳುವ ಮೂಲಕ ನೀವು ಹೆಚ್ಚಿನ ಸಂಪಾದನೆ ಮಾಡಬಹುದು. ನಾವಿಂದು ಜನರಿಕ್ ಆಧಾರ್ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಅರ್ಜುನ್ ದೇಶಪಾಂಡೆ ಜನರಿಕ್ ಆಧಾರ್ (Generic Aadhaar) ಸಂಸ್ಥಾಪಕರಾಗಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಇವರು ಜನರಿಕ್ ಆಧಾರನ್ನು ಮೊದಲ ಬಾರಿ ಶುರು ಮಾಡಿದ್ದರು. 18 ರಾಜ್ಯಗಳಲ್ಲಿ 130ಕ್ಕೂ ಹೆಚ್ಚು ನಗರಗಳಲ್ಲಿ ನೀವು ಜನರಿಕ್ ಆಧಾರ್ ಮಳಿಗೆಯನ್ನು ನೋಡಬಹುದಾಗಿದೆ.
ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ನವೀಕರಿಸಬಹುದು? ಹೇಗೆ? ಇಲ್ಲಿದೆ ಮಾಹಿತಿ
ರತನ್ ಟಾಟಾ (Ratan Tata) ಮಾಡಿದ್ದಾರೆ ಹೂಡಿಕೆ : ವಿಶೇಷವೆಂದ್ರೆ ರತನ್ ಟಾಟಾ ಇದ್ರಲ್ಲಿ ಹೂಡಿಕೆ (Investment) ಮಾಡಿದ್ದಾರೆ. ಈ ಕಂಪನಿ ಜನರಿಗೆ ಮಾತ್ರೆ – ಔಷಧಿಗಳ ಮೇಲೆ ಶೇಕಡಾ 80ರಷ್ಟು ರಿಯಾಯಿತಿ ನೀಡುತ್ತದೆ. ಔಷಧಿ ಮಳಿಗೆದಾರರಿಗೆ ಶೇಕಡಾ 40ರಷ್ಟು ಮಾರ್ಜಿನ್ ಸಿಗುತ್ತದೆ. ಸಾಮಾನ್ಯವಾಗಿ ದೊಡ್ಡ ಔಷಧಿ ಕಂಪನಿಗಳು, ಔಷಧಿ ಅಂಗಡಿಯವರಿಗೆ ಶೇಕಡಾ 15 -20ರಷ್ಟು ಮಾರ್ಜಿನ್ ಮಾತ್ರ ನೀಡುತ್ತವೆ. ಕಂಪನಿ 100ಕ್ಕೂ ಹೆಚ್ಚು ಔಷಧಿಗಳನ್ನು ಒದಗಿಸುತ್ತದೆ. ಈಗಾಗಲೇ ಔಷಧಿ ಅಂಗಡಿ ನಡೆಸುತ್ತಿರುವವರಿಗೂ ಜನಟಿಕ್ ಆಧಾರ್ ವ್ಯವಹಾರ ನಡೆಸುತ್ತದೆ. ಹಾಗೆಯೇ ಹೊಸ ಮಳಿಗೆ ಶುರುಮಾಡಲು ಆಸಕ್ತಿಯಿರುವವರಿಗೂ ಅದು ನೆರವು ನೀಡುತ್ತದೆ.
ಜನರಿಕ್ ಆಧಾರ್ ಫ್ರಾಂಚೈಸಿ ಪಡೆಯೋದು ಹೇಗೆ? : ನೀವೂ ಜನರಿಕ್ ಆಧಾರ್ ಕಂಪನಿ ಫ್ರಾಂಚೈಸಿ ಪಡೆಯಲು ಇಚ್ಛಿಸಿದ್ದರೆ ನೀವು ಕಂಪನಿಯ https://genericaadhaar.com/ ಗೆ ಹೋಗಬೇಕು. ಆ ವೆಬ್ಸೈಟ್ ಮುಖಪುಟದಲ್ಲಿ ಬ್ಯುಸಿನೆಸ್ ಅಪಾರ್ಚ್ಯುನುಟಿ ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಸ್ಕ್ರೀನ್ ಮೇಲೆ ಒಂದು ಫಾರ್ಮ್ ಕಾಣಿಸಿಕೊಳ್ಳುತ್ತದೆ. ಆ ಫಾರ್ಮ ನಲ್ಲಿ ನೀವು ಮೊಬೈಲ್ ನಂಬರ್, ಇಮೇಲ್ ಐಡಿ ಸೇರಿದಂತೆ ಅನೇಕ ಮಾಹಿತಿಯನ್ನು ನಮೂದಿಸಬೇಕು. ನಂತ್ರ ನೀವು ಸಬ್ಮಿಟ್ ಮಾಡಬೇಕು.
Akshaya Tritiya : ಒಂದು ಗ್ರಾಂ ಬಂಗಾರ ಖರೀದಿ ಮೊದಲು ಇದು ತಿಳಿದಿರಲಿ
ಫ್ರಾಂಚೈಸಿ ಪಡೆಯಲು ಏನೆಲ್ಲ ಅವಶ್ಯಕ : ಜನರಿಕ್ ಆಧಾರ್ ಫ್ರಾಂಚೈಸಿ, ಈಗಾಗಲೇ ಔಷಧಿ ಮಳಿಗೆ ಹೊಂದಿರುವವರಿಗೆ ಹಾಗೂ ಹೊಸದಾಗಿ ಶುರು ಮಾಡಲು ಬಯಸುವವರಿಗೆ ಸಿಗುತ್ತದೆ. ಜನರಿಕ್ ಆಧಾರ್ ಲೋಗೋ ನಿಮಗೆ ಸಿಗುತ್ತದೆ. ನೀವು ಔಷಧಿ ಮಾರಾಟ ಲೈಸೆನ್ಸ್ ಪಡೆದಿರಬೇಕು. ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿ ಫ್ರಾಂಚೈಸಿ ತೆಗೆದುಕೊಳ್ಳಬೇಕಾಗುತ್ತದೆ.
ಜನರಿಕ್ ಆಧಾರ್ ಫ್ರಾಂಚೈಸಿ (Generic Aadhar Franchise) ತೆಗೆದುಕೊಳ್ಳೋದ್ರಿಂದ ಆಗುವ ಲಾಭ : ಜನರಿಕ್ ಆಧಾರ್ ಮಾತ್ರೆಗಳ ಮೇಲೆ ಶೇಕಡಾ 40ರಷ್ಟು ಮಾರ್ಜಿನ್ ನೀಡುತ್ತದೆ. ಇನ್ನೊಂದು ಇದ್ರ ವಿಶೇಷವೆಂದ್ರೆ ಕಂಪನಿ ಆನ್ಲೈನ್ ನಲ್ಲಿಯೂ ಆರ್ಡರ್ ಪಡೆಯುತ್ತದೆ. ಒಂದ್ವೇಳೆ ಮಾತ್ರೆ ನಿಮ್ಮ ನಗರದಲ್ಲಿರುವವರಿಗೆ ಅವಶ್ಯಕವಿದ್ರೆ ಆ ಆರ್ಡರನ್ನು ನಿಮಗೆ ವರ್ಗಾಯಿಸುತ್ತದೆ. ಕಂಪನಿ ಪ್ರಕಾರ, ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಫ್ರಾಂಚೈಸಿ ತೆಗೆದುಕೊಂಡ ಜನರು ತಿಂಗಳಿಗೆ 8-10 ಲಕ್ಷದವರೆಗೆ ಗಳಿಸುತ್ತಿದ್ದಾರಂತೆ. ಆದ್ರೆ ಈ ಗಳಿಕೆ ನಿಮ್ಮ ನಗರ ಹಾಗೂ ನೀವಿರುವ ಪ್ರದೇಶವನ್ನು ಅವಲಂಬಿಸಿರುತ್ತದೆ.